vice presidential polls : ಸಂಸತ್ತಿನ ಉಪರಾಷ್ಟ್ರಪತಿ ಚುನಾವಣೆ ಮತದಾನ : ಇಂದೇ ಹೊರ ಬೀಳಲಿದೆ ಫಲಿತಾಂಶ

ದೆಹಲಿ : vice presidential polls : ದೇಶದಲ್ಲಿ ರಾಷ್ಟ್ರಪತಿ ಚುನಾವಣೆಯು ಮೊನ್ನೆ ಮೊನ್ನೆಯಷ್ಟೇ ಮುಕ್ತಾಯಗೊಂಡಿದ್ದು ದ್ರೌಪದಿ ಮುರ್ಮು ದೇಶದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಇಂದು ದೇಶದಲ್ಲಿ ಉಪರಾಷ್ಟ್ರಪತಿ ಚುನಾವಣೆ ನಡೆಯುತ್ತಿದ್ದು ಬೆಳಗ್ಗೆ 10 ಗಂಟೆಯಿಂದಲೇ ಸಂಸತ್ತಿನಲ್ಲಿ ಮತಚಲಾವಣೆ ಕಾರ್ಯ ನಡೆಯುತ್ತಿದೆ. ಎನ್​ಡಿಎ ಮೈತ್ರಿ ಕೂಟ ಅಭ್ಯರ್ಥಿಯಾಗಿ ಜಗದೀಪ್​ ಧನಕರ್​ ಹಾಗೂ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಕಾಂಗ್ರೆಸ್​ನ ನಾಯಕಿ ಮಾರ್ಗರೇಟ್​ ಆಳ್ವಾ ನಡುವೆ ಪೈಪೋಟಿ ನಡೆಯುತ್ತಿದೆ. ಸಂಜೆ ಐದು ಗಂಟೆಯವರೆಗೂ ಮತ ಚಲಾವಣೆ ಕಾರ್ಯ ಇರಲಿದ್ದು ಇಂದೇ ಫಲಿತಾಂಶ ಕೂಡ ಹೊರ ಬೀಳಲಿದೆ. ಎನ್​ಡಿಎ ಮೈತ್ರಿ ಕೂಟದ ಅಭ್ಯರ್ಥಿ ಜಗದೀಪ್​ ಧನಕರ್​ ಗೆಲುವು ಬಹುತೇಕ ಪಕ್ಕಾ ಎನ್ನಲಾಗ್ತಿದೆ.

ನೂತನ ಉಪ ರಾಷ್ಟ್ರಪತಿಗಳ ಆಯ್ಕೆಗೆ ಸಂಸತ್ತಿನ ಉಭಯ ಸದನಗಳ ನಾಯಕರು ಮತ ಚಲಾವಣೆ ಮಾಡುತ್ತಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್​​ ಸೇರಿದಂತೆ ವಿವಿಧ ಕೇಂದ್ರ ಸಚಿವರು, ಸಂಸದರು ಮತ ಚಲಾವಣೆ ಮಾಡುತ್ತಿದ್ದಾರೆ.

ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿಯೂ ವಿಪಕ್ಷಗಳಲ್ಲಿ ಒಗ್ಗಟ್ಟಿಲ್ಲದ ಕಾರಣದಿಂದಲೇ ಎನ್​ಡಿಎ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮು ಗೆಲುವು ಮತ್ತಷ್ಟು ಸುಲಭವಾಗಿತ್ತು. ಇದೀಗ ಉಪ ರಾಷ್ಟ್ರಪತಿ ಚುನಾವಣೆ ವಿಚಾರದಲ್ಲಿಯೂ ವಿಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ವಿಪಕ್ಷದ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ನಮಗೆ ಅಸಮಾಧಾನವಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್​ ಆರೋಪಿಸಿದ್ದು ಉಪರಾಷ್ಟ್ರಪತಿ ಚುನಾವಣೆಯ ಮತದಾನದ ಕಣದಿಂದ ದೂರ ಸರಿದಿದೆ.

ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿರುವ ಮಾರ್ಗೆರೆಟ್​​ ಆಳ್ವಾ 80 ವರ್ಷ ಪ್ರಾಯದವರಾಗಿದ್ದು ಕರ್ನಾಟಕ ಮೂಲದವರಾಗಿದ್ದಾರೆ. ರಾಜಸ್ಥಾನ ಹಾಗೂ ಉತ್ತರಾಖಂಡ್​ನಲ್ಲಿ ರಾಜ್ಯಪಾಲೆಯಾಗಿದ್ದ ಮಾರ್ಗರೇಟ್​ ಆಳ್ವಾ ಇಂದು ಉಪರಾಷ್ಟ್ರಪತಿ ಕಣದಲ್ಲಿ ನಿಂತಿದ್ದಾರೆ . ಕಾಂಗ್ರೆಸ್​ ಪಕ್ಷದವರಾದ ಮಾರ್ಗರೇಟ್​ ಆಳ್ವಾರಿಗೆ ಆಮ್​ ಆದ್ಮಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ ಹಾಗೂ ಜಾರ್ಖಂಡ್​ ಮುಕ್ತಿ ಮೋರ್ಚಾ ಸೇರಿದಂತೆ ಅನೇಕ ಪಕ್ಷಗಳು ಬೆಂಬಲ ನೀಡಿವೆ. ಸಮಾಜವಾದಿ ಹಿನ್ನೆಲೆಯನ್ನು ಹೊಂದಿರುವ ಧನಕರ್​ 71 ವರ್ಷ ಪ್ರಾಯದವರಾಗಿದ್ದು ರಾಜಸ್ಥಾನದ ಜಾಟ್​ ಸಮುದಾಯಕ್ಕೆ ಸೇರಿದ್ದಾರೆ. ಎನ್​ಡಿಎ ಅಭ್ಯರ್ಥಿಯಾಗಿರುವ ಧನಕರ್​ಗೆ ಸಂಯುಕ್ತ ಜನತಾ ದಳ, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಎಐಎಡಿಎಂಕೆ ಮತ್ತು ಶಿವಸೇನೆಯಂತಹ ಕೆಲವು ಪ್ರಾದೇಶಿಕ ಪಕ್ಷಗಳೂ ಸಾಥ್​ ನೀಡಿವೆ,

ಇದನ್ನು ಓದಿ : Bommai Tests Covid 19 Positive : ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ಸೋಂಕು ದೃಢ : ದೆಹಲಿ ಪ್ರವಾಸ ರದ್ದು

ಇದನ್ನೂ ಓದಿ : Praveen Nettaru murder case : ಪ್ರಕರಣದ ದಿಕ್ಕು ತಪ್ಪಿಸಲು ಕೇರಳದ ಬೈಕ್​ ಬಳಕೆ ಮಾಡಿದರಾ ಪ್ರವೀಣ್​ ಹಂತಕರು

vice presidential polls on saturday aap trs to support alva as numbers stacked in favour of nda dhankha

Comments are closed.