Rahul Dravid ಬೆಂಗಳೂರು: ಭಾರತಕ್ಕೆ 17 ವರ್ಷಗಳ ನಂತರ ಟಿ20 ವಿಶ್ವಕಪ್ (T20 World Cup) ಗೆಲ್ಲಿಸಿದ ಮಹಾಗುರು ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್. 11 ವರ್ಷಗಳ ನಂತರ ಭಾರತದ ಐಸಿಸಿ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದವರು ನಮ್ಮ ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್.

ಭಾರತ ತಂಡದ ಕೆರಿಬಿಯನ್ ನಾಡಿನಲ್ಲಿ ಟಿ20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡು ಇಂದಿಗೆ 15 ದಿನಗಳು ತುಂಬಿವೆ. ಆದರೆ ಇಲ್ಲಿಯವರೆಗೆ ಕರ್ನಾಟಕದ ಕ್ರಿಕೆಟ್ ಸಾಧಕ ರಾಹುಲ್ ದ್ರಾವಿಡ್ ಅವರಿಗೆ ರಾಜ್ಯ ಸರ್ಕಾರದಿಂದಾಗಲೇ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದಾಗಲೀ ಕನಿಷ್ಠ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆದಿಲ್ಲ.
ದ್ರಾವಿಡ್ ಅವರ ಜೊತೆ ಕರ್ನಾಟಕದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿ (Raghavendra Dvgi) ಕೂಡ ಭಾರತದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೆ ಈ ಇಬ್ಬರನ್ನು ರಾಜ್ಯ ಸರ್ಕಾರ (Karnataka govt) ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆ (Karnataka State Cricket Association- KSCA) ಈವರೆಗೆ ಸನ್ಮಾನಿಸಿಲ್ಲ. ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಮಹಾರಾಷ್ಟ್ರ ಆಟಗಾರರು ಮತ್ತು ಕೋಚಿಂಗ್ ಸ್ಟಾಫ್’ಗೆ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಗೌರವ ಸಲ್ಲಿಸಿದೆ.
ಇದನ್ನೂ ಓದಿ : Rohit Sharma : ತನ್ನ 5 ಕೋಟಿಯನ್ನು ಸಪೋರ್ಟ್ ಸ್ಟಾಫ್’ಗೆ ನೀಡಲು ಮುಂದಾಗಿದ್ದ ರೋಹಿತ್ ಶರ್ಮಾ
ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ತಂಡದ ಮ್ಯಾನೇಜರ್ ಕಾನಡೆ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ವಿಧಾನಸಭೆಗೆ ಕರೆಸಿ ಗೌರವ ಸಲ್ಲಿಸಿದ್ದಾರೆ. ಅಲ್ಲದೆ, ವಿಶ್ವಕಪ್ ತಂಡದಲ್ಲಿದ್ದ ಮಹಾರಾಷ್ಟ್ರ ಆಟಗಾರರು ಮತ್ತು ತಂಡದ ಸಿಬ್ಬಂದಿಗೆ ಒಟ್ಟು 11 ಕೋಟಿ ರೂಪಾಯಿಗಳ ನಗದು ಬಹುಮಾನ ನೀಡಿದ್ದಾರೆ.

ಮತ್ತೊಂದೆಡೆ ಹೈದರಾಬಾದ್’ನ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ತೆಲಂಗಾಣ ಸರ್ಕಾರ ಗೌರವಿಸಿದ್ದು, ಸಿರಾಜ್’ಗೆ ಸರ್ಕಾರಿ ನಿವೇಶನ ಮತ್ತು ಸರ್ಕಾರಿ ಉದ್ಯೋಗ ನೀಡಿದೆ. ಆದರೆ ಕರ್ನಾಟಕ ಸರ್ಕಾರವಾಗಲೀ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಾಗಲೀ ನಮ್ಮ ನಾಡಿನ ದಿಗ್ಗಜನನ್ನು ಈ ಕ್ಷಣದವರೆಗೆ ಗೌರವಿಸುವ ಕೆಲಸ ಮಾಡಿಲ್ಲ. ತಂಡದ ಥ್ರೋಡೌನ್ ಸ್ಪೆಷಲಿಸ್ಟ್, ಉತ್ತರ ಕನ್ನಡದ ಕುಮಟಾದ ರಾಘವೇಂದ್ರ ದಿವಗಿ ಅವರನ್ನಂತೂ ರಾಜ್ಯ ಸರ್ಕಾರ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆ ಮರೆತೇ ಬಿಟ್ಟಿದೆ.
ಇದನ್ನೂ ಓದಿ : Yuvraj Singh: 42ನೇ ವಯಸ್ಸಲ್ಲೂ ಅದೇ ಖದರ್, ಅದೇ ಪವರ್: ಕಾಂಗರೂ ಬೇಟೆಯಾಡಿದ ಯುವರಾಜ !
ಜೂನ್ 29ರಂದು ವೆಸ್ಟ್ ಇಂಡೀಸ್’ನ ಬಾರ್ಬೆಡೋಸ್’ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ರೋಚಕವಾಗಿ ಸೋಲಿಸಿದ್ದ ಭಾರತ 17 ವರ್ಷಗಳ ನಂತರ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು. ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಿಸಿಸಿಐ ಈಗಾಗಲೇ 125 ಕೋಟಿ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಿದೆ. 15 ಮಂದಿ ಆಟಗಾರರಿಗೆ ತಲಾ 5 ಕೋಟಿ ರೂ., ಕೋಚಿಂಗ್ ಸ್ಟಾಫ್’ಗೆ ತಲಾ 2.5 ಕೋಟಿ ರೂ., ಸಹಾಯಕ ಸಿಬ್ಬಂದಿಗೆ ತಲಾ 2 ಕೋಟಿ ರೂ., ಹಾಗೂ ಮೀಸಲು ಆಟಗಾರರಿಗೆ ತಲಾ 1 ಕೋಟಿ ರೂ.ಗಳನ್ನು ನೀಡಲಾಗಿದೆ.
ಇದನ್ನೂ ಓದಿ : James Anderson: ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಪಂದ್ಯಕ್ಕೆ ಪದಾಪರ್ಣೆ ಮಾಡಿದಾಗ ಈಗಿನ ಇಂಗ್ಲೆಂಡ್ ಆಟಗಾರರ ವಯಸ್ಸೆಷ್ಟು ಗೊತ್ತಾ?
Rahul Dravid Why is Karnataka Government and Karnataka State Cricket Association so indifferent towards Rahul Dravid