Rain Restaurant : ನೆದರ್ಲೆಂಡ್ಸ್’ನಲ್ಲಿ ರೆಸ್ಟೋರೆಂಟ್ ಬ್ಯುಸಿನೆಸ್ ಶುರು ಮಾಡಿದ ಸುರೇಶ್ ರೈನಾ

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಎಡಗೈ ಬ್ಯಾಟ್ಸ್’ಮನ್, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ (Suresh Raina), ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. 36 ವರ್ಷದ ಸುರೇಶ್ ರೈನಾ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ (Rain Restaurant) ಹೇಳಿದ್ದರು. ತಮ್ಮ ಆತ್ಮೀಯ ಸ್ನೇಹಿತ ಎಂ.ಎಸ್ ಧೋನಿ ನಿವೃತ್ತಿ ಘೋಷಿಸಿದ ಮರುಕ್ಷಣವೇ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದ್ದರು. ಆದರೆ ಐಪಿಎಲ್’ನಲ್ಲಿ ಆಟ ಮುಂದುವರಿಸಿದ್ದರು. 2021ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸುರೇಶ್ ರೈನಾ ಕೂಡ ಇದ್ರು.

ಆದರೆ 2022ರ ಐಪಿಎಲ್ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿರಲಿಲ್ಲ. ಚೆನ್ನೈ ಅಷ್ಟೇ ಅಲ್ಲದೆ, ಉಳಿದ ಫ್ರಾಂಚೈಸಿಗಳೂ ಕೂಡ ರೈನಾ ಅವರನ್ನು ಖರೀದಿಸಲು ಮುಂದಾಗಿರಲಿಲ್ಲ. ಹೀಗಾಗಿ ಐಪಿಎಲ್’ಗೂ ವಿದಾಯ ಹೇಳಿರುವ ಉತ್ತರ ಪ್ರದೇಶದ ಸುರೇಶ್ ರೈನಾ ವಿದೇಶಿ ಟಿ20, ಟಿ10 ಲೀಗ್’ಗಳಲ್ಲಿ ಆಡುತ್ತಿದ್ದಾರೆ. ಕಳೆದ ಬಾರಿಯ ದುಬೈ ಟಿ10 ಲೀಗ್’ನಲ್ಲಿ ರೈನಾ ಆಡಿದ್ದರು. ಜೊತೆಗೆ ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಕನ್ನಡ ಚಲನಚಿತ್ರ ಕಪ್ (KCC) ಟೂರ್ನಿಯಲ್ಲಿ ಆಡಿದ್ದ ರೈನಾ, ಗಂಗಾ ವಾರಿಯರ್ಸ್ ತಂಡವನ್ನು ಫೈನಲ್’ನಲ್ಲಿ ಗೆಲ್ಲಿಸಿದ್ದರು.

ಇದನ್ನೂ ಓದಿ : Vidwath Kaverappa : ಕೊಡಗಿನ ಹುಡುಗನಿಗೆ 7 ವಿಕೆಟ್, ರೋಚಕ ಘಟ್ಟದಲ್ಲಿ ದುಲೀಪ್ ಟ್ರೋಫಿ ಫೈನಲ್

ಇದನ್ನೂ ಓದಿ : Yashaswi Jaiswal : ಆಡಿದ ಎಲ್ಲಾ ಟೂರ್ನಿಗಳಲ್ಲೂ ಶತಕ, ಯಾರೂ ಮಾಡಲಾಗದ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್’ನಿಂದ ನಿವೃತ್ತಿಯಾಗಿರುವ ಸುರೇಶ್ ರೈನಾ, ಕ್ರಿಕೆಟ್ ಹೊರತಾಗಿ ರೆಸ್ಟೋರೆಂಟ್ ಬ್ಯುಸಿನೆಸ್ ಕೂಡ ನಡೆಸುತ್ತಿದ್ದಾರೆ. ಭಾರತದಲ್ಲಿ ರೆಸ್ಟೋರೆಂಟ್’ಗಳನ್ನು ಹೊಂದಿರುವ ರೈನಾ, ಇದೀಗ ತಮ್ಮ ಉದ್ಯಮ ಸಾಮ್ರಾಜ್ಯವನ್ನು ವಿದೇಶಕ್ಕೂ ವಿಸ್ತರಿಸಿದ್ದಾರೆ. ನೆದರ್ಲೆಂಡ್ಸ್ ರಾಜಧಾನಿ ಆಮ್’ಸ್ಟರ್ಡಮ್’ನಲ್ಲಿ “ರೈನಾ” ಹೆಸರಿನ ರೆಸ್ಟೋರೆಂಟ್ ಆರಂಭಗೊಂಡಿದೆ. ರೆಸ್ಟೋರೆಂಟ್ ಬೋರ್ಡ್ ಮುಂಭಾಗದಲ್ಲಿ ನಿಂತಿರುವ ಸುರೇಶ್ ರೈನಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಭಾರತ ಪರ ಒಟ್ಟು 322 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸುರೇಶ್ ರೈನಾ, 6 ಶತಕಗಳ ಸಹಿತ 7988 ರನ್ ಕಲೆ ಹಾಕಿದ್ದಾರೆ. ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಲಯನ್ಸ್ ಪರ ಆಡಿರುವ ರೈನಾ, ಐಪಿಎಲ್’ನಲ್ಲಿ ಒಟ್ಟು 205 ಪಂದ್ಯಗಳನ್ನಾಡಿದ್ದು, ಒಂದು ಶತಕ ಹಾಗೂ 39 ಅರ್ಧಶತಕಗಳ ಸಹಿತ 32.52ರ ಸರಾಸರಿಯಲ್ಲಿ 5528 ರನ್ ಕಲೆ ಹಾಕಿದ್ದಾರೆ.

Rain Restaurant: Suresh Raina started a restaurant business in the Netherlands

Comments are closed.