Virat Kohli : ವಿಕಿಪೀಡಿಯಾದಲ್ಲೂ ವಿರಾಟ್ ಕೊಹ್ಲಿ ದಾಖಲೆ, ಕಿಂಗ್ ಕೊಹ್ಲಿ ಜನಪ್ರಿಯತೆ ಮುಂದೆ ಧೋನಿಯೂ ಇಲ್ಲ, ಕ್ರಿಕೆಟ್ ದೇವರೂ ಇಲ್ಲ!

ಬೆಂಗಳೂರು: ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಆಧುನಿಕ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್. ವಿಶ್ವದಾಖಲೆಗಳ ಸರದಾರನಾಗಿರುವ ಕಿಂಗ್ ಕೊಹ್ಲಿ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತ್ಯಂತ ವೇಗವಾಗಿ 75 ಶತಕಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ.

ಟೆಸ್ಟ್ ಕ್ರಿಕೆಟ್’ನಲ್ಲಿ 28 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್’ನಲ್ಲಿ 46 ಶತಕ ಹಾಗೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಂದು ಸೆಂಚುರಿ ಬಾರಿಸಿದ್ದಾರೆ. ಬ್ಯಾಟಿಂಗ್ ದಿಗ್ಗಜನಾಗಿರುವ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲದೆ, ಮೈದಾನದ ಹೊರಗೂ ಭಾರೀ ಜನಪ್ರಿಯತೆ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಜನಪ್ರಿಯತೆ ಎಷ್ಟಿದೆ ಎಂಬುದಕ್ಕೆ ಈಗ ಬಿಡುಗಡೆಯಾಗಿರುವ ಇದೊಂದು ಅಂಕಿ ಅಂಶವೇ ಸಾಕ್ಷಿ.

ವಿಕಿಪೀಡಿಯಾ ಪೇಜ್’ನಲ್ಲಿ ಜನ ಅತ್ಯಂತ ಹೆಚ್ಚು ಹುಡುಕಿರುವ (Wikipedia search) ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಜಗತ್ತಿನಲ್ಲೇ ನಂ.1. ವಿರಾಟ್ ಕೊಹ್ಲಿ ಅವರನ್ನು 43.3 ಮಿಲಿಯನ್ ಮಂದಿ ವಿಕಿಪೀಡಿಯಾದಲ್ಲಿ ಸರ್ಚ್ ಮಾಡಿದ್ದಾರೆ. ಅಂದ್ರೆ 4 ಕೋಟಿ 33 ಲಕ್ಷ ಮಂದಿ ವಿರಾಟ್ ಕೊಹ್ಲಿ ಅವರ ಬಗ್ಗೆ ವಿಕಿಪೀಡಿಯಾದಲ್ಲಿ ಹುಡುಕಿದ್ದಾರೆ.

ಇದನ್ನೂ ಓದಿ : Rain Restaurant : ನೆದರ್ಲೆಂಡ್ಸ್’ನಲ್ಲಿ ರೆಸ್ಟೋರೆಂಟ್ ಬ್ಯುಸಿನೆಸ್ ಶುರು ಮಾಡಿದ ಸುರೇಶ್ ರೈನಾ

ಇದನ್ನೂ ಓದಿ : Yashaswi Jaiswal : ಆಡಿದ ಎಲ್ಲಾ ಟೂರ್ನಿಗಳಲ್ಲೂ ಶತಕ, ಯಾರೂ ಮಾಡಲಾಗದ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ಅವರನ್ನು 24.1 ಮಿಲಿಯನ್ ಮಂದಿ ವಿಕಿಪೀಡಿಯಾದಲ್ಲಿ ಹುಡುಕಿದ್ದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು 23.6 ಮಿಲಿಯನ್ ಮಂದಿ ಸರ್ಚ್ ಮಾಡಿದ್ದಾರೆ. ಧೋನಿ ಮತ್ತು ಸಚಿನ್ ಅವರಿಗಿಂತ ವಿಕಿಪೀಡಿಯಾ ಹುಡುಕುವಿಕೆಯಲ್ಲಿ ವಿರಾಟ್ ಕೊಹ್ಲಿ ಅವರೇ ಮುಂದಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ವಿಶ್ವದಾಖಲೆಯನ್ನು ಸರಿಗಟ್ಟಲು ವಿರಾಟ್ ಕೊಹ್ಲಿ ಅವರಿಗೆ ಬೇಕಿರುವುದಿನ್ನು 25 ಶತಕಗಳು ಮಾತ್ರ. ಸಚಿನ್ ತೆಂಡೂಲ್ಕರ್ 664 ಅಂತರಾಷ್ಟ್ರೀಯ ಪಂದ್ಯಗಳಿಂದ 100 ಶತಕಗಳನ್ನು ಬಾರಿಸಿದ್ರೆ, ವಿರಾಟ್ ಕೊಹ್ಲಿ 498 ಅಂತರಾಷ್ಟ್ರೀಯ ಪಂದ್ಯಗಳಿಂದ 75 ಶತಕಗಳನ್ನು ಸಿಡಿಸಿದ್ದಾರೆ.

Virat Kohli: Virat Kohli’s record on Wikipedia, King Kohli’s popularity is not even Dhoni, not even God of Cricket!

Comments are closed.