ಶಾರ್ಜಾ : ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ದದ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.

ಅಂತಿಮ ಹಂತದ ವರೆಗೂ ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.

ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪಂಜಾಬ್ ತಂಡ ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮಾಯಂಕ್ ಅಗರ್ ವಾಲ್ ಭರ್ಜರಿ ಆರಂಭವೊದಗಿಸಿದ್ರು. ಮಾಯಂಕ್ ಅಗರ್ ವಾಲ್ ಬಿರುಸಿನ ಶತಕ ಬಾರಿಸಿದ್ರೆ, ನಾಯಕ ಕೆ.ಎಲ್.ರಾಹುಲ್ ತಾಳ್ಮೆಯ ಅರ್ಧಶತಕ ಬಾರಿಸಿದ್ರು.

ಮಯಾಂಕ್ ಅಗರ್ವಾಲ್ (106 ರನ್, 50 ಎಸೆತ, 10 ಬೌಂಡರಿ, 7 ಸಿಕ್ಸರ್) ಚೊಚ್ಚಲ ಶತಕದಾಟ ಹಾಗೂ ನಾಯಕ ಕೆಎಲ್ ರಾಹುಲ್ (69 ರನ್, 54 ಎಸೆತ, 7 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 2 ವಿಕೆಟ್‌ಗೆ 223 ರನ್ ಪೇರಿಸಿತು.

ಬೃಹತ್ ಮೊತ್ತವನ್ನು ಬೆನ್ನತ್ತಲು ಹೊರಟ ರಾಜಸ್ತಾನ್ ರಾಯಲ್ಸ್ ತಂಡ ಆರಂಭಿಕ ಆಘಾತವನ್ನು ಅನುಭವಿಸಿತ್ತು. ರೋಸ್ ಬಟ್ಲರ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡು ನಿರಾಸೆ ಅನುಭವಿಸಿದ್ರು. ನಂತರ ನಾಯಕ ಸ್ಮಿತ್ ಗೆ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತೆ ತನ್ನ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು.

ಸಂಜು ಸ್ಯಾಮ್ಸನ್ (85 ರನ್, 42 ಎಸೆತ, 4 ಬೌಂಡರಿ, 7 ಸಿಕ್ಸರ್), ನಾಯಕ ಸ್ಟೀವನ್ ಸ್ಮಿತ್ (50 ರನ್,27 ಎಸೆತ, 7 ಬೌಂಡರಿ, 2 ಸಿಕ್ಸರ್) ಬಾರಿಸಿದ್ರು.

ಅಂತಿಮವಾಗಿ ರಾಹುಲ್ ತೆವಾಟಿಯಾ (53 ರನ್, 31 ಎಸೆತ, 7 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನಿಂದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ.