ದ್ವಿತೀಯ ಪಿಯುಸಿ ಆರಂಭಕ್ಕೆ ಸಿದ್ದತೆ : ಈ ಬಾರಿ ಶೇ.40 ರಷ್ಟು ಪಠ್ಯ ಕಡಿತ !

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿದೆ. ಈ ನಡುವಲ್ಲೇ ದ್ವಿತೀಯ ಪಿಯುಸಿ ತರಗತಿಗಳನ್ನು ನವೆಂಬರ್ 1ರಿಂದ ಆರಂಭವಾಗಲಿದೆ. ಈ ಬಾರಿ ತಡವಾಗಿ ಶೈಕ್ಷಣಿಕ ವರ್ಷ ಆರಂಭವಾಗುವ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುಮಾರು ಶೇ. 40ರಷ್ಟು ಪಠ್ಯಗಳನ್ನು ಕಡಿತಗೊಳಿಸಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿಲ್ಲ. ಈ ನಡುವಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಪ್ರಮುಖವಾಗಿ ಕೇಂದ್ರ ಸರಕಾರ ಪದವಿ ತರಗತಿಗಳನ್ನು ನವೆಂಬರ್ 1ರಿಂದಲೇ ಆರಂಭಿಸುವ ಕುರಿತು ಸಾಧ್ಯತಾ ವೇಳಾಪಟ್ಟಿಯೊಂದನ್ನು ಪ್ರಕಟಿಸಿದೆ. ಆದರೆ ಖಚಿತವಾಗಿ ಯಾವಾಗಿಂದ ಶಾಲೆ ಆರಂಭವಾಗುತ್ತೆ ಅನ್ನೋ ಬಗ್ಗೆ ಖಚಿತವಾಗಿ ಹೇಳಿಲ್ಲ. ಮಾತ್ರವಲ್ಲ ಯಾವುದೇ ಮಾರ್ಗಸೂಚಿಗಳನ್ನೂ ಪ್ರಕಟಿಸಿಲ್ಲ.

ಈ ನಡುವಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಆರಂಭಿಕ ಹಂತದಲ್ಲಿ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಮುಂದಾಗಿದೆ. ಆದರೆ ಜೂನ್ ತಿಂಗಳಲ್ಲಿ ಆರಂಭವಾಗಬೇಕಾಗಿದ್ದ ಶೈಕ್ಷಣಿಕ ವರ್ಷ ಇನ್ನೂ ಆರಂಭವಾಗಿಲ್ಲ. ಈಗಾಗಲೇ 4 ತಿಂಗಳ ಕಾಲ ಶೈಕ್ಷಣಿಕ ಚಟುವಟಿಕೆ ವಿಳಂಭವಾಗಿದೆ. ಹೀಗಾಗಿ ಉಳಿದ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪಠ್ಯಗಳ ಕಡಿತಕ್ಕೆ ಮುಂದಾಗಿದೆ.

ಕೇಂದ್ರ ಸರಕಾರದ ಸೂಚನೆಯ ಮೇರೆಗೆ ವಿಷಯ ತಜ್ಞರು ಹಾಗೂ ಎನ್ ಸಿಆರ್ ಟಿ ಸದಸ್ಯರ ಸಮಿತಿ ಪ್ರತೀ ವಿಷಯದಲ್ಲಿಯೂ ಶೇ.40 ರ ಪಠ್ಯಕ್ರಮ ಕಡಿತಕ್ಕೆ ಶಿಫಾರಸ್ಸು ಮಾಡಿದೆ. ಅದರಂತೆ ಪಠ್ಯಕ್ರಮವನ್ನು ಈಗಾಗಲೇ ಕಡಿತಗೊಳಿಸಲಾಗಿದೆ.ಅನಗತ್ಯವಾಗಿರುವ ಪಾಠ ಗಳನ್ನು ಈಗಾಗಲೇ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೈಬಿಡಲಾಗಿದೆ.

ನವೆಂಬರ್ ನಿಂದಲೂ ಪದವಿ ಪೂರ್ವ ಕಾಲೇಜುಗಳು ಆರಂಭವಾದರೂ ಕೂಡ ಕೇವಲ 5 ತಿಂಗಳುಗಳ ಕಾಲವಷ್ಟೇ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಈ ಅವಧಿಯಲ್ಲಿ ಎಲ್ಲಾ ಪಠ್ಯಗಳನ್ನು ಪೂರ್ಣಗೊಳಿಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಇಲಾಖೆ ಪಠ್ಯ ಕಡಿತಗೊಳಿಸಿದೆ.


Leave A Reply

Your email address will not be published.