ದುಬೈ: (Ramiz Raja) ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತಂಡ 23 ರನ್’ಗಳಿಂದ ಸೋಲು ಕಂಡು ನಿರಾಸೆ ಅನುಭವಿಸಿದೆ. ಪಾಕಿಸ್ತಾನ ಪಂದ್ಯ ಸೋತ ಹತಾಶೆ ಆಟಗಾರರಿಗಷ್ಟೇ ಅಲ್ಲ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (Pakistan Cricket Board – PCB) ಅಧ್ಯಕ್ಷ ರಮೀಜ್ ರಾಜಾ (Ramiz Raja) ಅವರಲ್ಲೂ ಎದ್ದು ಕಾಣುತ್ತಿತ್ತು. ಫೈನಲ್ ಪಂದ್ಯ (Asia Cup Final ) ವೀಕ್ಷಿಸಲು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಗಮಿಸಿದ್ದ ರಮೀಜ್ ರಾಜಾ ಪಂದ್ಯದ ನಂತರ ಭಾರತೀಯ ಪತ್ರಕರ್ತನೊಬ್ಬನ ಫೋನ್ ಕಸಿದುಕೊಂಡ ಘಟನೆ ನಡೆದಿದೆ.
ಫೈನಲ್ ಪಂದ್ಯ ಮುಗಿದ ಬೆನ್ನಲ್ಲೇ ಕ್ರೀಡಾಂಗಣದಿಂದ ಹೊರಟ ರಮೀಜ್ ರಾಜಾ ಅವರನ್ನು ಕೆಲ ಪತ್ರಕರ್ತರು ಮುತ್ತಿಕೊಂಡರು. ಫೈನಲ್ ಸೋಲಿನ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಭಾರತೀಯ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆ ರಮೀಜ್ ರಾಜಾ ಅವರನ್ನು ಕೆರಳಿಸಿತು. ಕೆರಳಿದ ರಮೀಜ್ ಆ ಪತ್ರಕರ್ತನ ಫೋನ್ ಕಸಿದುಕೊಂಡಿದ್ದಾರೆ.
क्या मेरा सवाल ग़लत था – क्या पाकिस्तान के फ़ैन नाखुश नहीं है – ये बहुत ग़लत था एक बोर्ड के चेयरमैन के रूप में – आपको मेरा फ़ोन नहीं छीनना चाहिये था – that’s not right Mr Chairman Taking my phone was not right @TheRealPCB @iramizraja #PAKvSL #SLvsPAK pic.twitter.com/tzio5cJvbG
— रोहित जुगलान Rohit Juglan (@rohitjuglan) September 11, 2022
ರಮೀಜ್ ರಾಜಾ ಹಾಗೂ ಭಾರತೀಯ ಪತ್ರಕರ್ತನ ಮಧ್ಯೆ ನಡೆದ ಸಂಭಾಷಣೆ ಇಲ್ಲಿದೆ.
ಪತ್ರಕರ್ತ: ಪಾಕಿಸ್ತಾನ ಫೈನಲ್ ಸೋತಿರುವುದರಿಂದ ಪಾಕ್ ಕ್ರಿಕೆಟ್ ಪ್ರಿಯರಿಗೆ ಬೇಸರವಾಗಿರುತ್ತದೆ. ಅವರಿಗೆ ನೀವು ಏನು ಹೇಳಲು ಬಯಸುತ್ತೀರಿ?
ರಮೀಜ್ ರಾಜಾ: ನೀನು ಖಂಡಿತಾ ಭಾರತದ ಪತ್ರಕರ್ತ. ಪಾಕಿಸ್ತಾನ ಸೋತಿರುವುದರಿಂದ ನಿಮ್ಮ ಜನರು ಖಂಡಿತಾ ಖುಷಿ ಪಟ್ಟಿರುತ್ತಾರೆ.
ಪತ್ರಕರ್ತ: ಇಲ್ಲ, ನಮಗೆ ಯಾವುದೇ ಖುಷಿಯಿಲ್ಲ.
ರಮೀಜ್ ರಾಜಾ: ನೀನು ಯಾವ ಜನರ ಬಗ್ಗೆ ಪ್ರಶ್ನಿಸುತ್ತಿದ್ದೀಯಾ?
ಪತ್ರಕರ್ತ: ಪಾಕಿಸ್ತಾನ ತಂಡದ ಅಭಿಮಾನಿಗಳು ಕಣ್ಣೀರು ಹಾಕುತ್ತಾ ಕ್ರೀಡಾಂಗಣದಿಂದ ಹೊರ ಹೋಗುತ್ತಿದ್ದದ್ದನ್ನು ನಾನು ನೋಡಿದ್ದೇನೆ. ಹೀಗಾಗಿ ನಿಮಗೆ ಪ್ರಶ್ನೆ ಕೇಳಿದ್ದೇನೆ. ಇದರಲ್ಲೇನಾದರೂ ತಪ್ಪಿದೆಯೇ?
ರಮೀಜ್ ರಾಜಾ: ನೀನು ಎಲ್ಲಾ ಜನರನ್ನು ಒಂದೇ ದೃಷ್ಠಿಯಿಂದ ನೋಡುತ್ತಿದ್ದೀಯಾ..
ಈ ಸಂಭಾಷಣೆಯನ್ನು ತನ್ನ ಮೊಬೈಲ್’ನಲ್ಲಿ ಚಿತ್ರೀಕರಿಸುತ್ತಿದ್ದ ಭಾರತೀಯ ಪತ್ರಕರ್ತನ ಫೋನನ್ನು ಕಸಿದುಕೊಂಡ ರಮೀಜ್ ರಾಜಾ, ನಂತರ ವಾಪಸ್ ಕೊಟ್ಟಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 23 ರನ್’ಗಳಿಂದ ಸೋಲು ಕಂಡಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ಭನುಕ ರಾಜಪಕ್ಸೆ ಬಾರಿಸಿದ ಅಬ್ಬರದ ಅಜೇಯ 71 ರನ್’ಗಳ ನೆರವಿನಿಂದ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ, ಶ್ರೀಲಂಕಾ ಬೌಲರ್’ಗಳ ಕರಾರುವಾಕ್ ದಾಳಿಗೆ ತತ್ತರಿಸಿ 20 ಓವರ್’ಗಳಲ್ಲಿ 147 ರನ್ನಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ : Veda Krishnamurthy Engagement : ವೇದಾ Loves ಅರ್ಜುನ, ಕರ್ನಾಟಕದ ಕ್ರಿಕೆಟಿಗನ ಜೊತೆ ವೇದಾ ಕೃಷ್ಣಮೂರ್ತಿ ನಿಶ್ಚಿತಾರ್ಥ
Ramiz Raja Snatches Indian Journo’s Phone After PAK Lose Asia Cup Final : watch