Milk Rate Increase : ನಂದಿನಿ ತುಪ್ಪ 30, ಹಾಲಿನ ದರ 3 ರೂಪಾಯಿ ಹೆಚ್ಚಳ ಸಾಧ್ಯತೆ

ಬೆಂಗಳೂರು : (Nandini Ghee Milk Rate Increased) ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (KMF) ಗ್ರಾಹಕರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ನಂದಿನಿ ಬ್ರ್ಯಾಂಡ್‌ ತುಪ್ಪದ ಬೆಲೆಯನ್ನು 30 ರೂಪಾಯಿ ಹೆಚ್ಚಳ ಮಾಡಿದ್ದು, ಇದರ ಬೆನ್ನಲ್ಲೇ ಹಾಲಿನ ದರ ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡಲು ಸಿದ್ದತೆ ನಡೆಸಿದೆ. ಬೆಲೆ ಹೆಚ್ಚಳ ಮಾಡುವಂತೆ ಕೆಎಂಎಫ್‌ನ ೧೪ ಜಿಲ್ಲೆಗಳ ಒಕ್ಕೂಟಗಳು ನಿರ್ಣಯವನ್ನು ಕೈಗೊಂಡಿವೆ. ಅಲ್ಲದೇ ರಾಜ್ಯ ಸರಕಾರಕ್ಕೆ ಅನುಮೋದನೆಗೆ ಕಳುಹಿಸಿದರೆ. ಒಂದೊಮ್ಮೆ ರಾಜ್ಯ ಸರಕಾರ ಅನುಮತಿ ನೀಡದೇ ಇದ್ರೂ ಬೆಲೆ ಏರಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕಳೆದ 8 ತಿಂಗಳಿನಿಂದ ಕರ್ನಾಟಕದ ಹಾಲು ಉತ್ಫಾದಕರ ಮಹಾಮಂಡಲವು ನಂದಿನಿ ಹಾಲಿನ ಬೆಲೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದೆ. ಆದರೆ ಸರಕಾರ ಕೆಎಂಎಫ್‌ ಮನವಿಗೆ ಯಾವುದೆ ಸ್ಫಂದನೆ ನೀಡಿಲ್ಲ. ಈ ಕಾರಣದಿಂದಾಗಿ(KMF) ಕೆಎಂಎಫ್‌ ತನ್ನ ಅಧಿಕಾರವನ್ನು ಬಳಸಿಕೊಂಡು ಹಾಲಿನ ದರ ಹೆಚ್ಚಿಸಲು ತಿರ್ಮಾನಕೈಗೊಂಡಿದೆ. ಕೆಎಂಎಫ್‌ ಯೋಜನೆಗಳಿಗೆ ರಾಜ್ಯ ಸರಕಾರ ಆರ್ಥಿಕ ನೆರವು ನೀಡುತ್ತಲೇ ಬಂದಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಸಂದರ್ಭದಲ್ಲಿ ಕೆಎಂಎಫ್‌ ರಾಜ್ಯ ಸರಕಾರದ ಅನುಮತಿಯನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಈ ಬಾರಿ ರಾಜ್ಯ ಸರಕಾರ ಹಾಲು, ತುಪ್ಪದ ಬೆಲೆ ಏರಿಕೆಗೆ ಮನಸ್ಸು ಮಾಡುತ್ತಿಲ್ಲ. ಇದೇ ಕಾರಣಕ್ಕೆ ಕೆಎಂಎಫ್‌ ಮಂಡಳಿ ಒತ್ತಡಕ್ಕೆ ಮಣಿದು (KMF)ಕೆಎಂಎಫ್‌ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ನಡೆಸಲಾಯಿತು. ಈ ಸಭೆಯಲ್ಲಿ14 ಜೆಲ್ಲೆಯ ಸರ್ವಾನುಮತದ ಮೆರೆಗೆ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ 160 ಕೋಟಿ ಕಲೆಕ್ಷನ್ ಬಾಚಿದ ಬ್ರಹ್ಮಾಸ್ತ್ರ

ಇದನ್ನೂ ಓದಿ: ಸ್ಪೋರ್ಟ್ಸ್‌ ಕೋಟಾದ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪಶ್ಚಿಮ ರೇಲ್ವೇ

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ ಇಂದು ಅಂತಿಮ ತೀರ್ಪು

ಕಳೆದ ಒಂದು ತಿಂಗಳ ಅವಧಿಯಲ್ಲಿ ತುಪ್ಪದ ಬೆಲೆಯಲ್ಲಿ ಬರೋಬ್ಬರಿ 30 ರೂಪಾಯಿ ಏರಿಕೆ ಮಾಡಲಾಗಿದೆ. ಅಗಸ್ಟ್‌ ತಿಂಗಳಿನಲ್ಲಿ ಒಂದು ಲೀಟರ್‌ ತುಪ್ಪದ ಬೆಲೆ 450 ರೂಪಾಯಿ ಇದ್ದು, ಇದೀಗ 518 ರೂಪಾಯಿಗೆ ಏರಿಕೆಯಾಗಿದೆ. ಆದರೆ ಹೊಸ ಪರಿಷ್ಕೃತ ಬೆಲೆಯಂತೆ ಒಂದು ಲೀಟರ್‌ ತುಪ್ಪದ ಬೆಲೆ 570 ರೂಪಾಯಿಗೆ ಏರಿಕೆಯಾಗಲಿದೆ. ಸ್ಯಾಶೆ ರೂಪದಲ್ಲಿ ಸಿಗುವ ತುಪ್ಪ ಒಂದು ಲೀಟರ್‌ಗೆ 570 ರೂಪಾಯಿ ಇದ್ರೆ, ಪೆಟ್‌ ಜಾರ್‌ ದರ 590 ರೂಪಾಯಿಗೆ ಏರಿಕೆ ಕಾಣಲಿದೆ. ಐದು ಲೀಟರ್‌ ತುಪ್ಪ 2,637.61 ರೂಪಾಯಿ ಇದ್ದು, 2,875 ರೂಪಾಯಿಗೆ ಏರಿಕೆಯಾಗಲಿದೆ. ಜೊತೆಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ಹೇರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಾಕಷ್ಟು ಹೊಡೆತ ಬೀಳುವುದು ಗ್ಯಾರಂಟಿ.

ಇನ್ನೊಂದಡೆಯಲ್ಲಿ ಹಾಲಿನ ದರ ಏರಿಕೆಗೆ ಕೂಡ ಕೆಎಂಎಫ್‌ ಮುಂದಾಗಿದೆ. ಕೆಎಂಎಫ್‌ ಹಾಲಿನ ದರದಲ್ಲಿ 5 ರೂಪಾಯಿ ಏರಿಕೆ ಮಾಡುವಂತೆ ರಾಜ್ಯ ಸರಕಾರಕ್ಕೆ ಮನವಿಯನ್ನು ಮಾಡಿದೆ. ರಾಜ್ಯ ಸರಕಾರ ಒಪ್ಪಿಗೆ ನೀಡದೇ ಇದ್ರೂ ಕೂಡ ಕೆಎಂಎಫ್‌ ಹಾಲಿನ ದರದಲ್ಲಿ ಏರಿಕೆಯನ್ನು ಮಾಡಿದ್ರೆ ಹಾಲು ಇನ್ನಷ್ಟು ದುಬಾರಿಯಾಗಲಿದೆ.

KMF Increased Nandini Ghee And Milk Rate in Karnataka

Comments are closed.