ಬೆಂಗಳೂರು: ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ (India Tour of Ireland) ಮಹಾರಾಷ್ಟ್ರದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ರಾಹುಲ್ ತ್ರಿಪಾಠಿ (Rahul Tripathi) ಸ್ಥಾನ ಪಡೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ (IPL 2022) ತೋರಿದ ಉತ್ತಮ ಪ್ರದರ್ಶನ 31 ವರ್ಷದ ರಾಹುಲ್ ತ್ರಿಪಾಠಿಗೆ ಟೀಮ್ ಇಂಡಿಯಾ (Indian Cricket Team) ಬಾಗಿಲು ತೆರೆಯುವಂತೆ ಮಾಡಿದೆ. ಈ ಬಾರಿಯ ಐಪಿಎಲ್’ನಲ್ಲಿ ಆಡಿದ 14 ಪಂದ್ಯಗಳಿಂದ 158ರ ಉತ್ತಮ ಸ್ಟ್ರೈಕ್”ರೇಟ್”ನಲ್ಲಿ 413 ರನ್ ಗಳಿಸಿದ್ದರು.

ಹಾಗಾದ್ರೆ ಈ ರಾಹುಲ್ ತ್ರಿಪಾಠಿ ಯಾರು? ಮಹಾರಾಷ್ಟ್ರದ ಈ ಕ್ರಿಕೆಟಿಗನ ಹಿಂದೊಂದು ಕುತೂಹಲಕಾರಿ ಕಥೆಯಿದೆ. ರಾಹುಲ್ ತ್ರಿಪಾಠಿ ಹುಟ್ಟಿದ್ದು ಧೋನಿ ಜನ್ಮಭೂಮಿ ಜಾರ್ಖಂಡ್’ ನ ರಾಂಚಿಯಲ್ಲಿ. ಬೆಳೆದದ್ದು ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ. ಕ್ರಿಕೆಟ್ ಆಡಿದ್ದ ಮಹಾರಾಷ್ಟ್ರದಲ್ಲಿ. ರಾಹುಲ್ ತ್ರಿಪಾಠಿಯ ತಂದೆ ಅಜಯ್ ತ್ರಿಪಾಠಿ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದವರು. ಅಷ್ಟೇ ಅಲ್ಲ, ಉತ್ತರ ಪ್ರದೇಶ ಪರ ಜ್ಯೂನಿಯರ್ ಕ್ರಿಕೆಟ್ ಕೂಡ ಆಡಿದ್ದಾರೆ. ತಂದೆ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಬಾಲ್ಯದ ಕೆಲ ದಿನಗಳನ್ನು ರಾಹುಲ್ ತ್ರಿಪಾಠಿ, ಶ್ರೀನಗರದಲ್ಲಿ ಕಳೆದಿದ್ದರು.

2017ರ ಐಪಿಎಲ್’ನಲ್ಲಿ ರೈಸಿಂಗ್ ಪುಣೆ ಸೂಪರ್’ಜೈಂಟ್ಸ್ ತಂಡದ ಪರ ಆಡುತ್ತಿದ್ದಾಗ ರಾಹುಲ್ ತ್ರಿಪಾಠಿ ಪ್ರತಿಭೆಯನ್ನು ಗುರುತಿಸಿದ್ದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್. ಆಗ ಪುಣೆ ತಂಡದ ನಾಯಕರಾಗಿದ್ದ ಸ್ಮಿತ್, ತ್ರಿಪಾಠಿಗೆ ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿ ಬಡ್ತಿ ನೀಡಿದ್ದರು. ಅಲ್ಲಿಂದ ರಾಹುಲ್ ತ್ರಿಪಾಠಿ ಸಿಕ್ಕ ಅವಕಾಶ ಗಳನ್ನು ಬಳಸಿಕೊಳ್ಳುತ್ತಾ ಈಗ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಐಪಿಎಲ್”ನಲ್ಲಿ ಸನ್’ರೈಸರ್ಸ್ ಹೈದರಾಬಾದ್ ಪರ ಆಡುವ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದ ತ್ರಿಪಾಠಿ, ಅಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.

ದೇಶೀಯ ಕ್ರಿಕೆಟ್”ನಲ್ಲಿ ರಾಹುಲ್ ತ್ರಿಪಾಠಿ (Rahul Tripathi) ಸಾಧನೆ
ಪ್ರಥಮ ದರ್ಜೆ ಕ್ರಿಕೆಟ್
ಪಂದ್ಯ: 47
ರನ್: 2,540
ಸರಾಸರಿ: 33.86
ಶತಕ: 07
ಲಿಸ್ಟ್ ಎ ಕ್ರಿಕೆಟ್
ಪಂದ್ಯ: 43
ರನ್: 1,209
ಸರಾಸರಿ: 31.00
ಶತಕ: 01

ಟಿ20 ಕ್ರಿಕೆಟ್
ಪಂದ್ಯ: 118
ರನ್: 2,268
ಎದುರಿಸಿದ ಎಸೆತ: 1,961
ಸ್ಟ್ರೈಕ್”ರೇಟ್: 134.01
ಅರ್ಧಶತಕ: 16
ಇದನ್ನೂ ಓದಿ : IPL vs PSL : ಐಪಿಎಲ್ 115.5 ಕೋಟಿ, ಪಿಎಸ್ಎಲ್ ಜಸ್ಟ್ 2.76 ಕೋಟಿ : ಐಪಿಎಲ್ ಮುಂದೆ ಲೆಕ್ಕಕ್ಕೇ ಇಲ್ಲ ಪಾಕಿಸ್ತಾನ್ ಸೂಪರ್ ಲೀಗ್
ಇದನ್ನೂ ಓದಿ : ರಣಜಿ ಟ್ರೋಫಿಯಲ್ಲಿ ಭರ್ಜರಿ ಶತಕ ಬಾರಿಸಿದ ಆರ್‌ಸಿಬಿ ಸ್ಟಾರ್
Ranchi To Jammu To Maharashtra; The son of an Army officer who is this Rahul Tripathi