Ranji Trophy : ರಣಜಿ ಟ್ರೋಫಿಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದೆ. ಮಯಾಂಕ್ ಅಗರ್ವಾಲ್ (Mayank Agarwal) ಕರ್ನಾಟಕ ತಂಡವನ್ನು (Karnataka Ranji Team) ಮುನ್ನೆಡೆಸಲಿದ್ದಾರೆ. ಕೆಎಲ್ ರಾಹುಲ್, ವೇಗಿ ಪ್ರಸಿದ್ದಿ ಕೃಷ್ಭ ಅವರು ಅಲಭ್ಯರಾಗಿದ್ದಾರೆ. ಉಳಿದಂತೆ ಖ್ಯಾತ ಆಟಗಾರರಾದ ಅಭಿನವ್ ಮನೋಹರ್, ಜಗದೀಶ್ ಸುಚಿತ್, ಕೆ.ಗೌತಮ್ ಅವರಿಗೆ ಕೋಕ್ ನೀಡಲಾಗಿದೆ.
ಮುಂಬರುವ ರಣಜಿ ಟ್ರೋಫಿಗಾಗಿ ಪಂಜಾಬ್ ಮತ್ತು ಗುಜರಾತ್ ವಿರುದ್ದದ ಪಂದ್ಯಕ್ಕಾಗಿ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ನಿಕಿನ್ ಜೋಸ್ ಉಪನಾಯಕರಾಗಿದ್ರೆ, ಮನೀಶ್ ಪಾಂಡೆ, ಶುಭಾಂಗ್ ಹೆಗಡೆ ಸ್ಥಾನ ಪಡೆದುಕೊಂಡಿದ್ದಾರೆ.

ಈ ಬಾರಿ ಹೊಸ ಮುಖಗಳಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಆದರೆ ಅನುಭವಿ ಅಂತರಾಷ್ಟ್ರೀಯ ಆಟಗಾರ ಕೆ.ಗೌತಮ್‌ಗೆ ಕೋಕ್ ಕೊಟ್ಟಿರುವ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ರಣಜಿ ಟ್ರೋಫಿಯಲ್ಲಿ ಕೆ.ಗೌತಮ್ ಅತೀ ಹೆಚ್ಚು ವಿಕೆಟ್ ಪಡೆದುಕೊಂಡಿದ್ದರು. 31 ವಿಕೆಟ್ ಪಡೆಯುವ ಮೂಲಕ ಈ ಬಾರಿಯೂ ತಂಡದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ದರು.
ಇದನ್ನೂ ಓದಿ : ಐಪಿಎಲ್ 2024 : ಹಾರ್ದಿಕ್ ಪಾಂಡ್ಯ ಔಟ್ : ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ನಾಯಕ
ಜೆ. ಅಭಿರಾಮ್ ನೇತೃತ್ವದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಪುರುಷರ ಆಯ್ಕೆ ಸಮಿತಿಯು ಯುವ ಪ್ರತಿಭೆಗಳಿಗೆ ಅವಕಾಶ ನೀಡಿರುವುದಾಗಿ ಹೇಳಿಕೊಂಡಿದೆ. ಆದರೆ ಜಗದೀಶ್ ಸುಚಿತ್, ಅಭಿನವ್ ಮಹೋಹರ್ ಅವರಿಗೂ ಕೂಡ ಸ್ಥಾನ ದೊರಕಿಲ್ಲ. ಇನ್ನು ಶುಭಾಂಗ್ ಹೆಗಡೆ ಜೊಗೆತೆ ಆಫ್ ಸ್ಪಿನ್ನರ್ ಕೆ.ಶಶಿಕುಮಾರ್ ಅವರು ಸ್ಥಾನ ಪಡೆದಿದ್ದಾರೆ.
ಇನ್ನು ವಿಕೆಟ್ ಕೀಪಿಂಗ್ ವಿಭಾಗದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಸುಜಯ್ ಸಾತೇರಿ ಬಿ.ಆರ್. ಶರತ್ ಆಯ್ಕೆಯಾಗಿದ್ದಾರೆ. ಶರತ್ ಶ್ರೀನಿವಾಸ್ ಅವರು ವಿಕೆಟ್ ಕೀಪಿಂಗ್‌ನಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಭಾರತ ಏಕದಿನ ತಂಡದ ನಾಯಕ ಕೆ.ಎಲ್.ರಾಹುಲ್ ಹಾಗೂ ವೇಗಿ ಪ್ರಸಿದ್ದ ಕೃಷ್ಣ ಅವರು ರಣಜಿ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಇದನ್ನೂ ಓದಿ : ಸಿಎಸ್‌ಕೆ ತಂಡಕ್ಕೆ ನಾಯಕ ಯಾರು ? ಧೋನಿ ವಿಚಾರದಲ್ಲಿ CSK CEO ಕೊಟ್ರು ಗುಡ್‌ನ್ಯೂಸ್
ರಣಜಿ ಟ್ರೋಫಿ ಕರ್ನಾಟಕ ತಂಡ :
ಮಯಾಂಕ್ ಅಗರ್ವಾಲ್ (ನಾಯಕ), ಆರ್. ಸಮರ್ಥ್, ದೇವದತ್ ಪಡಿಕ್ಕಲ್, ನಿಕಿನ್ ಜೋಸ್ (ಉಪನಾಯಕ), ಮನೀಶ್ ಪಾಂಡೆ, ಶುಭಾಂಗ್ ಹೆಗ್ಡೆ, ಶರತ್ ಶ್ರೀನಿವಾಸ್, ವಿ. ವೈಶಾಕ್, ವಿ. ಕೌಶಿಕ್, ವಿದ್ವತ್ ಕಾವೇರಪ್ಪ, ಕೆ.ಶಶಿಕುಮಾರ್, ಸುಜಯ್ ಸಾತೇರಿ, ಡಿ.ನಿಶ್ಚಲ್, ಎಂ.ವೆಂಕಟೇಶ್, ಕಿಶನ್ ಬೇಡರೆ, ಮತ್ತು ರೋಹಿತ್ ಕುಮಾರ್. ಕೋಚಿಂಗ್ ಸಿಬ್ಬಂದಿ ಕೋಚ್ ಪಿ.ವಿ. ಶಶಿಕಾಂತ್, ಬೌಲಿಂಗ್ ಕೋಚ್ ಮನ್ಸೂರ್ ಅಲಿ ಖಾನ್ ಮತ್ತು ಫೀಲ್ಡಿಂಗ್ ಕೋಚ್ ಶಬರೀಶ್ ಮೋಹನ್.

ಇದನ್ನೂ ಓದಿ : ಲಕ್ನೋ ಸೂಪರ್ ಜೈಂಟ್ಸ್ ಮೂಲಕ ಐಪಿಎಲ್ 2024ಗೆ ಎಂಟ್ರಿ ಕೊಟ್ಟ ಸುರೇಶ್ ರೈನಾ
ಹೊರ ರಾಜ್ಯಗಳಿಗೆ ವಲಸೆ ಹೋಗ್ತಾರಾ ಆಟಗಾರರು ?
ರಣಜಿ ತಂಡಕ್ಕೆ ಯುವ ಆಟಗಾರರ ಆಯ್ಕೆಯ ಬೆನ್ನಲ್ಲೇ ಹಿರಿಯ ಆಟಗಾರರು ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಚರ್ಚೆಯನ್ನು ಹುಟ್ಟುಹಾಕಿದೆ. ರಾಬಿನ್ ಉತ್ತಪ್ಪ, ಗಣೇಶ್ ಸತೀಶ್ ಸೇರಿದಂತೆ ಹಲವು ಆಟಗಾರರು ಈಗಾಗಲೇ ಇತರ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಹಲವು ಹಿರಿಯ ಆಟಗಾರರು ತಂಡದಲ್ಲಿ ಸ್ಥಾನ ಕಳೆದುಕೊಂಡಿರುವುದು ಈ ಚರ್ಚೆ ಕಾರಣ ಎನ್ನಲಾಗುತ್ತಿದೆ.
Ranji Trophy Mayank Agarwal lead Karnataka Team Gowtham and suchith out