Bank Holidays January 2024: ಹೊಸ ವರ್ಷ- ಜನವರಿ ತಿಂಗಳಲ್ಲಿ ಬ್ಯಾಂಕುಗಳು ಓಪನ್‌ ಇರೋದು ಕೇವಲ 15 ದಿನಗಳು ಮಾತ್ರ

Bank Holidays January 2024: ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಜನರು ಕಾಯುತ್ತಿದ್ದಾರೆ. ಹೊಸ ವರ್ಷದ ಆಗಮನ ಆಗುತ್ತಿದ್ದಂತೆಯೇ ಸಾಲು ಸಾಲು ರಜೆಗಳು ಶುರುವಾಗುತ್ತಿದೆ. ಅದ್ರಲ್ಲೂ ಬ್ಯಾಂಕುಗಳು ಜನವರಿ ತಿಂಗಳಲ್ಲಿ ಕೇವಲ 15 ದಿನಗಳ ಕಾಲ ಮಾತ್ರವೇ ತೆರೆದಿರುತ್ತವೆ.

Bank Holidays January 2024: ಬ್ಯಾಂಕ್‌ ರಜಾದಿನಗಳು: ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಜನರು ಕಾಯುತ್ತಿದ್ದಾರೆ. ಹೊಸ ವರ್ಷದ ಆಗಮನ ಆಗುತ್ತಿದ್ದಂತೆಯೇ ಸಾಲು ಸಾಲು ರಜೆಗಳು ಶುರುವಾಗುತ್ತಿದೆ. ಅದ್ರಲ್ಲೂ ಬ್ಯಾಂಕುಗಳು ಜನವರಿ ತಿಂಗಳಲ್ಲಿ ಕೇವಲ 15 ದಿನಗಳ ಕಾಲ ಮಾತ್ರವೇ ತೆರೆದಿರುತ್ತವೆ. ಬ್ಯಾಂಕ್‌ ವ್ಯವಹಾರ ನಡೆಸುವ ಗ್ರಾಹಕರಿಗೆ ಈ ಮಾಹಿತಿ ಅತ್ಯಮೂಲ್ಯವಾಗಿದೆ.

Bank Holidays January 2024 New Year- Banks are open only for 15 days in the month of January
Image Credit to Original Source

ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 2024 ರ ಬ್ಯಾಂಕ್ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜನವರಿ 2024 ರಲ್ಲಿ ಬ್ಯಾಂಕ್‌ಗಳು ಒಟ್ಟು 16 ದಿನಗಳವರೆಗೆ ಕಾರ್ಯನಿರ್ವಹಿಸುವುದಿಲ್ಲ. ಬ್ಯಾಂಕ್ ರಜಾದಿನಗಳು ಜನವರಿ 2024: ಬ್ಯಾಂಕ್ ಕೇವಲ 15 ದಿನಗಳು ಮಾತ್ರ ತೆರೆಯುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 2024 ರ ಬ್ಯಾಂಕ್ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಕರ ಸಂಕ್ರಾಂತಿ, ಪೊಂಗಲ್ ಹಬ್ಬ ಕೂಡ ಬರುವುದು ಇದೇ ಜನವರಿ ತಿಂಗಳಲ್ಲಿ. ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ. ಜೊತೆಗೆ ನಾಲ್ಕು ಭಾನುವಾರಗಳಂದು ಬ್ಯಾಂಕ್‌ ಬಾಗಿಲು ತೆರೆಯುವುದಿಲ್ಲ. ಹೀಗಾಗಿ ಬ್ಯಾಂಕಿಗೆ ತೆರಳುವವರು ಬ್ಯಾಂಕ್‌ ರಜೆಯ ಕುರಿತು ಗಮನ ಹರಿಸುವುದು ಒಳಿತು.

ಇದನ್ನೂ ಓದಿ : ಯುವನಿಧಿಗೆ ಅರ್ಜಿ ಸಲ್ಲಿಸಲು ಹೊಸ ರೂಲ್ಸ್‌ : ಆನ್ಲೈನ್‌, ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

2024 ರ ಆರ್ಥಿಕ ವರ್ಷ ಆರಂಭವಾಗುತ್ತಲೇ ಹಲವರು ಮನೆ, ಕಾರು ಖರೀದಿಯ ಯೋಚನೆ ಮಾಡುತ್ತಾರೆ. ಬ್ಯಾಂಕುಗಳು ಕೂರ ವಿಶೇಷ ಆಫರ್‌ ಘೋಷಣೆ ಮಾಡುತ್ತಿವೆ. ಆದರೆ ಬ್ಯಾಂಕ್‌ ರಜೆಯ ವೇಳಾಪಟ್ಟಿಯನ್ನು ಅರಿತುಕೊಳ್ಳುವುದು ಉತ್ತಮ. ಬ್ಯಾಂಕುಗಳ ರಜಾಪಟ್ಟಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಧಾರ ಮಾಡುತ್ತದೆ. ಆದರೆ ಆಯಾಯ ರಾಜ್ಯಗಳಿಗೆ ಹಬ್ಬದ ದಿನಗಳಲ್ಲಿ ಬದಲಾವಣೆ ಆಗಲಿದೆ.

ಬ್ಯಾಂಕುಗಳು ರಜೆ ಇದ್ದರೂ ಕೂಡ ಆನ್‌ಲೈನ್‌ ವ್ಯವಹಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಎಟಿಎಂಗಳ ಮೂಲಕ ಹಣ ವಿಥ್‌ ಡ್ರಾ ಹಾಗೂ ಹಣವನ್ನು ಡೆಪಾಸಿಟ್‌ ಮಾಡುವ ಕಾರ್ಯವನ್ನು ಮಾಡಬಹುದಾಗಿದೆ. ಜೊತೆಗೆ ಹಣವನ್ನು ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್, ಯುಪಿಐ ಐಡಿಗಳ ಮೂಲಕವೂ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಇನ್ನು ಜನವರಿಗೆ ತಿಂಗಳ ರಜಾ ಧಿನಗಳ ಪಟ್ಟಿಯನ್ನು ನೋಡುವುದಾದ್ರೆ.

ಇದನ್ನೂ ಓದಿ : ಯುವನಿಧಿ ಯೋಜನೆ ಇಂದಿನಿಂದ ಜಾರಿ : ಅರ್ಜಿ ಸಲ್ಲಿಸುವುದು ಹೇಗೆ ? ಯಾರೆಲ್ಲ ಅರ್ಹರು ?

Bank Holidays January 2024 New Year- Banks are open only for 15 days in the month of January
Image Credit to Original Source

ಜನವರಿ ತಿಂಗಳ ಬ್ಯಾಂಕ್‌ ರಜಾ ದಿನಗಳು :

ಜನವರಿ 1: ಹೊಸ ವರ್ಷದ ಮೊದಲ ದಿನ

ಜನವರಿ 7: ಭಾನುವಾರ

ಜನವರಿ 11: ಮಿಷನರಿ ಡೇ (ಮಿಜೋರಾಂ)

ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ (ಪಶ್ಚಿಮ ಬಂಗಾಳ)

ಜನವರಿ 13: ಎರಡನೇ ಶನಿವಾರ

ಜನವರಿ 14: ಭಾನುವಾರ

ಜನವರಿ 15: ಮಕರ ಸಂಕ್ರಾಂತಿ/ ಪೊಂಗಲ್

ಜನವರಿ 16: ತುಸು ಪೂಜೆ (ಪಶ್ಚಿಮ ಬಂಗಾಳ ಮತ್ತು ಅಸ್ಸಾಂ)

ಜನವರಿ 17: ಗುರು ಗೋಬಿಂದ್ ಸಿಂಗ್ ಜಯಂತಿ

ಜನವರಿ 21: ಭಾನುವಾರ

ಇದನ್ನೂ ಓದಿ : ಹೊಸ ವರ್ಷ 2024: ಹೊಸ ವರ್ಷಕ್ಕೆ ಹೊಸ ರೂಲ್ಸ್‌ : ಜನವರಿ 1 ರಿಂದ ಈ ನಿಯಮಗಳಲ್ಲಿ ಬದಲಾವಣೆ

ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ

ಜನವರಿ 25: ರಾಜ್ಯ ದಿನ (ಹಿಮಾಚಲ ಪ್ರದೇಶ)

ಜನವರಿ 26: ಗಣರಾಜ್ಯೋತ್ಸವ

ಜನವರಿ 27: ನಾಲ್ಕನೇ ಶನಿವಾರ

ಜನವರಿ 28: ಭಾನುವಾರ

ಜನವರಿ 31: ಮಿ-ಡ್ಯಾಮ್-ಮಿ-ಫೈ (ಅಸ್ಸಾಂ)

Bank Holidays January 2024: New Year- Banks are open only for 15 days in the month of January

Comments are closed.