ಸೋಮವಾರ, ಏಪ್ರಿಲ್ 28, 2025
HomeSportsRavindra Jadeja Retire : ರವೀಂದ್ರ ಜಡೇಜಾ ಕ್ರಿಕೆಟ್‌ಗೆ ಗುಡ್‌ ಬೈ : ನಿವೃತ್ತಿ ಹಿಂದಿದೆ...

Ravindra Jadeja Retire : ರವೀಂದ್ರ ಜಡೇಜಾ ಕ್ರಿಕೆಟ್‌ಗೆ ಗುಡ್‌ ಬೈ : ನಿವೃತ್ತಿ ಹಿಂದಿದೆ ನೋವಿನ ಕಾರಣ

- Advertisement -

ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಸುದೀರ್ಘ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಆಗಲಿದ್ದಾರೆ. ರವೀಂದ್ರ ಜಡೇಜಾ (Ravindra Jadeja Retire) ಅವರು ಮೊಣಕಾಲಿನ ಗಾಯದ ಕಾರಣದಿಂದಾಗಿ ಅವರು ಕ್ರಿಕೆಟ್‌ಗೆ ಗುಡ್‌ ಬೈ ಹೇಳಲು ನಿರ್ಧರಿಸಿದ್ದಾರೆ. ಅದ್ರಲ್ಲೂ ಟೆಸ್ಟ್‌ ಕ್ರಿಕೆಟ್‌ನಿಂದ ದೂರವಾಗಿ ಚುಟುಕು ಕ್ರಿಕೆಟ್‌ನಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.

ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್‌ ಆಗಿರುವ ರವೀಂದ್ರ ಜಡೇಜಾ ಐಪಿಎಲ್‌ ಮೂಲಕ ಕ್ರಿಕೆಟ್‌ ವೃತ್ತಿ ಬದುಕನ್ನು ಆರಂಭಿಸಿದ್ದರು. ಮೊದಲ ಸರಣಿಯಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಜಡೇಜಾ ಮಹೇಂದ್ರ ಸಿಂಗ್‌ ಧೋನಿ ಗರಡಿಯಲ್ಲಿ ಪಳಗಿದ್ದರು. ಬ್ಯಾಟಿಂಗ್‌, ಬೌಲಿಂಗ್‌ ನಲ್ಲಿ ಮಿಂಚು ಹರಿಸುತ್ತಿರುವ ಜಡೆಜಾ ಇದೀಗ ನೋವಿನ ಕಾರಣದಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ರವೀಂದ್ರ ಜಡೇಜಾ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ. ಕ್ರಿಕೆಟ್‌ನ ಸುದೀರ್ಘ ಸ್ವರೂಪದಿಂದ ನಿವೃತ್ತಿಯಾಗುವ ಭಾರತೀಯ ಆಲ್‌ರೌಂಡರ್ ಯೋಜನೆ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್‌ಗಳು, ಮೂರು ODIಗಳು ಮತ್ತು ನಾಲ್ಕು T20I ಪಂದ್ಯಗಳನ್ನು ಆಡಲು ನಿರ್ಧರಿಸಿದೆ. ಆದರೆ ರವೀಂದ್ರಾ ಜಡೇಜಾ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅಲ್ಲದೇ ರವೀಂದ್ರ ಜಡೇಜಾ ಕ್ರಿಕೆಟ್‌ಗೆ ನಿವೃತ್ತಿ, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ.

Ravindra Jadeja retire from cricket, official announcement soon 1

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಜಯ ಸಾಧಿಸಿತ್ತು. ಆ ಬಳಿಕ ಆತಿಥೇಯರು ಟೆಸ್ಟ್‌ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತ್ತು. ಏತನ್ಮಧ್ಯೆ, ಮೊಣಕಾಲಿನ ಗಾಯದ ನಂತರ ಜಡೇಜಾ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಸ್ಥಾನಗಳಿಸಿಲ್ಲ. ರವೀಂದ್ರ ಜಡೇಜಾ ಬಹಳ ಹಿಂದಿನಿಂದಲೂ ಭಾರತ ಕ್ರಿಕೆಟ್ ತಂಡದ ದೊಡ್ಡ ಆಸ್ತಿಯಾಗಿದ್ದಾರೆ. ಟೀಂ ಇಂಡಿಯಾದ ಪ್ರಮುಖ ಆಲ್‌ರೌಂಡರ್‌ ಆಗಿರುವ ಜಡೇಜಾ ಅವರು ಚುಟುಕು ಕ್ರಿಕೆಟ್‌ನಲ್ಲಿ ಒಲವು ಹೊಂದಿದ್ದಾರೆ.

33 ವರ್ಷದ ರವೀಂದ್ರ ಜಡೇಜಾ 57 ಟೆಸ್ಟ್, 168 ODI ಮತ್ತು 55 T20I ಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಅವರು ಕ್ರಮವಾಗಿ 2195, 2411 ಮತ್ತು 256 ರನ್ ಗಳಿಸಿದ್ದಾರೆ. ಜಡೇಜಾ 17 ಅರ್ಧಶತಕಗಳನ್ನು ಮತ್ತು ಕೆಂಪು ಬಾಲ್ ಮಾದರಿಯಲ್ಲಿ ಶತಕ ಸಿಡಿಸಿದ್ದಾರೆ. ಆಲ್ ರೌಂಡರ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 13 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 200 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ 2 ಅರ್ಧಶತಕಗಳು ಸೇರಿದಂತೆ 2386 ರನ್ ಗಳಿಸಿದ್ದಾರೆ.

ಮತ್ತೊಂದೆಡೆ, ಆಲ್‌ರೌಂಡರ್ ಟೆಸ್ಟ್‌ನಲ್ಲಿ 232 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೇ ಏಕದಿನ ಪಂದ್ಯಗಳಲ್ಲಿಯೂ ಅವರು ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ. ಇದುವರೆಗೆ ಒಟ್ಟು 188 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೇ ಟಿ20 ಪಂದ್ಯಗಳಲ್ಲಿ 46 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರವೀಂದ್ರ ಜಡೇಜಾ ಟೆಸ್ಟ್‌, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇನ್ನು ಬೌಲಿಂಗ್‌, ಬ್ಯಾಟಿಂಗ್‌ ಮಾತ್ರವಲ್ಲದೇ ಫೀಲ್ಡಿಂಗ್‌ನಲ್ಲಿಯೂ ಗಮನ ಸೆಳೆದಿದ್ದಾರೆ.

ರವೀಂದ್ರ ಜಡೇಜಾ ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 28 ಎಸೆತಗಳಲ್ಲಿ 62 ರನ್ ಗಳಿಸಿ ಗಮನ ಸೆಳೆದಿದ್ದರು. ಅವರು ನಗದು-ಸಮೃದ್ಧ ಐಪಿಎಲ್‌ನಲ್ಲಿ ಒಂದು ಐದು ವಿಕೆಟ್ ಸೇರಿದಂತೆ 127 ವಿಕೆಟ್‌ಗಳನ್ನು ಪಡೆದಿದ್ದಾರೆ. ಜಡೇಜಾ ಟೆಸ್ಟ್‌ ಪಂದ್ಯಗಳಿಂದ ದೂರವಾದ್ರೂ ಕೂಡ ODI, T20I ಮತ್ತು IPL ನಲ್ಲಿ ಆಡಲಿದ್ದಾರೆ. ರವೀಂದ್ರ ಜಡೇಜಾ (Jadeja) ಜೊತೆಗೆ ಅಕ್ಷರ್ ಪಟೇಲ್, ಶುಭಮನ್ ಗಿಲ್ ಮತ್ತು ರಾಹುಲ್ ಚಹರ್‌ ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾಗವಹಿಸುವುದಿಲ್ಲ. ರೋಹಿತ್ ಶರ್ಮಾ ಟೀಮ್ ಇಂಡಿಯಾದ ಹೊಸ T20I ಮತ್ತು ODI ನಾಯಕರಾಗಿದ್ದಾರೆ. ಅವರು ಅಜಿಂಕ್ಯ ರಹಾನೆ ಅವರ ಬದಲು ರೋಹಿತ್‌ ಶರ್ಮಾ ಟೆಸ್ಟ್‌ ತಂಡದ ಉಪನಾಯಕರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತದ ಟೆಸ್ಟ್ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (WK), ವೃದ್ಧಿಮಾನ್ ಸಹಾ (WK), ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ : IPL 2022 TEAM CAPTAIN : ಕರ್ನಾಟಕದ ಈ ಮೂವರು ಐಪಿಎಲ್‌ ತಂಡಗಳ ನಾಯಕರಾಗೋದು ಖಚಿತ

ಇದನ್ನೂ ಓದಿ : Lucknow Team IPL 2022 : ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್‌, ರಶೀದ್‌ ಖಾನ್‌ ಮತ್ತು ಚಾಹಲ್‌ ಆಯ್ಕೆ

( Ravindra Jadeja retire from cricket, official announcement soon )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular