ಭಾನುವಾರ, ಏಪ್ರಿಲ್ 27, 2025
HomeSportsCricketRavindra Jadeja : ಇದೇ ಕಾರಣಕ್ಕೆ ಸಿಎಸ್‌ಕೆ ನಾಯಕತ್ವ ತ್ಯೆಜಿಸಿದ ರವೀಂದ್ರ ಜಡೇಜಾ

Ravindra Jadeja : ಇದೇ ಕಾರಣಕ್ಕೆ ಸಿಎಸ್‌ಕೆ ನಾಯಕತ್ವ ತ್ಯೆಜಿಸಿದ ರವೀಂದ್ರ ಜಡೇಜಾ

- Advertisement -

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕತ್ವದಿಂದ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja ) ಕೆಳಗೆ ಇಳಿದಿದ್ದಾರೆ. ಈ ನಡುವಲ್ಲೇ ರವೀಂದ್ರ ಜಡೇಜಾ (Ravindra Jadeja ) ರಾಜೀನಾಮೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಮಾರ್ಚ್ 24, 2022 ರಂದು MS ಧೋನಿಯಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವ ವನ್ನು ರವೀಂದ್ರ ಜಡೇಜಾ ವಹಿಸಿಕೊಂಡಾಗ ಅನೇಕರು ಪ್ರಶ್ನೆಗಳನ್ನು ಎತ್ತಿದ್ದರು. ಆದರೆ ರವೀಂದ್ರ ಜಡೇಜಾ ಐಪಿಎಲ್‌ ಆವೃತ್ತಿ ಮುಕ್ತಾಯಕ್ಕೂ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕತ್ವದಿಂದ ರವೀಂದ್ರ ಜಡೇಜಾ ಕೆಳಗೆ ಇಳಿಯುತ್ತಲೇ ಮಹೇಂದ್ರ ಸಿಂಗ್‌ ಧೋನಿ ಅವರನ್ನು ನಾಯಕನನ್ನಾಗಿ ಪುನರಾಯ್ಕೆ ಮಾಡಲಾಗಿದೆ. ಈ ಕುರಿತು ಚೆನ್ನೈ ಸೂಪರ್‌ ಕಿಂಗ್ಸ್‌ ಟೀಂ ಮ್ಯಾನೇಜ್ಮೆಂಟ್‌ ಅಧಿಕೃತವಾಗಿ ಘೋಷಣೆ ಮಾಡಿದೆ. ರವೀಂದ್ರ ಜಡೇಜಾ ಅವರು ತಮ್ಮ ಆಟದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. MS ಧೋನಿ CSK ಅನ್ನು ಮುನ್ನಡೆಸಲು ವಿನಂತಿಸಿದ್ದಾರೆ. ಎಂ.ಎಸ್. ಧೋನಿ ಸಿಎಸ್‌ಕೆಯನ್ನು ಹೆಚ್ಚಿನ ಆಸಕ್ತಿಯಿಂದ ಮುನ್ನಡೆಸಲು ಒಪ್ಪಿಕೊಂಡಿದ್ದಾರೆ. ಇನ್ನೊಂದೆಡೆಯಲ್ಲಿ ಜಡೇಜಾ ಅವರ ಆಟದ ಮೇಲೆ ಕೇಂದ್ರೀಕರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಜಡೇಜಾ ನಾಯಕತ್ವದಿಂದ ಕೆಳಗಿಳಿದ ನಂತರ ಆಲ್‌ರೌಂಡರ್ ಈ ನಿರ್ಧಾರವನ್ನು ಏಕೆ ತೆಗೆದುಕೊಂಡರು ಎಂಬುದರ ಕುರಿತು ಹೆಚ್ಚಿನ ಪ್ರಶ್ನೆಗಳನ್ನು ಎತ್ತಿದರು. ಫ್ರಾಂಚೈಸ್ ಮ್ಯಾನೇಜ್‌ಮೆಂಟ್ ಈ ನಿರ್ಧಾರದಲ್ಲಿ ತಮ್ಮ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಹೇಳಿಕೊಂಡಿದೆ. ಇದು ತಂಡದ ಮ್ಯಾನೇಜ್‌ಮೆಂಟ್ ಮತ್ತು ಜಡ್ಡು (ಜಡೇಜಾ) ತೆಗೆದುಕೊಂಡ ನಿರ್ಧಾರವಾಗಿದೆ, ಇದನ್ನು ನಾವು ಈಗ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೇವೆ. ತಂಡದ ಅಧಿಕಾರಿಗಳು ಇದರಲ್ಲಿ ಹೇಳಲು ಹೊಂದಿಲ್ಲ, ತಂಡದ ನಿರ್ವಹಣೆ ಮಾತ್ರ. ಫ್ರಾಂಚೈಸಿಯ ಹೆಚ್ಚಿನ ಹಿತಾಸಕ್ತಿಯಿಂದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವ ಎಂಎಸ್‌ಡಿಗೆ ನಾಯಕತ್ವವನ್ನು ತ್ಯಜಿಸುವ ಮತ್ತು ಅದನ್ನು ಮರಳಿ ನೀಡುವ ಬಯಕೆಯನ್ನು ಜಡ್ಡು ವ್ಯಕ್ತಪಡಿಸಿದ್ದಾರೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

15 ನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾಗುವ ಎರಡು ದಿನಗಳ ಮೊದಲು ಮಾರ್ಚ್ 24, 2022 ರಂದು ಧೋನಿಯಿಂದ ಜಡೇಜಾ ನಾಯಕತ್ವವನ್ನು ವಹಿಸಿಕೊಳ್ಳುವ ಘೋಷಣೆ ಮಾಡಲಾಗಿತ್ತು. ಆದರೆ ಈ ಕುರಿತು ಮಾರ್ಚ್ 24, 2022 ರ ಮೊದಲು ಯಾವುದೇ ಸೂಚನೆ ಇರಲಿಲ್ಲ. ಮಹೇಂದ್ರ ಸಿಂಗ್‌ ಧೋನಿ ಅವರು ಈ ಬಾರಿಯೇ ಐಪಿಎಲ್‌ಗೆ ವಿದಾಯ ಹೇಳುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಪ್ರಸಕ್ತ ಸಾಲಿ ಮೆಗಾ ಹರಾಜಿನಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರ ಮಾರ್ಗದರ್ಶನದಲ್ಲಿಯೇ ಯಾವ ಆಟಗಾರರನ್ನು ಖರೀದಿ ಮಾಡಬೇಕು ಅನ್ನುವ ಕುರಿತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಚರ್ಚೆಯನ್ನು ನಡೆಸಿತ್ತು. ಆದರೆ ಏಕಾಏಕಿ ನಾಯಕತ್ವದ ಬದಲಾವಣೆ ಮಾಡಿರುವುದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಮಹೇಂದ್ರ ಸಿಂಗ್‌ ಧೋನಿ ಅವರ ಗರಡಿಯಲ್ಲಿಯೇ ಪಳಗಿರುವ ಜಡೇಜಾ ಧೋನಿ ಅವರನ್ನು ಗೌರವದಿಂದಲೇ ನೋಡಿಕೊಳ್ಳುತ್ತಿದ್ದಾರೆ. ಆದರೆ ಜಡೇಜಾ ನಾಯಕನಾಗಿದ್ದರೂ ಕೂಡ ಮೈದಾನದಲ್ಲಿ ಧೋನಿ ಅವರೇ ಫೀಲ್ಡಿಂಗ್‌ ಸೆಟ್‌ ಮಾಡುತ್ತಿರುವುದು ಕ್ರಿಕೆಟ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಜಡೇಜಾ ಅವರಿಗೆ ನಾಯಕನಾಗಿ ತಂಡವನ್ನು ಮುನ್ನೆಡೆಸಲು ಸಂಪೂರ್ಣ ಅವಕಾಶವನ್ನು ನೀಡುವಂತೆಯೇ ಹಲವರು ಒತ್ತಾಯಿಸಿದ್ದಾರೆ.

ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಸತತ ಸೋಲು ಚೆನ್ನೈ ತಂಡದ ಅಭಿಮಾನಿಗಳನ್ನು ಕೆರಳಿಸಿದೆ. ಹೆಸರಿಗಷ್ಟೇ ಜಡೇಜಾ ನಾಯಕನಾಗಿದ್ದರೂ ಕೂಡ ಮಹೇಂದ್ರ ಸಿಂಗ್‌ ಧೋನಿಯೇ ಮೈದಾನದಲ್ಲಿ ನಾಯಕನ ರೀತಿಯಲ್ಲಿ ವರ್ತನೆ ಮಾಡುತ್ತಿದ್ದರು. ಇದು ಜಡೇಜಾ ಅಸಮಾಧಾನಕ್ಕೆ ಕಾರಣವಾಗಿತ್ತು. ಇನ್ನೊಂದೆಡೆಯಲ್ಲಿ ಧೋನಿಯನ್ನು ತಂಡದಲ್ಲಿ ಇರಿಸಿಕೊಂಡು ತಂಡವನ್ನು ಮುನ್ನೆಡೆಸುವುದು ಜಡೇಜಾಗೆ ಸವಾಲಿನ ಕಾರ್ಯ. ಜೊತೆಗೆ ನಾಯಕತ್ವದಿಂದ ಕೆಳಗಿಳಿದು ಆಟದ ಮೇಲೆ ಹೆಚ್ಚು ಗಮನ ಹರಿಸಬಹುದು ಅನ್ನೋದು ರವೀಂದ್ರ ಜಡೇಜಾ ಲೆಕ್ಕಾಚಾರ. ಮಹೇಂದ್ರ ಸಿಂಗ್‌ ಧೋನಿ ನಂತರದಲ್ಲಿ ಚೆನ್ನೈ ತಂಡದ ನಾಯಕ ಎಂದೇ ಬಿಂಬಿಸಲಾಗುತ್ತಿದ್ದ ರವೀಂದ್ರ ಜಡೇಜಾ ನಾಯಕತ್ವ ಪ್ರಸಕ್ತ ಸಾಲಿನ ಐಪಿಎಲ್‌ ಪಂದ್ಯಾವಳಿಯ ನಡುವಲ್ಲೇ ಅಂತ್ಯವಾಗಿದೆ.

ಇದನ್ನೂ ಓದಿ : CSK ತಂಡದ ಖ್ಯಾತ ಆಲ್ ರೌಂಡರ್ ಗೆ ಗಾಯ : IPL 2022 ಮೊಯಿನ್‌ ಆಲಿ ಔಟ್‌

ಇದನ್ನೂ ಓದಿ : ಸಿಎಸ್​ಕೆ ನಾಯಕತ್ವವನ್ನು ಧೋನಿಗೆ ಮರಳಿ ನೀಡಿದ ರವೀಂದ್ರ ಜಡೇಜಾ

Ravindra Jadeja step down from CSK captaincy in IPL 2022 for this reason

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular