ಬೆಂಗಳೂರು: ಐಪಿಎಲ್ (IPL) , ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿರುವ ತಮಿಳುನಾಡಿನ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ (Dinesh Karthik) ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.

ಐಪಿಎಲ್-2024 ಟೂರ್ನಿಯ ಬೆನ್ನಲ್ಲೇ ಡಿಕೆ ಖ್ಯಾತಿಯ ದಿನೇಶ್ ಕಾರ್ತಿಕ್ ಐಪಿಎಲ್ ಕ್ರಿಕೆಟ್’ಗೆ ವಿದಾಯ ಹೇಳಿದ್ದರು. ಡಿಕೆ ನಿವೃತ್ತಿಯ ಬೆನ್ನಲ್ಲೇ ಅನರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ಕೋಚ್ ಆಗಿ ಆರ್’ಸಿಬಿ ಫ್ರಾಂಚೈಸಿ ನೇಮಕಗೊಳಿಸಿತ್ತು. 38 ವರ್ಷಗ ದಿನೇಶ್ ಕಾರ್ತಿಕ್ ಕಳೆದ ಮೂರು ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಬ್ಬರಿಸಿದ್ದರು. 2022ರಲ್ಲಿ ಆರ್’ಸಿಬಿ ಪರ ಆಡಿದ್ದ ಅಬ್ಬರದ ಆಟ ದಿನೇಶ್ ಕಾರ್ತಿತ್ ಅವರಿಗೆ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಭಾರತ ತಂಡದಲ್ಲಿ ಸ್ಥಾನ ಕಲ್ಪಿಸಿತ್ತು.
ಇದನ್ನೂ ಓದಿ : Bat hits Umpire: ಕ್ರಿಕೆಟಿಗನ ವಿಚಿತ್ರ ಸೆಲೆಬ್ರೇಷನ್, ಬ್ಯಾಟ್ ಬಂದು ಬಡಿದದ್ದು ಅಂಪೈರ್ ಕಾಲಿಗೆ
ಇದೀಗ ಐಪಿಎಲ್’ನಿಂದ ನಿವೃತ್ತಿಯಾಗಿ ಆರ್’ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿರುವ ದಿನೇಶ್ ಕಾರ್ತಿಕ್ ಐಪಿಎಲ್’ನ ಮತ್ತೊಂದು ಫ್ರಾಂಚೈಸಿ ತಂಡವಾಗಿರುವ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ. ಇದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಅಸಲಿ ವಿಚಾರ ಇರುವುದು ಅಲ್ಲೇ.

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ದಕ್ಷಿಣ ಆಫ್ರಿಕಾದ ಟಿ20 ಲೀಗ್ SA20 ಟೂರ್ನಿಯಲ್ಲಿ ಪಾರ್ಲ್ ರಾಯಲ್ಸ್ (Paarl Royals) ತಂಡದ ಮಾಲೀಕತ್ವ ಹೊಂದಿದೆ. ಮುಂದಿನ SA20 ಟೂರ್ನಿಗಾಗಿ ಆರ್’ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರನ್ನು ಪಾರ್ಲ್ ರಾಯಲ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಆ ಮೂಲಕ SA20 ಟೂರ್ನಿಯಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟಿಗ ಎಂಬ ಹಿರಿಮೆಗೆ ಡಿಕೆ ಪಾತ್ರರಾಗಲಿದ್ದಾರೆ. 39 ವರ್ಷದ ದಿನೇಶ್ ಕಾರ್ತಿಕ್ ಪ್ರಸ್ತುತ ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : Rahul Dravid Paris Olympics 2024 : ಬಾಲ್ಯದಲ್ಲಿ ಆಡಿದ ಕ್ರೀಡೆಯನ್ನು ಒಲಿಂಪಿಕ್ಸ್’ನಲ್ಲಿ ವೀಕ್ಷಿಸಿದ ರಾಹುಲ್ ದ್ರಾವಿಡ್
RCB batting coach Dinesh Karthik to play for Rajasthan Royals franchise SA T20