ಸೋಮವಾರ, ಏಪ್ರಿಲ್ 28, 2025
HomeSportsCricketರಣಜಿ ಟ್ರೋಫಿಯಲ್ಲಿ ಭರ್ಜರಿ ಶತಕ ಬಾರಿಸಿದ ಆರ್‌ಸಿಬಿ ಸ್ಟಾರ್

ರಣಜಿ ಟ್ರೋಫಿಯಲ್ಲಿ ಭರ್ಜರಿ ಶತಕ ಬಾರಿಸಿದ ಆರ್‌ಸಿಬಿ ಸ್ಟಾರ್

- Advertisement -

ಬೆಂಗಳೂರು: ಐಪಿಎಲ್-2022 (IPL 2022) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಪ್ಲೇ ಆಫ್ ತಲುಪುವಲ್ಲಿ ಬಂಗಾಳದ ಆ ಯುವ ಆಟಗಾರನ ಪಾತ್ರ ದೊಡ್ಡದು. ಆರ್’ಸಿಬಿ ಪರ ಮಿಂಚಿದ್ದ ಅದೇ ಆಟಗಾರನೀಗ ರಣಜಿ ಟ್ರೋಫಿ ಸೆಮಿಫೈನಲ್ (Ranji Trophy Semifinal) ಪಂದ್ಯದಲ್ಲಿ ಬಂಗಾಳ ಪರ ಭರ್ಜರಿ ಶತಕ ಬಾರಿಸಿದ್ದಾನೆ. ಆತ ಬೇರಾರೂ ಅಲ್ಲ, ಯುವ ಅಲ್ರೌಂಡರ್ ಶಹಬಾಜ್ ಅಹ್ಮದ್ (Shahbaz Ahmed).

ಬೆಂಗಳೂರಿನ ಹೊರವಲಯದಲ್ಲಿರುವ KSCA ಆಲೂರು ಮೈದಾನದಲ್ಲಿ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಶಹಬಾಜ್ ಅಮೋಘ ಶತಕ ಸಿಡಿಸಿದ್ದಾರೆ. ಮಧ್ಯಪ್ರದೇಶದ 341 ರನ್”ಗಳಿಗೆ ಉತ್ತರವಾಗಿ ಬಂಗಾಳ ತಂಡ ಒಂದು ಹಂತದಲ್ಲಿ ಕೇವಲ 54 ರನ್ನಿಗೆ 5 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತ್ತು.

ಈ ಸಂದರ್ಭದಲ್ಲಿ ಕ್ರೀಸ್’ಗಿಳಿದ ಶಹಬಾಜ್, ಮಾಜಿ ನಾಯಕ ಮನೋಜ್ ತಿವಾರಿ ಜೊತೆ 6ನೇ ವಿಕೆಟ್’ಗೆ 183 ರನ್”ಗಳ ಜೊತೆಯಾಟವಾಡಿದರು. 209 ಎಸೆತಗಳನ್ನೆದುರಿಸಿದ ಎಡಗೈ ಬ್ಯಾಟ್ಸ್’ಮನ್ ಶಹಬಾಜ್ ಅಹ್ಮದ್ 12 ಬೌಂಡರಿಗಳ ಸಹಿತ 116 ರನ್ ಗಳಿಸಿ ಔಟಾದರು. ಮನೋಜ್ ತಿವಾರಿ ಕೂಡ ಶತಕ (102) ಬಾರಿಸಿ ಬಂಗಾಳಕ್ಕೆ ಆಸರೆಯಾದರು. ಕೊನೆಗೆ ಬಂಗಾಳದ ತಂಡ ತನ್ನ ಪ್ರಥಮ ಇನ್ನಿಂಗ್ಸ್”ನಲ್ಲಿ 273 ರನ್ನಿಗೆ ಆಲೌಟಾಯಿತು. ಐಪಿಎಲ್-2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಪರ ಮಿಂಚಿದ್ದ ಶಹಬಾಜ್ 16 ಪಂದ್ಯಗಳಿಂದ 2019 ರನ್ ಗಳಿಸಿದ್ದರು.

ಇದನ್ನೂ ಓದಿ : News Next Exclusive : ಕೆ.ಎಲ್ ರಾಹುಲ್‌ಗೆ ಜರ್ಮನಿಯಲ್ಲಿ ಸರ್ಜರಿ, ಇಂಗ್ಲೆಂಡ್ ಪ್ರವಾಸದಿಂದ ಔಟ್

ಇದನ್ನೂ ಓದಿ : IPL vs PSL : ಐಪಿಎಲ್ 115.5 ಕೋಟಿ, ಪಿಎಸ್ಎಲ್ ಜಸ್ಟ್ 2.76 ಕೋಟಿ : ಐಪಿಎಲ್ ಮುಂದೆ ಲೆಕ್ಕಕ್ಕೇ ಇಲ್ಲ ಪಾಕಿಸ್ತಾನ್ ಸೂಪರ್ ಲೀಗ್

RCB star Shahbaz Ahmed to score a century in Ranji Trophy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular