ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ನ 18ನೇ ಪಂದ್ಯದಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB Vs MI ) ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವು ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದ್ದು, ಸ್ಪೋಟಕ ಆಟಗಾರ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.
ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈಗೆ ಸೋಲಿನಿಂದ ಹೊರಬರಲೇ ಬೇಕಾಗಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಮುಂಬೈ ತಂಡ 9ನೇ ಸ್ಥಾನದಲ್ಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಪಂದ್ಯಗಳ ಪೈಕಿ 2 ಪಂದ್ಯಗಳನ್ನು ಗೆದ್ದಿದ್ದರೂ ಕೂಡ 5 ಸ್ಥಾನವನ್ನು ಪಡೆದುಕೊಂಡಿದೆ.
ಐಪಿಎಲ್‌ನಲ್ಲಿ RCB Vs MI ತಂಡಗಳ ಮುಖಾಮುಖಿ :
ಐಪಿಎಲ್ ಇತಿಹಾಸದಲ್ಲಿ ಒಟ್ಟಿ 29 ಬಾರಿ ಮುಂಬೈ ಹಾಗೂ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದು, 17 ಬಾರಿ ಮುಂಬೈ ಇಂಡಿಯನ್ಸ್ ಹಾಗೂ 12 ಬಾರಿ ರಾಯಲ್ ಚಾಲೆಂಜರ್ಸ್ ತಂಡಗಳು ಗೆಲುವನ್ನು ಕಂಡಿವೆ.
RCB Vs MI ತಂಡಗಳ ಬಲಾಬಲ :
ಮುಂಬೈ ಇಂಡಿಯನ್ಸ್ :
ಐಪಿಎಲ್ ಇತಿಹಾಸದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಸಾಧನೆಯನ್ನು ಮಾಡಿದೆ. ಅದ್ರಲ್ಲೂ ಮುಂಬೈ ಬಲಾಢ್ಯ ಆಟಗಾರರನ್ನು ಹೊಂದಿದೆ. ಆದರೆ ಯಾರೂ ಕೂಡ ನಿರೀಕ್ಷೆಗೆ ತಕ್ಕಂತೆ ಆಟವಾಡುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶಾನ್ ಆರಂಭಿಕರಾಗಿ ಕಣಕ್ಕೆ ಇಳಿಲಿದ್ರೆ, ಕಿಶಾನ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಆದರೆ ರೋಹಿತ್ ಶರ್ಮಾ ಇನ್ನೂ ಲಯಕ್ಕೆ ಮರಳಿಲ್ಲ. ಸೂರ್ಯ ಕುಮಾರ್ ಯಾದವ್ ತಂಡಕ್ಕೆ ಮರಳಿರುವುದು ಪ್ಲಸ್ ಪಾಯಿಂಟ್. ತಿಲಕ್ ವರ್ಮಾ, ಕಿರಾನ್ ಪೊಲಾರ್ಡ್, ಡಿ ಸ್ಯಾಮ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಇನ್ನೊಂದೆಡೆಯಲ್ಲಿ ಬೂಮ್ರಾ ಹಾಗೂ ಟಿ ಮಿಲ್ಸ್ ಬೌಲಿಂಗ್‌ನಲ್ಲಿ ಮಿಂಚಲೇ ಬೇಕಾದ ಅನಿವಾರ್ಯತೆಯಿದೆ. ಪ್ಯಾಬಿಯನ್ ಆಲನ್ ಹಾಗೂ ಜಯದೇವ ಉನಾದ್ಕಟ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು :
ಮುಂಬೈ ತಂಡಕ್ಕೆ ಹೋಲಿಸಿದ್ರೆ ಈ ಬಾರಿ ಬೆಂಗಳೂರು ತಂಡ ಹೆಚ್ಚು ಬಲಿಷ್ಠವಾಗಿದೆ. ಅದ್ರಲ್ಲೂ ಸ್ಪೋಟಕ ಆಟಗಾರ ಮ್ಯಾಕ್ಸ್‌ವೆಲ್ ತಂಡಕ್ಕೆ ಸೇರ್ಪಡೆ ಆಗಿರುವುದು ಆರ್‌ಸಿಬಿ ಪಾಳಯಕ್ಕೆ ಆನೆ ಬಲ ಬಂದಂತಾಗಿದೆ. ಡುಪ್ಲಸಿಸ್ ಜೊತೆ ರಾವತ್ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ರೆ, ನಂತರದಲ್ಲಿ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಆಲ್‌ರೌಂಡರ್ ಕೋಟಾದಡಿಯಲ್ಲಿ ಡೇವಿಡ್ ವಿಲ್ಲಿ, ಶಹಬಾದ್ ಅಹ್ಮದ್, ವನಿಂದು ಹಸರಂಗ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಜೊತೆಗೆ ಹರ್ಷಲ್ ಪಟೇಲ್, ಆಕಾಶ್ ದೀಪ್ ಹಾಗೂ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಮಿಂಚುತ್ತಿರುವುದು ಆರ್‌ಸಿಬಿ ತಂಡದ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
He’s back and he’s raring to go! Here’s a minute of Maxwell sending balls to the orbit at practice. Drop a 🤩 if you can’t wait to see Maxwell’s magic unfold this #IPL2022.#PlayBold #WeAreChallengers #Mission2022 #RCB #ನಮ್ಮRCB #RCBvMI pic.twitter.com/NwUNlkvrhd
— Royal Challengers Bangalore (@RCBTweets) April 9, 2022
ಸಮಯ : RCB vs MI, ಏಪ್ರಿಲ್ 9, ಸಂಜೆ 07.30
ಸ್ಥಳ : ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಪುಣೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸಂಭಾವ್ಯ XI : ಫಾಫ್ ಡು ಪ್ಲೆಸಿಸ್ (c), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (WK), ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಮುಂಬೈ ಇಂಡಿಯನ್ಸ್
ಸಂಭಾವ್ಯ XI: ರೋಹಿತ್ ಶರ್ಮಾ (c), ಇಶಾನ್ ಕಿಶನ್ (WK), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್ / ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್, ಜಯದೇವ್ ಉನಾದ್ಕತ್ / ಬಸಿಲ್ ಥಂಪಿ
ಇದನ್ನೂ ಓದಿ : ಕೆಕೆಆರ್ ಆಲ್ ರೌಂಡರ್ ಪ್ಯಾಟ್ ಕಮ್ಮಿನ್ಸ್ ಸ್ಪೋಟಕ ಆಟ, ವೈರಲ್ ಆಯ್ತುಆಂಡ್ರೆ ರಸೆಲ್ ಡ್ಯಾನ್ಸ್ ವಿಡಿಯೋ
ಇದನ್ನೂ ಓದಿ : ಲಕ್ನೋ ವಿರುದ್ದ ಅನ್ರಿಚ್ ನಾಟ್ರೆಜ್ ಅರ್ಧಕ್ಕೆ ಬೌಲಿಂಗ್ ನಿಲ್ಲಿಸಿದ್ದು ಯಾಕೆ ಗೊತ್ತಾ ?
RCB Vs MI, Royal Challengers Bangalore vs Mumbai Indians 18th Match Live Cricket