Booster Drive :ಕೋವಿಶೀಲ್ಡ್​, ಕೋವ್ಯಾಕ್ಸಿನ್ ಬೂಸ್ಟರ್​ ಡೋಸ್​ಗಳ ದರ ಇಳಿಕೆ

ನಾಳೆಯಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಬೂಸ್ಟರ್​ ಡೋಸ್​ಗಳು ಖಾಸಗಿ ಆಸ್ಪತ್ರೆಯ ಲಸಿಕಾ ಕೇಂದ್ರಗಳಲ್ಲಿ ಲಭ್ಯವಿರಲಿದೆ. ಕೊರೊನಾ ಬೂಸ್ಟರ್​ ಡೋಸ್ (Booster Drive)​​ ಅಭಿಯಾನ ಆರಂಭಗೊಳ್ಳುವ ಒಂದು ದಿನದ ಮುಂಚೆಯೇ ಎರಡೂ ಲಸಿಕೆಗಳ ಬೆಲೆಯು ಅರ್ಧದಷ್ಟು ಕಡಿತಗೊಂಡಿದೆ.

ಕೋವಿಶೀಲ್ಡ್​ ಬೂಸ್ಟರ್​ ಡೋಸ್​​​ ಬೆಲೆಯನ್ನು 600 ರೂಪಾಯಿಗಳಿಂದ 225 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ. ಕೋವ್ಯಾಕ್ಸಿನ್​ ಬೂಸ್ಟರ್​​ ಡೋಸ್​​ 1200 ರೂಪಾಯಿಗಳಿಂದ ಇಳಿಕೆ ಮಾಡಲಾಗಿದೆ. ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಸಿಇಓ ಆದರ್​ ಪೂನವಲ್ಲಾ ಹಾಗೂ ಭಾರತ್​ ಬಯೋಟೆಕ್​ ಸಹ ಸಂಸ್ಥಾಪಕಿ ಸುಚಿತ್ರಾ ಎಲಾ ಇಂದು ಟ್ವಿಟರ್​​ನಲ್ಲಿ ಘೋಷಣೆ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ಚರ್ಚಿಸಿದ ನಂತರ ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್​ ಲಸಿಕೆ ದರವನ್ನು ಪ್ರತಿ ಡೋಸ್​ಗೆ 600 ರೂಪಾಯಿಗಳಿಂದ 225 ರೂಪಾಯಿಗಳಿಗೆ ಪರಿಷ್ಕರಣೆ ಮಾಡಲು ಎಸ್​ಐಐ ನಿರ್ಧರಿಸಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ . ಎಲ್ಲಾ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೋವಿಡ್​ ಬೂಸ್ಟರ್​ ಡೋಸ್​ ಸ್ವೀಕರಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ಟ್ವೀಟಾಯಿಸಲಾಗಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್​ ಡೋಸ್​​ಗಳನ್ನು ನೀಡುವ ಕೇಂದ್ರದ ನಿರ್ಧಾರವನ್ನು ಸೀರಂ ಇನ್​ಸ್ಟಿಟ್ಯೂಟ್​ ಸ್ವಾಗತಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಕೇಂದ್ರವು ನಿರ್ಣಾಯಕ ನಿರ್ಧಾರ ಎಂದು ಆದರ್​ ಪೂನಾವಲ್ಲಾ ತಿಳಿಸಿದ್ದಾರೆ. ಹಲವಾರು ದೇಶಗಳು ಬೂಸ್ಟರ್​ ಡೋಸ್​​ ತೆಗೆದುಕೊಳ್ಳದವರ ಮೇಲೆ ನಿರ್ಬಂಧಗಳನ್ನು ವಿಧಿಸಿರುವದರಿಂದ ವಿದೇಶಕ್ಕೆ ಪ್ರಯಾಣಿಸಲು ಬಯಸುವ ಯಾವುದೇ ಜನರು ಮೂರನೇ ಡೋಸ್​​ ಇಲ್ಲದ ಪರಿತಪಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಕೇಂದ್ರವು ಕೈಗೊಂಡ ನಿರ್ಧಾರವು ಸಮಯೋಚಿತವಾಗಿದೆ ಎಂದು ಆದರ್​ ಪೂನವಲ್ಲಾ ಹೇಳಿದ್ದಾರೆ.

ಇದನ್ನು ಓದಿ : actress rashmika mandanna : ರಶ್ಮಿಕಾ ಮಂದಣ್ಣ ವಿವಾಹದ ಬಳಿಕ ವಿಚ್ಛೇದನ ಪಡೆಯುತ್ತಾರೆ:ವೇಣುಸ್ವಾಮಿ

ಇದನ್ನೂ ಓದಿ : Wedding Dance : ತಂಗಿ ಮದುವೆಯಲ್ಲಿ ಅಣ್ಣಂದಿರ ಭರ್ಜರಿ ಡ್ಯಾನ್ಸ್‌ : ವೈರಲ್‌ ಆಯ್ತು ಉಡುಪಿಯ ಮದುವೆ ವಿಡಿಯೋ

Covishield, Covaxin Prices Cut To ₹ 225 Day Before Booster Drive Begins

Comments are closed.