Ranbir Kapoor Alia Bhatt : ರಣಬೀರ್​, ಆಲಿಯಾ ಈಗಾಗಲೇ ವಿವಾಹವಾಗಿದ್ದಾರೆ ಎಂದ ನೀತು ಕಪೂರ್​

ಬಾಲಿವುಡ್​​ನ ಫೇಮಸ್​​ ಜೋಡಿ ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್ (Ranbir Kapoor, Alia Bhatt )​​ ಇದೇ ತಿಂಗಳು 14ನೇ ತಾರೀಖಿನಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಆಲಿಯಾ ಚಿಕ್ಕಪ್ಪ ರಾಬಿನ್​ ಭಟ್​ ಅಧಿಕೃತ ಮಾಹಿತಿ ನೀಡಿದ್ದಾರೆ. ಸುಮಾರು ಐದು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದ ಈ ಜೋಡಿಯ ವಿವಾಹವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳೂ ಸಹ ಕಾತುರರಾಗಿದ್ದಾರೆ. ಈ ಎಲ್ಲದರ ನಡುವೆ ರಣಬೀರ್ ತಾಯಿ ಹಾಗೂ ಹಿರಿಯ ನಟಿ ನೀತು ಕಪೂರ್​​ ಇವರಿಬ್ಬರು ಈಗಾಗಲೇ ವಿವಾಹವಾಗಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್​​ ಜೋಡಿಯ ಅದ್ಧೂರಿ ವಿವಾಹಕ್ಕೆ ಸಿದ್ಧತೆಗಳು ಸಹ ಭರದಿಂದ ಸಾಗಿದೆ. ಡ್ಯಾನ್ಸ್​ ರಿಯಾಲಿಟಿ ಶೋ ದೀವಾನೆ ಜ್ಯೂನಿಯರ್ಸ್ ಪ್ರಚಾರದ ವೇಳೆ ಪಾಪರಾಜಿಗಳಲ್ಲಿ ಒಬ್ಬರು ಮದುವೆ ದಿನಾಂಕವನ್ನಾದರೂ ಹೇಳಿ ಎಂದು ಕೇಳಿದ್ದಾರೆ. ಇದಕ್ಕೆ ನೀತು ಯಾರ ಮದುವೆ ಎಂದು ಕೇಳಿದ್ದಾರೆ. ಇದಕ್ಕೆ ಛಾಯಾಗ್ರಾಹಕ ಆರ್​ ಕೆ ಸರ್​ದು ಎಂದು ಹೇಳಿದ್ದಾರೆ. ಅದಕ್ಕೆ ನೀತು ತಾರೀಖು ಆ ದೇವರಿಗೆ ಗೊತ್ತು ಎಂದು ಹೇಳಿದ್ದಾರೆ.

ಇದಾದ ಬಳಿಕ ಏಪ್ರಿಲ್​​ 14 ಎಂದು ಕೆಲವರು ಹೇಳ್ತಿದ್ದಾರೆ. ಇನ್ನು ಕೆಲವರು 15 ಎಂದು ಹೇಳುತ್ತಿದ್ದಾರೆ. ನಿಜವಾದ ದಿನಾಂಕ ನೀವೇ ಹೇಳಿ ಎಂದು ಛಾಯಾಗ್ರಾಹಕರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನೀತು ನನ್ನನ್ನು ಕೇಳಿದ್ರೆ ಅವರು ಈಗಾಗಲೇ ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಆಲಿಯಾ ಭಟ್​ ಹಾಗೂ ರಣಬೀರ್​ ಕಪೂರ್ ಮುಂಬೈನ ವಾಸ್ತು ಅಪಾರ್ಟ್​ಮೆಂಟ್​ನಲ್ಲಿ ವಿವಾಹವಾಗಲಿದ್ದಾರೆ. ಈ ಮದುವೆಗೆ ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ತಿಂಗಳ ಕೊನೆಯಲ್ಲಿ ಅದ್ಧೂರಿ ರಿಸೆಪ್ಶನ್​ ಕಾರ್ಯಕ್ರಮ ಇರಲಿದೆ ಎನ್ನಲಾಗಿದೆ.

ಇದನ್ನು ಓದಿ : Wedding Dance : ತಂಗಿ ಮದುವೆಯಲ್ಲಿ ಅಣ್ಣಂದಿರ ಭರ್ಜರಿ ಡ್ಯಾನ್ಸ್‌ : ವೈರಲ್‌ ಆಯ್ತು ಉಡುಪಿಯ ಮದುವೆ ವಿಡಿಯೋ

ಇದನ್ನೂ ಓದಿ : actress rashmika mandanna : ರಶ್ಮಿಕಾ ಮಂದಣ್ಣ ವಿವಾಹದ ಬಳಿಕ ವಿಚ್ಛೇದನ ಪಡೆಯುತ್ತಾರೆ:ವೇಣುಸ್ವಾಮಿ

Ranbir Kapoor, Alia Bhatt ki shaadi ‘ho gayi’. Neetu Kapoor reveals

Comments are closed.