ಭಾನುವಾರ, ಏಪ್ರಿಲ್ 27, 2025
HomeSportsCricketIND vs SA 2ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದ ಸ್ಪೋಟಕ...

IND vs SA 2ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದ ಸ್ಪೋಟಕ ಆಟಗಾರ ರಿಂಕು ಸಿಂಗ್

- Advertisement -

Rinku Singh India vs south Africa :ಭಾರತ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಟೆಸ್ಟ್‌ ಪಂದ್ಯವನ್ನು ಆಡಲು ಸಜ್ಜಾಗಿದೆ. ಈಗಾಗಲೇ ಗಾಯಗೊಂಡಿರುವ ಋತುರಾಜ್‌ ಗಾಯಕ್ವಾಡ್‌ ಹಾಗೂ ಮೊಹಮ್ಮದ್‌ ಸೆಮಿ ಗಾಯಗೊಂಡು, ತಂಡದಿಂದ ಹೊರ ನಡೆದಿದ್ದರು. ಇದೀಗ ಮತ್ತೋರ್ವ ಆಟಗಾರ ರಿಂಕು ಸಿಂಗ್‌ ಕೂಡ ಭಾರತ ತಂಡವನ್ನು ತೊರೆದಿದ್ದಾರೆ.

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ 36 ರನ್‌ ಗಳ ಅಂತರದಲ್ಲಿ ಸೋಲನ್ನು ಕಂಡಿತ್ತು. ಎರಡನೇ ಟೆಸ್ಟ್‌ ಪಂದ್ಯ ಇದೀಗ ಜನವರಿ 3 ರಿಂದ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ರಿಂಕು ಸಿಂಗ್‌ ಅನಧಿಕೃತ ಸದಸ್ಯರಾಗಿದ್ದು. ಆದರೆ ಟೆಸ್ಟ್‌ ಪಂದ್ಯದಲ್ಲಿ ಫೀಲ್ಡಿಂಗ್‌ನಲ್ಲಿ ಆಗಾಗ ಕಾಣಿಸಿಕೊಂಡಿದ್ದರು. ಇದೀಗ ರಿಂಕು ಸಿಂಗ್‌ ಭಾರತ ಹಿರಿಯ ಕ್ರಿಕೆಟ್‌ ತಂಡವನ್ನು ತೊರೆದು ಭಾರತ ಎ ತಂಡವನ್ನು ಸೇರಿಕೊಂಡಿದ್ದಾರೆ.

Rinku Singh Released Indian Cricket Team before IND vs SA 2nd test
Image Credit to Original Source

ರಿಂಕು ಸಿಂಗ್‌ ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಹಾಗೂ ಏಕದಿನ ಸರಣಿಗೆ ಆಯ್ಕೆಯಾಗಿದ್ದರು. ಆದರೆ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೂ ಅವರು ಮೊದಲ ಟೆಸ್ಟ್‌ ಪಂದ್ಯದಲ್ಲಿ ಬದಲಿ ಫೀಲ್ಡರ್‌ ಆಗಿ ಆಗಾಗ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ ಐಸಿಸಿ ನಿಯಮಗಳ ಪ್ರಕಾರ ಟೆಸ್ಟ್‌ ಪಂದ್ಯಗಳಿಗೆ ಆರು ಮಂದಿ ಬದಲಿ ಆಟಗಾರರನ್ನು ಹೆಸರಿಸಬಹುದು. ಒಂದೊಮ್ಮೆ ಆಟಗಾರ ವಿಶ್ರಾಂತಿ ಬಯಸಿದರೆ ಅಥವಾ ಗಾಯಗೊಂಡರೆ ಈ ಆ ಆಟಗಾರರು ಫೀಲ್ಡರ್‌ ಆಗಿ ಕಣಕ್ಕೆ ಇಳಿಯುತ್ತಾರೆ.

ಇದನ್ನೂ ಓದಿ : IPL 2024 : ಐಪಿಎಲ್‌ನಲ್ಲಿ ಈ ಬಾರಿ ಯಾವ ತಂಡ ಬೆಸ್ಟ್‌ : ಇಲ್ಲಿದೆ ಎಲ್ಲಾ 10 ತಂಡಗಳ ಆಟಗಾರರ ಸಂಪೂರ್ಣ ವಿವರ

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಿಂಕು ಸಿಂಗ್‌ ಎಂದಿನಂತೆಯೇ ತಮ್ಮ ಸ್ಪೋಟಕ ಆಟದ ಪ್ರದರ್ಶನ ನೀಡಿದ್ದಾರೆ. ರಿಂಕು ಸಿಂಗ್‌ 68 ರನ್‌ ಗಳಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಆದರೆ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ ಮೂಲಕ ಕಮಾಲ್‌ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ಕೂಡ ರಿಂಕು ಸಿಂಗ್‌ ತಮ್ಮ ಮೊಲದ ಓವರ್‌ನ ಮೂರನೇ ಎಸೆತದಲ್ಲಿಯೇ ವಿಕೆಟ್‌ ಪಡೆಯುವ ಮೂಲಕ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಇದನ್ನೂ ಓದಿ : ಐಪಿಎಲ್ 2024 : ಹಾರ್ದಿಕ್‌ ಪಾಂಡ್ಯ ಔಟ್‌ : ಮುಂಬೈ ಇಂಡಿಯನ್ಸ್‌ಗೆ ರೋಹಿತ್‌ ಶರ್ಮಾ ನಾಯಕ

ರಿಂಕು ಸಿಂಗ್‌ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ಈ ವರ್ಷಕ್ಕೆ ವಿರಾಮ ಹಾಕಿದ್ದೇನೆ. ವಿಮಾನ ನಿಲ್ದಾಣದಲ್ಲಿರುವ ಪೋಟೋವನ್ನು ಪೋಸ್ಟ್‌ ಮಾಡಿ ಈಗ ಮನೆಗೆ ಹೋಗೋಣಾ ಎಂದು ಬರೆದುಕೊಂಡಿದ್ದಾರೆ. ರಿಂಕು ಸಿಂಗ್‌ ಐಪಿಎಲ್‌ ಮೂಲಕ ಬೆಳಕಿಗೆ ಬಂದಿದ್ದು, ಟೀಂ ಇಂಡಿಯಾದ ಖಾಯಂ ಸದಸ್ಯರಾಗುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ.

Rinku Singh Released Indian Cricket Team before IND vs SA 2nd test
Image Credit to Original Source

ಇದನ್ನೂ ಓದಿ : IPL 2024 : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರೋಹಿತ್‌ ಶರ್ಮಾ : CSK ಸಿಇಓ ಮಹತ್ವದ ಹೇಳಿಕೆ

ರಿಂಕು ಸಿಂಗ್‌ ಒಟ್ಟು ಭಾರತ ತಂಡದ ಪರ 12 ಟಿ 20 ಪಂದ್ಯಗಳನ್ನು ಆಡಿದ್ದಾರೆ. 8 ಇನ್ನಿಂಗ್ಸ್‌ಗಳಲ್ಲಿ 262 ರನ್‌ ಬಾರಿಸಿದ್ದಾರೆ. ಅದರಲ್ಲಿ ಒಂದು ಅರ್ಧ ಶತಕ ಒಳಗೊಂಡಿದೆ. ಇನ್ನು ಐಪಿಎಲ್‌ನಲ್ಲಿ ಒಟ್ಟು 31 ಒಂದ್ಯಗಳನ್ನು ಆಡಿದ್ದು 725 ರನ್‌ ಸಿಡಿಸಿದ್ದಾರೆ. ಇದರಲ್ಲಿ 4 ಅರ್ಧಶತಕ ಒಳಗೊಂಡಿದೆ. ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು ಕೂಡ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಏಕದಿನ ಸರಣಿಗೆ ಆಯ್ಕೆಯಾಗಿದ್ದ ರಿಂಕು ಸಿಂಗ್‌ ಕಮಾಲ್‌ ಮಾಡಲಿಲ್ಲ. ಎರಡು ತಂಡಗಳನ್ನು ಆಡಿದ್ದು, ಇದರಲ್ಲಿ 55  ರನ್‌ ಬಾರಿಸಿದ್ದಾರೆ.

Rinku Singh Released Indian Cricket Team before IND vs SA 2nd test

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular