ಮಂಗಳವಾರ, ಏಪ್ರಿಲ್ 29, 2025
HomeSportsCricketಡಿಕೆ ಡೆಬ್ಯು ಮಾಡಿದಾಗ ರಿಷಬ್ 7 ವರ್ಷದ ಹುಡುಗ‌ ; ಈಗ ರಿಷಬ್‌ ಪಂತ್ ನಾಯಕತ್ವದಲ್ಲಿ...

ಡಿಕೆ ಡೆಬ್ಯು ಮಾಡಿದಾಗ ರಿಷಬ್ 7 ವರ್ಷದ ಹುಡುಗ‌ ; ಈಗ ರಿಷಬ್‌ ಪಂತ್ ನಾಯಕತ್ವದಲ್ಲಿ ಆಡಲಿರುವ ದಿನೇಶ್ ಕಾರ್ತಿಕ್

- Advertisement -

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ( Royal Challengers Bangalore) ತಂಡದ ಮ್ಯಾಚ್ ಫಿನಿಷರ್ ದಿನೇಶ್ ಕಾರ್ತಿಕ್ ( Dinesh Karthik) ಐಪಿಎಲ್ ಟೂರ್ನಿಯಲ್ಲಿ (IPL 2022) ಅಬ್ಬರಿಸಿದ್ದು ಗೊತ್ತೇ ಇದೆ. RCB ಪರ ಅಬ್ಬರಿಸಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಗುರುವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ (India Vs South Africa T20 Series) ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಪರ ಫಿನಿಷರ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು (India Cricket team) ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಮುನ್ನಡೆಸಲಿದ್ದಾರೆ.
ನಾಯಕ ಕೆ.ಎಲ್ ರಾಹುಲ್ (KL rahul) ಗಾಯಗೊಂಡಿರುವ ಕಾರಣ ಸರಣಿಯಿಂದ ಹೊರ ಬಿದ್ದಿದ್ದು, ರಿಷಭ್ ಪಂತ್ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ.

ತನಗಿಂತ 13 ವರ್ಷ ಕಿರಿಯನಾಗಿರುವ ರಿಷಭ್ ಪಂತ್ ನಾಯಕತ್ವದಲ್ಲಿ ದಿನೇಶ್ ಕಾರ್ತಿಕ್ ಆಡಲಿದ್ದಾರೆ. ಕುತೂಹಲಕಾರಿ ಸಂಗತಿ ಏನಂದ್ರೆ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದಾಗ ರಿಷಬ್ ಪಂತ್ ಇನ್ನೂ 7 ವರ್ಷದ ಹುಡುಗ. 2004ರ ಸೆಪ್ಪೆಂಬರ್ 5ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟಿದ್ದರು. ಆ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಆಡಿದ್ದ ಕಾರ್ತಿಕ್ ಕೇವಲ 1 ರನ್ ಗಳಿಸಿ ಔಟಾದ್ರೂ, ಭಾರತ 23 ರನ್’ಗಳಿಂದ ಪಂದ್ಯ ಗೆದ್ದಿತ್ತು.

ದಿನೇಶ್ ಕಾರ್ತಿಕ್ ತಮ್ಮ 19ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟಾಗ ರಿಷಭ್ ಪಂತ್ ಇನ್ನೂ ಬ್ಯಾಟ್ ಹಿಡಿದಿರಲಿಲ್ಲ. ಈಗ ಅದೇ ರಿಷಭ್ ಪಂತ್ ನಾಯಕತ್ವದಲ್ಲಿ ದಿನೇಶ್ ಕಾರ್ತಿಕ್ ಆಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಸದಾ ಏಳು ಬೀಳಿನಿಂದಲೇ ಕೂಡಿದೆ. 2004ರಲ್ಲಿ ಟೀಮ್ ಇಂಡಿಯಾಗೆ ಕಾಲಿಟ್ರೂ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಕಾರಣ ಎಂ.ಎಸ್ ಧೋನಿ ಎಂಟ್ರಿ. ಯಾವಾಗ ಟೀಮ್ ಇಂಡಿಯಾಗೆ ಎಂ.ಎಸ್ ಧೋನಿ ಎಂಟ್ರಿಯಾಯ್ತೋ, ದಿನೇಶ್ ಕಾರ್ತಿಕ್ ಅವರ ಅಂದರ್ ಬಾಹರ್ ಆಟ ಶುರುವಾಯ್ತು. ಇದ್ರ ನಡುವೆಯೂ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ದಿನೇಶ್ ಕಾರ್ತಿಕ್ ಯಶಸ್ವಿಯಾಗಿದ್ರು.

2019ರ ವಿಶ್ವಕಪ್ ಟೂರ್ನಿಯ ನಂತರ ಕ್ರಿಕೆಟ್ ಮೈದಾನದಿಂದ ದೂರವಾದ ಕಾರ್ತಿಕ್, ಕಾಮೆಂಟೇಟರ್ ಆಗಿ ಕಾಣಿಸಿಕೊಂಡ್ರು. ಅಲ್ಲಿಗೆ ಕಾರ್ತಿಕ್ ವೃತ್ತಿಜೀವನ ಮುಗಿದೇ ಹೋಯ್ತು ಅಂತ ಎಲ್ಲರೂ ಭಾವಿಸಿದ್ರು. ಆದ್ರೆ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಪುಟಿದೆದ್ದು ನಿಂತ ದಿನೇಶ್ ಕಾರ್ತಿಕ್. ಐಪಿಎಲ್-2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಮೋಘ ಆಟವಾಡಿದ್ರು. 16 ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 183.33ರ ಅದ್ಭುತ ಸ್ಟ್ರೈಕ್”ರೇಟ್’ನೊಂದಿಗೆ ಬ್ಯಾಟ್ ಬೀಸಿದ ಕಾರ್ತಿಕ್ 330 ರನ್ ಕಲೆ ಹಾಕಿದ್ರು. ಈ ಸಿಡಿಲಬ್ಬರದ ಆಟ ದಿನೇಶ್ ಕಾರ್ತಿಕ್ ಅವರಿಗೆ ಮತ್ತೆ ಟೀಮ್ ಇಂಡಿಯಾ ಬಾಗಿಲು ತೆರೆಯವಂತೆ ಮಾಡಿತು. 37ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚಿದ್ರೆ, ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಇದನ್ನೂ ಓದಿ : 1 To 99 Indian cricketers jersey numbers : ಟೀಮ್ ಇಂಡಿಯಾ ಆಟಗಾರರ ಜರ್ಸಿ ನಂಬರ್ ; ಯಾರ ನಂಬರ್ ಎಷ್ಟು

ಇದನ್ನೂ ಓದಿ : Cricket World Record : ಕ್ರಿಕೆಟ್‌ನಲ್ಲೊಂದು ಅಪರೂದ ವಿಶ್ವದಾಖಲೆ : ಒಂದೇ ಇನ್ನಿಂಗ್ಸ್‌ನಲ್ಲಿ 9 ಮಂದಿ ಅರ್ಧಶತಕ

Rishabh Pant was just 7 yr old when DK made his Int’l Debut

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular