ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League (IPL 2024) ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ( Rohit Sharma). ಐದು ಬಾರಿ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಈ ಬಾರಿ ಹಾರ್ದಿಕ್ ಪಾಂಡ್ಯ ಎಮ್‌ಐ ನಾಯಕರಾಗಿದ್ದರೂ ಕೂಡ, ರೋಹಿತ್ ಶರ್ಮಾ ಅವರು ಇಂದಿಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಮುಂದುವರಿಸಿದ್ದಾರೆ. ಇದಕ್ಕೆ ಇಂದಿನ ಪಂದ್ಯವೇ ಬೆಸ್ಟ್ ಎಕ್ಸಾಂಪಲ್.
ರೋಹಿತ್ ಶರ್ಮಾ ಚುಕುಟು ಕ್ರಿಕೆಟ್‌ನ ಸರ್ವಶ್ರೇಷ್ಟ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಆಗಿ ಮಾಡುವುದು ಸಾಮಾನ್ಯದ ಸಾಧನೆಯಲ್ಲ. ರೋಹಿತ್ ಶರ್ಮಾ ಐಪಿಎಲ್ ಸಾಧನೆಯನ್ನು ಚೆನ್ನೈ ಸಮಗೊಳಿಸಿದ್ರೂ, ದಾಖಲೆ ಮುರಿಯಲು ಮಾತ್ರ ಯಾರಿಂದಲೂ ಸಾಧ್ಯವಾಗಿಲ್ಲ.

ಮುಂಬೈ ಇಂಡಿಯನ್ಸ್ ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಯಲ್ಲಿ ಸತತ ಸೋಲಿನ ಸುಳಿಗೆ ಸಿಲುಕಿದೆ. ಹೊಸ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಮೋಡಿ ಮಾಡುತ್ತಿಲ್ಲ. ಹೇಳಿಕೊಳ್ಳುವಂತ ಸಾಧನೆ ಪಾಂಡ್ಯ ಕಡೆಯಿಂದ ಬರುತ್ತಿಲ್ಲ. ಇನ್ನೊಂದೆಡೆಯಲ್ಲಿ ರೋಹಿತ್ ಶರ್ಮಾ ಈ ಬಾರಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ : ಒಂದೇ ಪಂದ್ಯದಲ್ಲಿ ಹೀರೋ ಟ್ರೆಂಡಿಂಗ್ ಆದ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ಮಯಾಂಕ್ ಯಾದವ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ಡ್ರಿಂಕ್ಸ್ ಬ್ರೇಕ್ ವೇಳೆಯಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ರಣತಂತ್ರ ರೂಪಿಸಿದ್ದಾರೆ. ಅಷ್ಟೇ ಅಲ್ಲದೇ ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ರಣತಂತ್ರ ವರ್ಕೌಟ್ ಕೂಡ ಆಡಗಿದೆ.

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (MI vs RCB) ನಡುವಿನ ಪಂದ್ಯದ ಟೈಮ್ ಔಟ್ ವೇಳೆಯಲ್ಲಿ ರೋಹಿತ್ ಶರ್ಮಾ ನಾಯಕನ ಸ್ಥಾನವನ್ನು ವಹಿಸಿಕೊಂಡಂತೆ ಕಂಡು ಬಂದಿದ್ದಾರೆ. ರೋಹಿತ್ ಶರ್ಮಾ ಅವರು ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಗೋಪಾಲ್ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ.
ಇದನ್ನೂ ಓದಿ : ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ : ಹಾರ್ದಿಕ್ ಪಾಂಡ್ಯ ಸಹೋದರ ಅರೆಸ್ಟ್
ರೋಹಿತ್ ಶರ್ಮಾ ಅವರ ಯೋಜನೆ ಇಂದಿನ ಪಂದ್ಯದಲ್ಲಿ ಫಲಕೊಟ್ಟಿದೆ.ಜೆರಾಲ್ಡ್ ಕೊಯೆಟ್ಜಿ ತನ್ನ ಮೂರನೇ ಓವರ್ ರಜತ್ ಪಾಟಿದಾರ್ ಅವರನ್ನು ಗುಡಿಸಲಿಗೆ ಕಳುಹಿಸಿದರು. ಇನ್ನು ಶ್ರೇಯಸ್ ಗೋಪಾಲ್ ಮೊದಲ ಇನಿಂಗ್ಸ್‌ನ 13 ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿಕೆಟ್ ಪಡೆದರು. ಇದು ರೋಹಿತ್ ಶರ್ಮಾ ಅವರ ಫ್ಲ್ಯಾನ್ ಅನ್ನೋದು ಖಚಿತವಾಗಿದೆ.
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ವಾರ್ನಿಂಗ್ : ದೇಶೀಯ ಕ್ರಿಕೆಟ್ ಆಡದಿದ್ರೆ ಒಪ್ಪಂದವೇ ರದ್ದು !
Rohit Sharma Mumbai Indians captain in IPL 2024 ? During the RCB vs MI Match. it was Sharma who devised the strategy instead of Hardik Pandya