ಭಾನುವಾರ, ಏಪ್ರಿಲ್ 27, 2025
HomeSportsCricketRohit Sharma out of Mumbai Indians: ಮುಂಬೈ ತಂಡದಿಂದ ರೋಹಿತ್ ಶರ್ಮಾಗೆ ಗೇಟ್ ಪಾಸ್...

Rohit Sharma out of Mumbai Indians: ಮುಂಬೈ ತಂಡದಿಂದ ರೋಹಿತ್ ಶರ್ಮಾಗೆ ಗೇಟ್ ಪಾಸ್ ಪಕ್ಕಾ? ಸೆಹ್ವಾಗ್ ಕೊಟ್ಟರಲ್ಲ “ದೊಡ್ಡ” ಸಂದೇಶ !

- Advertisement -

Rohit Sharma out of Mumbai Indians: ಮುಂಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು (Indian Cricket Team) ಮುನ್ನಡೆಸಲಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma), ಮುಂಬರುವ ಐಪಿಎಲ್’ನಲ್ಲಿ (IPL 2024) ಮುಂಬೈ ತಂಡದ ಪರ ಆಡುವ ಸಾಧ್ಯತೆಗಳು ಕಡಿಮೆ.

Rohit Sharma out of Mumbai Indians Indian Primer League 2024 IPL
Image Credit to Original Source

ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ (Mumbai Indians) ಮುಂದಿನ ಸಾಲಿಗೆ ತಂಡದಲ್ಲಿ ರೀಟೇನ್ ಮಾಡಿಕೊಳ್ಳುವ ಸಾಧ್ಯತೆಗಳು ಇನ್ನೂ ಕಡಿಮೆ. ಈ ಬಾರಿಯ ಐಪಿಎಲ್ ಟೂರ್ನಿಯ ಬೆನ್ನಲ್ಲೇ 37 ವರ್ಷದ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡದಿಂದ ಕೈಬಿಡುವ ಸಾಧ್ಯತೆಗಳು ದಟ್ಟವಾಗಿದೆ.

ಮುಂದಿನ ಐಪಿಎಲ್’ನಲ್ಲಿ ರೋಹಿತ್’ಗೆ ಮುಂಬೈ ತಂಡದಿಂದ ಗೇಟ್ ಪಾಸ್ ಸಿಗುವ ಬಗ್ಗೆ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಓಪನರ್ ವೀರೇಂದ್ರ ಸೆಹ್ವಾಗ್ ದೊಡ್ಡ ಸುಳಿವು ಕೊಟ್ಟಿದ್ದಾರೆ. ಐಪಿಎಲ್-2024 (IPL 2024) ಟೂರ್ನಿಯಲ್ಲಿ 13 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬಾರಿಸಿದ ಶತಕ ಸಹಿತ ಕೇವಲ 349 ರನ್ ಗಳಿಸಿದ್ದಾರೆ.

ಇದನ್ನೂ ಓದಿ : 250th IPL match for King Kohli : 250ನೇ ಐಪಿಎಲ್ ಪಂದ್ಯದ ಸಂಭ್ರಮದಲ್ಲಿ ವಿರಾಟ್‌ ಕೊಹ್ಲಿ

ಆ ಶತಕವನ್ನು ಹೊರತು ಪಡಿಸಿದರೆ ರೋಹಿತ್ ಶರ್ಮಾ ಸಾಧನೆ ಹೇಳಿಕೊಳ್ಳುವಂತಿಲ್ಲ. ಐಪಿಎಲ್’ನಲ್ಲಿ ದಯನೀಯ ವೈಫಲ್ಯ ಎದುರಿಸುತ್ತಿರುವ ರೋಹಿತ್ ಆಟವನ್ನು ಭಾರತ ತಂಡದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ (Sehwag) ಬಾಲಿವುಡ್ ಉದಾಹರಣೆ ನೀಡಿ ಟೀಕಿಸಿದ್ದಾರೆ.

“ನೀವು ಶಾರುಖ್ ಖಾನ್, ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್’ರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಿದರೆ, ಸಿನಿಮಾ ಹಿಟ್ ಆಗಬೇಕೆಂದಿಲ್ಲ. ನೀವು ಚೆನ್ನಾಗಿ ನಟಿಸಲೇಬೇಕು. ಸಿನಿಮಾದ ಸ್ಕ್ರಿಪ್ಟ್ ಕೂಡ ಚೆನ್ನಾಗಿರಬೇಕು. ಈ ದೊಡ್ಡ ಹೆಸರುಗಳನ್ನು ನೋಡಿ. ಎಲ್ಲರೂ ಉತ್ತಮ ಪ್ರದರ್ಶನ ತೋರಲೇಬೇಕು.

Rohit Sharma out of Mumbai Indians Indian Primer League 2024 IPL
Image Credit to Original Source

ರೋಹಿತ್ ಶರ್ಮಾ ಒಂದು ಶತಕ ಬಾರಿಸಿದ್ದಾರೆ ಮತ್ತು ಆ ಪಂದ್ಯದಲ್ಲಿ ಮುಂಬೈ ತಂಡ ಸೋತಿತ್ತು. ಉಳಿದ ಪಂದ್ಯಗಳಲ್ಲಿ ರೋಹಿತ್ ಏನು ಮಾಡಿದ್ದಾನೆ? ಇಶಾನ್ ಕಿಶನ್ ಇಡೀ ಸೀಸನ್’ನಲ್ಲಿ ಪವರ್’ಪ್ಲೇಗಿಂತ ಆಚೆ ಬ್ಯಾಟಿಂಗ್ ಮಾಡಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖಂಡಿತವಾಗಿಯೂ ಉಳಿಸಿಕೊಳ್ಳಲಿರುವ ಆಟಗಾರರು ಇಬ್ಬರು ಮಾತ್ರ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್. ಮೂರು ಮತ್ತು ನಾಲ್ಕನೇ ಆಟಗಾರರು ಯಾರು ಎಂಬುದನ್ನು ಕಾದು ನೋಡಬೇಕಿದೆ” ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ : Dhoni Retired From IPL ? ಚೆನ್ನೈನಲ್ಲಿ ಕೊನೆಯ ಐಪಿಎಲ್ ಪಂದ್ಯವಾಡುತ್ತಿದ್ದಾರಾ “ತಲಾ” ಧೋನಿ ? ಸುಳಿವು ಕೊಟ್ಟಿತಾ ಚೆನ್ನೈ ಸೂಪರ್ ಕಿಂಗ್ಸ್?

ಈ ಬಾರಿಯ ಐಪಿಎಲ್ ಟೂರ್ನಿಗೂ ಮೊದಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿತ್ತು. ಆದರೆ ಪಾಂಡ್ಯ ನಾಯಕತ್ವದಲ್ಲಿ ಭಾರೀ ವೈಫಲ್ಯ ಎದುರಿಸಿರುವ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮೊದಲ ತಂಡವಾಗಿ ಪ್ಲೇ ಆಫ್ ರೇಸ್’ನಿಂದ ಹೊರ ಬಿದ್ದಿದೆ. ಆಡಿರುವ 13 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು 9ರಲ್ಲಿ ಸೋತಿರುವ ಮುಂಬೈ ಕೇವಲ 8 ಪಾಯಿಂಟ್ಸ್ ಗಳಿಸಿದೆ.

ಇದನ್ನೂ ಓದಿ : ಲಕ್ನೋ ಸೂಪರ್‌ ಜೈಂಟ್ಸ್‌ ತೊರೆಯಲು ಮುಂದಾದ ಕೆಎಲ್‌ ರಾಹುಲ್‌, ಮುಂದಿನ ಪಂದ್ಯಗಳಿಗೆ LSGಗೆ ಹೊಸ ನಾಯಕ

Rohit Sharma out of Mumbai Indians Indian Primer League 2024 IPL

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular