Rohit Sharma world Record : ರೋಹಿತ್ ಶರ್ಮಾ ಮತ್ತೊಂದು ವಿಶ್ವದಾಖಲೆ, ಇದು ನಿಜಕ್ಕೂ ಬೇಕಿರಲಿಲ್ಲ 

Rohit Sharma world Record : ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC T20 World cup 2024) ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ 47 ರನ್’ಗಳ ಭರ್ಜರಿ ಗೆಲುವು ದಾಖಲಿಸಿದೆ.

Rohit Sharma world Record : ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC T20 World cup 2024) ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ 47 ರನ್’ಗಳ ಭರ್ಜರಿ ಗೆಲುವು ದಾಖಲಿಸಿದೆ. ಬ್ರಿಡ್ಜ್’ಟೌನ್’ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma)  ಬಳಗ ಸುಲಭ ಜಯ ದಾಖಲಿಸಿತು.

Rohit Sharma world record for most dismissals by a left-arm bowler in T20 cricket
Image Credit to Original Source

ಟಾಸ್ ಗೆದ್ದು ಮೊದಲು ಬ್ಟಾಟ್ ಮಾಡಿದ ಟೀಮ್ ಇಂಡಿಯಾ, ಜಗತ್ತಿನ ನಂ.1 ಟಿ20 ದಾಂಡಿಗ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧಶತಕದ (53 ರನ್, 28 ಎಸೆತ, 5 ಬೌಂಡರಿ, 3 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ರಶೀದ್ ಖಾನ್ ಸಾರಥ್ಯದ ಅಪ್ಘಾನಿಸ್ತಾನ ಭಾರತೀಯರ ಸಂಘಟಿತ ದಾಳಿಗೆ ತತ್ತರಿಸಿ 20 ಓವರ್’ಗಳಲ್ಲಿ 134 ರನ್ನಿಗೆ ಆಲೌಟಾಯಿತು.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೇಡದ ವಿಶ್ವದಾಖಲೆಯೊಂದನ್ನು (Rohit Sharma World record) ಬರೆದಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ರೋಹಿತ್ 13 ಎಸೆತಗಳನ್ನೆದುರಿಸಿ ಕೇವಲ 8 ರನ್ ಗಳಿಸಿ ಅಫ್ಘಾನಿಸ್ತಾನದ ಎಡಗೈ ಮಧ್ಯಮ ವೇಗಿ ಫಜಲ್ ಹಕ್ ಫರೂಕಿ ಎಸೆತೆದಲ್ಲಿ ಔಟಾಗಿದ್ದರು.

ಇದನ್ನೂ ಓದಿ : Smriti Mandhana: ದ್ರಾವಿಡ್ ಕೊಟ್ಟ ಬ್ಯಾಟ್‌ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದಳು Queen Of Cricket

ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಎಡವೈ ವೇಗದ ಬೌಲರ್’ಗಳಿಗೆ ವಿಕೆಟ್ ಒಪ್ಪಿಸಿದ್ದು ಇದು 24ನೇ ಬಾರಿ. ಇದೊಂದು ವಿಶ್ವದಾಖಲೆ. ಈ ಹಿಂದೆ ಈ ದಾಖಲೆ ಐರ್ಲೆಂಡ್ ಓಪನರ್ ಪಾಲ್ ಸ್ಟರ್ಲಿಂಗ್ ಹೆಸರಲ್ಲಿತ್ತು. ಸ್ಟರ್ಲಿಂಗ್ 23 ಬಾರಿ ಎಡಗೈ ಸೀಮರ್’ಗಳಿಗೆ ಔಟಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಓಪನರ್ ಫಿನ್ ಅಲೆನ್ 19 ಬಾರಿ ಎಡಗೈ ಮಧ್ಯಮ ವೇಗಿಗಳ ದಾಳಿಯಲ್ಲಿ ಔಟಾಗಿದ್ದಾರೆ.

Rohit Sharma world record for most dismissals by a left-arm bowler in T20 cricket
Image Credit to Original Source

T20I: ಎಡಗೈ ಸೀಮರ್’ಗಳಿಗೆ ಅತೀ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದವರು:
24: ರೋಹಿತ್ ಶರ್ಮಾ (ಭಾರತ)
23: ಪಾಲ್ ಸ್ಟರ್ಲಿಂಗ್ (ಐರ್ಲೆಂಡ್)
19: ಫಿನ್ ಅಲೆನ್ (ನ್ಯೂಜಿಲೆಂಡ್)

ಇದನ್ನೂ ಓದಿ : ಮುಂದಿನ ತಿಂಗಳು ಟೀಮ್ ಇಂಡಿಯಾಗೆ ಹೊಸ ಕೋಚ್ : ಗೌತಮ್ ಗಂಭೀರ್ ಅಲ್ಲ, ವಿವಿಎಸ್‌ ಲಕ್ಷ್ಮಣ್‌

ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಭಾರತ, ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ತನ್ನ 2ನೇ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಜೂನ್ 24ರಂದು ನಡೆಯುವ ಅಂತಿಮ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ಈ ಹೈವೋಲ್ಟೇಜ್ ಪಂದ್ಯ ಸೇಂಟ್ ಲೂಸಿಯಾದ ಡ್ಯಾರೆನ್ ಸಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ : Exclusive: ಕರ್ನಾಟಕ ಕ್ರಿಕೆಟ್ ಪ್ರಿಯರಿಗೆ ಕಹಿ ಸುದ್ದಿ, ರಾಜ್ಯ ತಂಡ ತೊರೆದ ಮತ್ತೊಬ್ಬ ಕ್ರಿಕೆಟಿಗ 

Rohit Sharma world record for most dismissals by a left-arm bowler in T20 cricket

Comments are closed.