Rohit Sharma’s net worth: ರೋಹಿತ್ ಶರ್ಮಾ ಎಷ್ಟು ಶ್ರೀಮಂತ ಗೊತ್ತಾ? ಟೀಮ್ ಇಂಡಿಯಾ ನಾಯಕ ಎಷ್ಟು ಕೋಟಿಗಳಿಗೆ ಒಡೆಯ?

ಮುಂಬೈ: Rohit Sharma’s net worth : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಮಕಾಲೀನ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ವೈಟ್ ಬಾಲ್ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಲೆಜೆಂಡ್. ಏಕದಿನ ಹಾಗೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಒಟ್ಟು 13,690 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 34 ಶತಕಗಳು ಸೇರಿವೆ. ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 10 ಸಾವಿರ ರನ್ ಕ್ಲಬ್ ಸೇರಲು ರೋಹಿತ್ ಶರ್ಮಾಗೆ ಬೇಕಿರುವುದಿನ್ನು ಕೇವಲ 163 ರನ್.

ಐಪಿಎಲ್’ನಲ್ಲಂತೂ ರೋಹಿತ್ ಶರ್ಮಾ ದಿಗ್ಗಜ ನಾಯಕ. ಐದು ಬಾರಿ ಮುಂಬೈ ಇಂಡಿಯನ್ಸ್’ಗೆ ಚಾಂಪಿಯನ್ ಪಟ್ಟ ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ, ತಾವೊಬ್ಬ ಶ್ರೇಷ್ಠ ನಾಯಕ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ರೋಹಿತ್ ಶರ್ಮಾ ಈಗ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಆಟಗಾರರಲ್ಲಿ ಒಬ್ಬರು. StockGro ನೀಡಿರುವ ಮಾಹಿತಿ ಪ್ರಕಾರ ರೋಹಿತ್ ಶರ್ಮಾ ಅವರ ಒಟ್ಟು ಆಸ್ತಿ ಮೌಲ್ಯ 214 ಕೋಟಿ ರೂಪಾಯಿ. ರೋಹಿತ್ ಶರ್ಮಾ ಬಿಸಿಸಿಐ ಕಾಂಟ್ರಾಕ್ಟ್’ನಲ್ಲಿ ಎ+ ಗ್ರೇಡ್’ನಲ್ಲಿದ್ದು, ವಾರ್ಷಿಕ 7 ಕೋಟಿ ರೂ. ಪಡೆಯುತ್ತಾರೆ.

ಜಾಹೀರಾತುಗಳಿಂದ ವಾರ್ಷಿಕ 5 ಕೋಟಿ ರೂ. ಆದಾಯವಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾಗೆ ವಾರ್ಷಿಕ 16 ಕೋಟಿ ರೂ.ಗಳನ್ನು ನೀಡುತ್ತಿದೆ. ಪ್ರತೀ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನಕ್ಕೆ 6 ಲಕ್ಷ ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂ.ಗಳನ್ನು ರೋಹಿತ್ ಶರ್ಮಾ ಪಡೆಯುತ್ತಾರೆ. ರೋಹಿತ್ ಶರ್ಮಾ ಬಳಿ ಸುಮಾರು 7 ಕೋಟಿ ಮೌಲ್ಯದ ಐಷಾರಾಮಿ ಕಾರುಗಳಿವೆ. ಇದನ್ನೂ ಓದಿ : Daniel Vettori : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕೋಚ್ ಸನ್ ರೈಸರ್ಸ್ ತಂಡಕ್ಕೆ ನೂತನ ಹೆಡ್ ಕೋಚ್

ರೋಹಿತ್ ಶರ್ಮಾ ಅವರ ಕ್ರಿಕೆಟ್ ಆದಾಯ
ಬಿಸಿಸಿಐ ಗ್ರೇಡ್ ಎ+ ಸಂಬಳ: 7 ಕೋಟಿ
ಟೆಸ್ಟ್ ಕ್ರಿಕೆಟ್: 15 ಲಕ್ಷ/ಪ್ರತೀ ಪಂದ್ಯಕ್ಕೆ
ಏಕದಿನ ಕ್ರಿಕೆಟ್: 6 ಲಕ್ಷ/ಪ್ರತೀ ಪಂದ್ಯಕ್ಕೆ
ಟಿ20 ಕ್ರಿಕೆಟ್: 3 ಲಕ್ಷ/ಪ್ರತೀ ಪಂದ್ಯಕ್ಕೆ
ಐಪಿಎಲ್: 16 ಕೋಟಿ

  • ರಿಯಲ್ ಎಸ್ಟೇಟ್ ಇನ್ವೆಸ್ಟ್’ಮೆಂಟ್
  • ಮುಂಬೈನ ವೊರ್ಲಿಯಲ್ಲಿ 30 ಕೋಟಿ ರೂ. ಮೌಲ್ಯದ 4BHK ಅಪಾರ್ಟ್ಮೆಂಟ್.
  • ಲೋನಾವಾಲದಲ್ಲಿ ಮಾರಾಟ ಮಾಡಿರುವ 5.25 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ.

Rohit Sharma’s net worth: Do you know how rich Rohit Sharma is? How many crores is the captain of Team India worth?

Comments are closed.