ಭಾನುವಾರ, ಏಪ್ರಿಲ್ 27, 2025
HomeSportsCricketDinesh Karthik : ಆರ್‌ಸಿಬಿಯಲ್ಲಿ ಕ್ರಿಕೆಟ್ ಪುನರ್ಜನ್ಮ ಆರ್‌ಸಿಬಿಯಲ್ಲೇ ಖೇಲ್ ಖತಂ.. ಮತ್ತೆ ಕಾಮೆಂಟೇಟರ್ ಅವತಾರದಲ್ಲಿ...

Dinesh Karthik : ಆರ್‌ಸಿಬಿಯಲ್ಲಿ ಕ್ರಿಕೆಟ್ ಪುನರ್ಜನ್ಮ ಆರ್‌ಸಿಬಿಯಲ್ಲೇ ಖೇಲ್ ಖತಂ.. ಮತ್ತೆ ಕಾಮೆಂಟೇಟರ್ ಅವತಾರದಲ್ಲಿ ಡಿಕೆ !

- Advertisement -

ಲಂಡನ್: ಡಿಕೆ ಖ್ಯಾತಿಯ ದಿನೇಶ್ ಕಾರ್ತಿಕ್ (Dinesh Karthik) ಈ ಬಾರಿಯ ಐಪಿಎಲ್’ನಲ್ಲಿ ಅಷ್ಟೇನೂ ಸದ್ದು ಮಾಡಿರ್ಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ಕೈಕೊಟ್ಟಿದ್ದ ದಿನೇಶ್ ಕಾರ್ತಿಕ್ ಆರ್’ಸಿಬಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣರಾಗಿದ್ದರು.

ಐಪಿಎಲ್ ಮುಗಿದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಏನ್ ಮಾಡ್ತಿದ್ದಾರೆ ಗೊತ್ತಾ..? ಮತ್ತೆ ಕ್ರಿಕೆಟ್ ಕಾಮೆಂಟರಿಗೆ ಮರಳಿದ್ದಾರೆ. ಲಂಡನ್’ನ ದಿ ಓವಲ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ (Indis Vs Australia) ತಂಡಗಳ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 – WTC final 2023) ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕಾಮೆಂಟರಿ ಮಾಡುತ್ತಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಮಧ್ಯೆ ನಡೆದ 2021ರ WTC ಫೈನಲ್ ಪಂದ್ಯದಲ್ಲೂ ಡಿಕೆ ಕಾಮೆಂಟೇಟರ್ ಆಗಿದ್ದರು. ಆದ್ರೆ 2022ರ ಐಪಿಎಲ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ದಿನೇಶ್ ಕಾರ್ತಿಕ್, ಮ್ಯಾಚ್ ಫಿನಿಷರ್ ಆಗಿ ಅಮೋಘ ಪ್ರದರ್ಶನ ತೋರಿದ್ದರು. ಅಷ್ಟೇ ಅಲ್ಲದೆ, ಐಪಿಎಲ್ ಪ್ರದರ್ಶನದ ಮಾನದಂಡದಲ್ಲಿ 2022ರ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಿದ ಭಾರತ ತಂಡದಲ್ಲೂ ಸ್ಥಾನ ಪಡೆದಿದ್ದರು.

ಆದರೆ ಈ ಬಾರಿಯ ಐಪಿಎಲ್’ನಲ್ಲಿ 38 ವರ್ಷದ ದಿನೇಶ್ ಕಾರ್ತಿಕ್ ನೀರಸ ಪ್ರದರ್ಶನ ತೋರುವ ಮೂಲಕ ಆರ್’ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಐಪಿಎಲ್-2023 ಟೂರ್ನಿಯಲ್ಲಿ 13 ಪಂದ್ಯಗಳನ್ನಾಡಿದ್ದ ದಿನೇಶ್ ಕಾರ್ತಿಕ್ 11.66ರ ಅತ್ಯಂತ ಕೆಟ್ಟ ಸರಾಸರಿಯಲ್ಲಿ ಕೇವಲ 140 ರನ್’ಗಳನ್ನಷ್ಟೇ ಕಲೆ ಹಾಕಿದ್ದರು.

2004ರಲ್ಲಿ ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ದಿನೇಶ್ ಕಾರ್ತಿಕ್ 2022ರವರೆಗೆ ಟೀಮ್ ಇಂಡಿಯಾ ಪರ ಆಡಿದ್ದಾರೆ. 2019ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್’ನಲ್ಲೂ ದಿನೇಶ್ ಕಾರ್ತಿಕ್ ಆಡಿದ್ದರು. ಭಾರತ ಪರ ಒಟ್ಟು 180 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಡಿಕೆ, ಒಂದು ಶತಕ ಹಾಗೂ 17 ಅರ್ಧಶತಕಗಳ ಸಹಿತ 3,463 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : KL Rahul Excusive : ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಟ್ರೈನಿಂಗ್ ಶುರು ಮಾಡಲಿದ್ದಾರೆ ಕೆಎಲ್ ರಾಹುಲ್

ಇದನ್ನೂ ಓದಿ : Rahul Dravid : ಆರ್.ಅಶ್ವಿನ್ ಬೌಲಿಂಗ್ ರಹಸ್ಯವನ್ನು ಕನ್ನಡದಲ್ಲೇ ಬಿಚ್ಚಿಟ್ಟ ಕೋಚ್ ರಾಹುಲ್ ದ್ರಾವಿಡ್

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular