Woman Killed : ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯನ್ನು ಕೊಂದು ದೇಹವನ್ನು ತುಂಡರಿಸಿದ ಆರೋಪಿ ಅರೆಸ್ಟ್‌

ಮುಂಬೈ: Woman Killed : ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಪ್ರಕರಣ ಮುಂಬೈ ಉಪನಗರದ ಮೀರಾ ರೋಡ್‌ನಲ್ಲಿ ನಡೆದಿದೆ. ಇಲ್ಲಿನ ಫ್ಲ್ಯಾಟ್‌ನಿಂದ 32 ವರ್ಷದ ಮಹಿಳೆಯ ಶವ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆಗೈದು ಆಕೆಯ ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಲಾಗಿದ್ದು, ಕೆಲವು ಭಾಗಗಳನ್ನು ವಿಲೇವಾರಿ ಮಾಡಲಾಗಿದೆ.

ಮನೋಜ್ ಸಹಾನಿ ( 56 ವರ್ಷ) ಎಂಬಾತನೇ ಕೊಲೆಗೈದಿರುವ ಆರೋಪಿ. ಈತ ಮುಂಬೈನ ಮೀರಾ ರೋಡ್ ಪ್ರದೇಶದ ಗೀತಾ ನಗರ 7 ನೇ ಹಂತದ ಗೀತಾ ಆಕಾಶ್ ದೀಪ್ ಕಟ್ಟಡದ ಜೆ ವಿಂಗ್‌ನಲ್ಲಿರುವ ಫ್ಲಾಟ್ 704 ರಲ್ಲಿ ಸರಸ್ವತಿ ವೈದ್ಯ ಎಂಬವರ ಜೊತೆಗೆ ವಾಸವಾಗಿದ್ದ. ಬುಧವಾರ, ನಯಾನಗರ ಪೊಲೀಸ್ ಠಾಣೆಗೆ ಕಟ್ಟಡದ ನಿವಾಸಿಗಳಿಂದ ಕರೆ ಬಂದಿದ್ದು, ದಂಪತಿಯ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ದೂರಿದ್ದಾರೆ. ನಯಾನಗರ ಠಾಣೆಯ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲು ಒಡೆದು ಒಳನುಗ್ಗಿದೆ.

ಅಲ್ಲಿ ಅವರು ಬಲಿಪಶುವಿನ ದೇಹವನ್ನು ಕಂಡುಕೊಂಡರು, ಹಲವಾರು ತುಂಡುಗಳಾಗಿ ಕತ್ತರಿಸಿದ ಮತ್ತು ಕೆಲವು ತುಣುಕುಗಳು ಕಾಣೆಯಾಗಿವೆ ಅಥವಾ ವಿಲೇವಾರಿ ಮಾಡಲಾಗಿದೆ ಎಂದು ವರದಿಯಾಗಿದೆ. ಮನೋಜ್‌ ಸಹಾನಿ ಹಾಗೂ ಸರಸ್ವತಿ ವೈದ್ಯ ದಂಪತಿ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುತ್ತಿದ್ದರು. ಪ್ರಾಥಮಿಕ ತನಿಖೆಯಿಂದ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬೈನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಯಂತ್ ಬಜ್ಬಲೆ ಹೇಳಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಆರೋಪಿ ಮನೋಜ್ ಸಹಾನಿ ತನ್ನ ಫ್ಲಾಟ್‌ನಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ವೇಳೆಯಲ್ಲಿ ಆತನನ್ನು ಬಂಧಿಸಲಾಗಿದೆ. ಪೊಲೀಸರು ಮೀರಾ ರೋಡ್ ಪ್ರದೇಶದ ಸೊಸೈಟಿಯಿಂದ ತುಂಡಾಗಿ ಕತ್ತರಿಸಿದ ಮಹಿಳೆಯ ಶವವನ್ನು ಪತ್ತೆ ಮಾಡಿದ್ದಾರೆ. ಇನ್ನು ದಂಪತಿ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿರುವವ ಜೊತೆಗೆ ಸರಿಯಾಗಿ ಬೆರೆಯುತ್ತಿರಲಿಲ್ಲ ಅಲ್ಲದೇ ಅವರ ಮನೆಗೆ ಯಾವುದೇ ನಾಮಫಲಕವೂ ಇರಲಿಲ್ಲ. ಸೋನಮ್‌ ಬಿಲ್ಡರ್‌ ಹೆಸರಲ್ಲಿ ಫ್ಲ್ಯಾಟ್‌ ನೋಂದಾಯಿಸಲಾಗತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ನವೆಂಬರ್ 2022 ರಲ್ಲಿ ದೆಹಲಿಯಲ್ಲಿ ನೆರೆಯ ಪಾಲ್ಘರ್ ಜಿಲ್ಲೆಯ ಶ್ರದ್ಧಾ ವಾಕರ್ ಎಂಬಾಕೆಯನ್ನು ಪ್ರಿಯಕರ ಹತ್ಯೆಗೈದು ನಂತರ ದೇಹವನ್ನು ತುಂಡರಿಸಿದ್ದಾನೆ. ಈ ಘಟನೆ ಯಿಂದಾಗಿ ದೇಶವೇ ಬೆಚ್ಚಿಬಿದ್ದಿತ್ತು. ಈ ಘಟನೆಯ ನಂತರದಲ್ಲಿ ಇಂತಹ ಹಲವು ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿದೆ.

ಇದನ್ನೂ ಓದಿ : Lust Stories 2 : ವಿಜಯ್‌ ವರ್ಮಾ ತಮನ್ನಾ ರೋಮ್ಯಾಂಟಿಕ್‌ ಕಿಸ್ಸಿಂಗ್‌

ಇದನ್ನೂ ಓದಿ : Uttar Pradesh Crime Case‌ : ಮಗಳ ಮೇಲೆ ಅತ್ಯಾಚಾರ, ಆರೋಪಿಗಳ ವಿರುದ್ದ ಕ್ರಮಕೈಗೊಳ್ಳದ ಪೊಲೀಸರು : ತಂದೆ ಆತ್ಮಹತ್ಯೆಗೆ ಶರಣು

Comments are closed.