ಭಾನುವಾರ, ಏಪ್ರಿಲ್ 27, 2025
HomeSportsCricketಐಪಿಎಲ್‌ನ ಈ 5 ತಂಡಗಳ ಸೇರ್ಪಡೆ ಆಗ್ತಾರಾ ಶಮರ್‌ ಜೋಸೆಫ್‌ !

ಐಪಿಎಲ್‌ನ ಈ 5 ತಂಡಗಳ ಸೇರ್ಪಡೆ ಆಗ್ತಾರಾ ಶಮರ್‌ ಜೋಸೆಫ್‌ !

- Advertisement -

Shamar Joseph joins IPL 2024 : ವಿಶ್ವ ಕ್ರಿಕೆಟ್‌ನಲ್ಲಿ ಬಾರೀ ಸುದ್ದಿ ಮಾಡುತ್ತಿರುವ ಹೆಸರು ಶಮರ್‌ ಜೋಸೆಫ್.‌ ವೆಸ್ಟ್‌ಇಂಡಿಸ್‌ ತಂಡದ ಈ ಆಟಗಾರ ಸದ್ಯ ಐಪಿಎಲ್‌ನ ಹಲವು ಪ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. AUS vs WI ಟೆಸ್ಟ್ ಸರಣಿಯಲ್ಲಿ ಶಮರ್ ಜೋಸೆಫ್ ಅತ್ಯುತ್ತಮ ಪ್ರದರ್ಶನದಿಂದಾಗಿ ಸರಣಿಶ್ರೇಷ್ಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಈ ಐದು ಐಪಿಎಲ್‌ ತಂಡಗಳನ್ನು ಸೇರ್ಪಡೆಯಾಗುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ಹಾಗೂ ವೆಸ್ಟ್‌ ಇಂಡಿಸ್‌ ವಿರುದ್ದದ 2 ನೇ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡಿಸ್‌ ತಂಡದ ವೇಗಿ ಶಮರ್ ಜೋಸೆಫ್ 7 ವಿಕೆಟ್ ಪಡೆದು ಕೊಂಡಿದ್ದಾರೆ. ಅಲ್ಲದೇ ವೆಸ್ಟ್‌ ಇಂಡಿಸ್‌ ತಂಡ ಆಸ್ಟ್ರೇಲಿಯಾ ತಂಡದ ವಿರುದ್ದ ರೋಚಕ 8 ರನ್‌ಗಳ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಶಮರ್‌ ಜೋಸೆಫ್‌ ಅವರ ಸಾಧನೆ ಇದೀಗ ಐಪಿಎಲ್‌ ತಂಡಗಳ ಕಣ್ಣು ಕುಕ್ಕಿದೆ.

Shamar Joseph joins these 5 teams of IPL 2024
Image Credit to Original Source

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (indian premier league ) ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದೆ. ಯಾವ ತಂಡಕ್ಕೂ ಕೂಡ ಶಮರ್‌ ಜೋಸೆಫ್‌ ಅವರನ್ನು ನೇರವಾಗಿ ಸೇರ್ಪಡೆ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಗಾಯಾಳು ಆಟಗಾರರ ಬದಲಿಗೆ ಈ ಆಟಗಾರನನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಅವಕಾಶವಿದೆ. ಇದೇ ಕಾರಣಕ್ಕೆ ಶಮರ್ ಜೋಸೆಫ್ ಅವರನ್ನುಈ 5 ಐಪಿಎಲ್ ಫ್ರಾಂಚೈಸಿಗಳು ಸೆಳೆಯುವ ಸಾಧ್ಯತೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್‌
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬಲಿಷ್ಠವಾಗಿದೆ. ಆದರೆ ತಂಡಕ್ಕೆ ವೇಗ ಬೌಲರ್‌ ಶಮರ್‌ ಜೋಸೆಫ್‌ ಅಗತ್ಯವಿದೆ. ಬೌಲಿಂಗ್‌ ವಿಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಕೊಂಚ ಕಡಿಮೆ ಎನಿಸುತ್ತಿದೆ. ಶಮರ್‌ ಜೋಸೆಫ್‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗುವ ಸಾಮರ್ಥ್ಯ ಹೊಂದಿದ್ದಾರೆ.

ಇದನ್ನೂ ಓದಿ : ಐಪಿಎಲ್ 2024ನಲ್ಲಿ ಸಿಎಸ್‌ಕೆ, ಆರ್‌ಸಿಬಿಗಿಂತ ಬಲಿಷ್ಟ ಈ ತಂಡದ Playing XI

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇದುವರೆಗೂ ಐಪಿಎಲ್‌ ಟ್ರೋಫಿಯನ್ನೇ ಗೆಲ್ಲದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಈ ಬಾರಿ ಟ್ರೋಫಿ ಜಯಿಸಲು ಒಂದೊಳ್ಳೆ ಅವಕಾಶವಿದೆ. ಅಲ್ಜಾರಿ ಜೋಸೆಫ್ ಮತ್ತು ಮೊಹಮ್ಮದ್ ಸಿರಾಜ್ ಅತ್ಯುತ್ತಮ ವೇಗಿಗಳನ್ನು ಹೊಂದಿಲ್ಲ. ಮುಂದಿನ ದಿನಗಳಲ್ಲಿ IPL 2024 ಕ್ಕೆ ಗಾಯದ ಬದಲಿಯಾಗಿ ಶಮರ್ ಜೋಸೆಫ್ RCB ಗೆ ಆಯ್ಕೆಯಾಗಬಹುದು.

Shamar Joseph joins these 5 teams of IPL 2024
Image Credit to Original Source

ಕೋಲ್ಕತ್ತಾ ನೈಟ್ ರೈಡರ್ಸ್
ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ವೆಸ್ಟ್ ಇಂಡಿಯಾದ ಹಲವು ಆಟಗಾರರಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿನ ವಿಕೆಟ್ ವೇಗದ ಬೌಲಿಂಗ್‌ಗೆ ಸೂಕ್ತವಾಗಬಹುದು. ಶಮರ್ ಜೋಸೆಫ್ ಆಸ್ಟ್ರೇಲಿಯಾದಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ತೋರಿಸಿದರು. ಹೀಗಾಗಿ ಕೋಲ್ಕತ್ತಾ ತಂಡಕ್ಕೆ ಹೆಚ್ಚಿನ ಪಂದ್ಯಗಳು ತವರು ಮೈದಾನದಲ್ಲಿಯೇ ನಡೆಯಲಿರುವುದರಿಂದಾಗಿ ಕೋಲ್ಕತ್ತಾದಲ್ಲಿ ಶಮರ್‌ ಜೋಸೆಫ್‌ ಅವರಿಗೆ ಹೆಚ್ಚು ನೆರವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಕ್ರಿಕೆಟ್‌ ಪ್ರಿಯರಿಗೆ ಗುಡ್‌ನ್ಯೂಸ್‌ : ಈ ಬಾರಿಯೂ JioCinema ನಲ್ಲಿ IPL 2024 ಉಚಿತ

ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. ಧೋನಿ ನಾಯಕತ್ವದಲ್ಲಿ ರುತುರಾಜ್ ಗಾಯಕ್ವಾಡ್, ಮಥೀಶ ಪತಿರಾನ ಮತ್ತು ತುಷಾರ್ ದೇಶಪಾಂಡೆ ಬಲಿಷ್ಠ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಶಮರ್ ಜೋಸೆಫ್ ಐಪಿಎಲ್ 2024 ರಲ್ಲಿ ಅವರ ನಾಯಕತ್ವದಲ್ಲಿ ಚೆನ್ನೈ ತಂಡದ ಪರ ಕಾಣಿಸಿಕೊಂಡರೂ ಕೂಡ ಅಚ್ಚರಿಯಿಲ್ಲ.

ರಾಜಸ್ಥಾನ್ ರಾಯಲ್ಸ್
ಮುಂಬರುವ ಐಪಿಎಲ್‌ನಲ್ಲಿ ಸಮತೋಲಿತ ತಂಡವನ್ನು ಹೊಂದಿರುವ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ ಗಾಯದ ಸಮಸ್ಯೆಯ ಆತಂಕವಿದೆ. ಜೊತೆಗೆ ಇಂಗ್ಲೆಂಡ್‌ ತಂಡದ ಸ್ಪೋಟಕ ಆಟಗಾರ ಜೋಸ್‌ ಬಟ್ಲರ್‌ ಮುಂದಿನ ಐಪಿಎಲ್‌ ಋತುವಿನಲ್ಲಿ ಪೂರ್ಣ ಪಂದ್ಯಾವಳಿಯನ್ನು ಆಡದೇ ಇರಬಹುದು. ಇಂತಹ ಸಂದರ್ಭದಲ್ಲಿ ಶಮರ್‌ ಜೋಸೆಫ್‌ ಆರ್‌ಆರ್‌ ತಂಡದ ಭಾಗವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : IPL 2024: ಐಪಿಎಲ್‌ 2024 ಟ್ರೋಫಿ ಗೆಲ್ಲುವ ತಂಡ ಯಾವುದು ? ಇಲ್ಲಿದೇ ಐಪಿಎಲ್‌ನ ಎಲ್ಲಾ ತಂಡಗಳ ಅತ್ಯುತ್ತಮ ಆಡುವ ಬಳಗ

Shamar Joseph joins these 5 teams of IPL 2024

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular