ಮುಂಬೈ : ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತಕ್ಕೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಆಸ್ಟ್ರೇಲಿಯಾ ವಿರುದ್ದ ( India Vs Austraila)ಪಂದ್ಯಕ್ಕೆ ಭಾರತ ಸಜ್ಜಾಗುವ ವೇಳೆಯಲ್ಲೇ ಟೀಂ ಇಂಡಿಯಾದ (Indian Cricket team) ಆರಂಭಿಕ ಆಟಗಾರ ಶುಭಮನ್ ಗಿಲ್ (Shubaman Gill) ತಂಡದಿಂದ ಹೊರಬಿದಿದ್ದಾರೆ. ಶುಭಮನ್ ಗಿಲ್ ಬದಲು ಇಶಾನ್ ಕಿಶಾನ್ (Ishan Kishan) ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಅಕ್ಟೋಬರ್ 08 ರಂದು ಭಾರತ ತಂಡ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ದ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕಾಗಿ ಭಾರತ ಈಗಾಗಲೇ ಕಠಿಣ ಅಭ್ಯಾಸವನ್ನು ನಡೆಸುತ್ತಿದೆ. ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಶುಭಮನ್ ಗಿಲ್ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಿಂದ ಹೊರಬಿದಿದ್ದಾರೆ

ಶುಭಮನ್ ಗಿಲ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಡೆಂಗ್ಯೂ ಪರೀಕ್ಷೆಗೆ ಒಳಪಡಿಸಲಾಗಿದೆ. ಒಂದೊಮ್ಮೆ ಡೆಂಗ್ಯೂ ಇರುವುದು ಖಚಿತವಾದ್ರೆ ಕನಿಷ್ಠ ಒಂದು ವಾರದ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯವನ್ನು ಮಿಸ್ ಮಾಡಿಕೊಳ್ಳುವುದು ಬಹುತೇಕ ಖಚಿತ.
ಇದನ್ನೂ ಓದಿ : ವಿಶ್ವಕಪ್ ಕ್ರಿಕೆಟ್ : ಇಂಗ್ಲೆಂಡ್ ವಿರುದ್ದ ನ್ಯೂಜಿಲೆಂಡ್‌ಗೆ ಗೆಲುವು, ಕಿವೀಸ್ ಪರ ಬೆಂಗಳೂರಿನ ರಾಚಿನ್ ರವೀಂದ್ರ ಚೊಚ್ಚಲ ಶತಕ
ಇನ್ನು ಭಾರತ ತನ್ನ ಎರಡನೇ ಪಂದ್ಯವನ್ನು ಅಪ್ಘಾನಿಸ್ತಾನ ತಂಡದ ವಿರುದ್ದ ಹಾಗೂ ಮೂರನೇ ಪಂದ್ಯವನ್ನು ಪಾಕಿಸ್ತಾನದ ವಿರುದ್ದ ಆಡಲಿದೆ. ಆದರೆ ಈ ಪಂದ್ಯಕ್ಕೆ ಶುಭಮನ್ ಲಭ್ಯತೆಯ ಬಗ್ಗೆ ಇದುವರೆಗೂ ಯಾವುದೇ ಖಚಿತತೆ ಇಲ್ಲ. ಒಂದೊಮ್ಮೆ ಶುಭಮನ್ ಗಿಲ್ ಆಸ್ಟ್ರೇಲಿಯಾ ವಿರುದ್ದದ ಪಂದ್ಯಕ್ಕೆ ಅಲಭ್ಯರಾದ್ರೆ ಇಶಾನ್ ಕಿಶಾನ್ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ

ಕನ್ನಡಿಗ ಕೆ.ಎಲ್.ರಾಹುಲ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಹಲವು ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ ಟೀಂ ಮ್ಯಾನೇಜ್ಮೆಂಟ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಕೆ.ಎಲ್.ರಾಹುಲ್ ಅವರನ್ನು ಆರಂಭಿಕರಾಗಿ ಕಣಕ್ಕೆ ಇಳಿಸಲು ಮನಸ್ಸು ಮಾಡುತ್ತಿಲ್ಲ.
ಭಾರತ ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಸೂರ್ಯಕುಮಾರ್ ಯಾದವ್ ತಂಡಕ್ಕೆ ನೆರವಾಗುತ್ತಿದ್ದಾರೆ. ಹೀಗಾಗಿ ಇಶಾನ್ ಕಿಶಾನ್ ಅವರನ್ನು ಆರಂಭಿಕರಾಗಿ ಕಣಕ್ಕೆ ಇಳಿಸಿದ್ರೆ ಭಾರತದ ಬ್ಯಾಟಿಂಗ್ ಬಲ ಬಲಿಷ್ಠವಾಗಲಿದೆ ಅನ್ನೋದು ಸದ್ಯದ ಲೆಕ್ಕಾಚಾರ. ಇನ್ನು ಇಶಾನ್ ಕಿಶಾನ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್ ಫೈನಲ್‌ಗೆ ಲಗ್ಗೆ ಇಟ್ಟ ಭಾರತ : ಸಾಯಿ ಕಿಶೋರ್ ದಾಳಿಗೆ ಬಾಂಗ್ಲಾ ಉಡೀಸ್
ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಕಣಕ್ಕೆ ಇಳಿಯುವುದರಿಂದ ಎಡಗೈ ಹಾಗೂ ಬಲಗೈ ಕಾಂಬಿನೇಷನ್ ಸಿಗಲಿದೆ. ಇದು ತಂಡಕ್ಕೆ ಸಹಕಾರಿ ಆಗಲಿದೆ ಅನ್ನೋ ಲೆಕ್ಕಾಚಾರವೂ ನಡೆಯುತ್ತಿದೆ. ಕೊನೆಯ ಹಂತದಲ್ಲಿ ಇಶಾನ್ ಕಿಶನ್ ಬದಲು ಕೆ.ಎಲ್.ರಾಹುಲ್ ಆರಂಭಿಕರಾಗಿ ಕಣಕ್ಕೆ ಇಳಿದ್ರೆ ಅಚ್ಚರಿಯಿಲ್ಲ.
ಇನ್ನು ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಆರ್. ಅಶ್ವಿನ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಚೆನ್ನೈ ನಲ್ಲಿ ಅಶ್ವಿನ್ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಅಲ್ಲದೇ ಅಲ್ಲಿನ ಪಿಚ್ ಅಶ್ವಿನ್‌ಗೆ ಹೆಚ್ಚು ನೆರವಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ತಂಡದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ : ವಿಶ್ವಕಪ್ 2023 : ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡ ರೋಹಿತ್ ಶರ್ಮಾ !
ವಿಶ್ವಕಪ್ 2023 : ಭಾರತ ಪಂದ್ಯದ ವೇಳಾಪಟ್ಟಿ :
- ಅಕ್ಟೋಬರ್ 8 ಭಾರತ vsಆಸ್ಟ್ರೇಲಿಯಾ : MA ಚಿದಂಬರಂ ಸ್ಟೇಡಿಯಂ, ಚೆನ್ನೈ 2:00 PM
- ಅಕ್ಟೋಬರ್ 11 ಭಾರತ vs ಅಫ್ಘಾನಿಸ್ತಾನ : ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ 2:00 PM
- ಅಕ್ಟೋಬರ್ 14 ಭಾರತ vs ಪಾಕಿಸ್ತಾನ : ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ 2:00 PM
- ಅಕ್ಟೋಬರ್ 19 ಭಾರತ vs ಬಾಂಗ್ಲಾದೇಶ : MCA ಸ್ಟೇಡಿಯಂ, ಪುಣೆ 2:00 PM
- ಅಕ್ಟೋಬರ್ 22 ಭಾರತ vs ನ್ಯೂಜಿಲೆಂಡ್ : HPCA ಸ್ಟೇಡಿಯಂ, ಹೈದರಾಬಾದ್ 2:00 PM
- ಅಕ್ಟೋಬರ್ 29 ಭಾರತ vs ಇಂಗ್ಲೆಂಡ್ : ಎಕಾನಾ ಸ್ಟೇಡಿಯಂ, ಲಕ್ನೋ 2:00 PM
- ನವೆಂಬರ್ 2 ಭಾರತ vs ಶ್ರೀಲಂಕಾ : ವಾಂಖೆಡೆ ಸ್ಟೇಡಿಯಂ, ಮುಂಬೈ 2:00 PM
- ನವೆಂಬರ್ 5 ಭಾರತ vs ದಕ್ಷಿಣ ಆಫ್ರಿಕಾ : ಈಡನ್ ಗಾರ್ಡನ್ಸ್, ಕೋಲ್ಕತ್ತಾ 2:00 PM
- ನವೆಂಬರ್ 12 ಭಾರತ vs ನೆದರ್ಲ್ಯಾಂಡ್ಸ್ : ಎಂ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು 2:00 PM
Shubman Gill out Ishan Kishan and Rohit Sharma Opener India vs Australia Match World cup 2023