ಹೊಸ ರೇಷನ್‌ ಕಾರ್ಡ್‌ : ರೇಷನ್‌ ಕಾರ್ಡ್‌ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ

ಗೃಹಲಕ್ಷ್ಮೀ ಯೋಜನೆ (Gruha Lakshmi Scheme), ಅನ್ನಭಾಗ್ಯ ಯೋಜನೆಯ (Anna Bhagya Scheme) ಪ್ರಯೋಜನ ಪಡೆಯಲು ರೇಷನ್‌ ಕಾರ್ಡ್‌ (Ration Card) ಅತೀ ಮುಖ್ಯ. ಇದೇ ಕಾರಣಕ್ಕೆ ರಾಜ್ಯ ಸರಕಾರ ಮತ್ತೊಮ್ಮೆ ರೇಷನ್‌ ಕಾರ್ಡ್‌ ತಿದ್ದುಪಡಿಗೆ (Ration Card Updates) ರಾಜ್ಯ ಸರಕಾರ ಅವಕಾಶವನ್ನು ಕಲ್ಪಿಸಿದೆ.

ಬೆಂಗಳೂರು : ಕರ್ನಾಟಕ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ (Gruha Lakshmi Scheme), ಅನ್ನಭಾಗ್ಯ ಯೋಜನೆಯ (Anna Bhagya Scheme) ಪ್ರಯೋಜನ ಪಡೆಯಲು ರೇಷನ್‌ ಕಾರ್ಡ್‌ (Ration Card) ಅತೀ ಮುಖ್ಯ. ಇದೇ ಕಾರಣಕ್ಕೆ ರಾಜ್ಯ ಸರಕಾರ ಮತ್ತೊಮ್ಮೆ ರೇಷನ್‌ ಕಾರ್ಡ್‌ ತಿದ್ದುಪಡಿಗೆ (Ration Card Updates) ರಾಜ್ಯ ಸರಕಾರ ಅವಕಾಶವನ್ನು ಕಲ್ಪಿಸಿದೆ. ಎಪಿಎಲ್‌ (APL Card), ಬಿಪಿಎಲ್‌ (BPL Card) ಹಾಗೂ ಅಂತ್ಯೋದಯ ಕಾರ್ಡುದಾರರು (Anthyodhaya Card) ಕೂಡ ತಮ್ಮ ಪಡಿತರ ಚೀಟಿಯಲ್ಲಿನ ಲೋಪಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.

ರಾಜ್ಯದಲ್ಲಿ ಒಟ್ಟು ಮೂರು ಹಂತಗಳಲ್ಲಿ ರೇಷನ್‌ ಕಾರ್ಡ್‌ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ಮೊದಲ ಹಂತ ಅಕ್ಟೋಬರ್‌ 5 ರಂದು ಆರಂಭಗೊಂಡಿದ್ದು, ನಾಳೆ ಕೊನೆಗೊಳ್ಳಲಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

Karnataka Ration Card Update These Important New Documents Required Gruha Lakshmi Scheme
Image credit to Original Source

ಬೆಂಗಳೂರು ಒನ್‌, ಕರ್ನಾಟಕ ಒನ್‌ ಹಾಗೂ ಗ್ರಾಮ ಒನ್‌ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ತಮ್ಮ ರೇಷನ್‌ ಕಾರ್ಡ್‌ಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ಇನ್ನು ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅಥವಾ ಕಾರ್ಡಿನಿಂದ ಹೆಸರನ್ನು ತೆಗೆಯ ಬಹುದಾಗಿದೆ.

ಕುಟುಂಬ ಸದಸ್ಯರ ಹೆಸರಿನಲ್ಲಿನ ಲೋಪ ಇಲ್ಲಾ ಕಾರ್ಡುದಾರರ ವಿಳಾಸ ಬದಲಾವಣೆ ಸೇರಿದಂತೆ ಎಲ್ಲಾ ರೀತಿಯ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಎರಡನೇ ಹಂತದಲ್ಲಿ ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ವಿಜಯಪುರ, ಕೊಡಗು, ಮಂಡ್ಯ, ಧಾರವಾಧ, ಗದಗ, ಹಾವೇರಿ, ಹಾಸನ ಜಿಲ್ಲೆಗಳಿಗೆ ಅಕ್ಟೋಬರ್‌ 8 ರಿಂದ 10 ರ ವರೆಗೆ ಅವಕಾಶವನ್ನು ನೀಡಲಾಗಿದೆ.

ಇದನ್ನೂ ಓದಿ : ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಗುಡ್‌ನ್ಯೂಸ್‌ : ತಿದ್ದುಪಡಿಗೆ ಸರಕಾರದಿಂದ ಹೊಸ ರೂಲ್ಸ್‌ ಜಾರಿ

ಇನ್ನು ಮೂರನೇ ಹಂತದಲ್ಲಿ ಚಿಕ್ಕಬಳ್ಳಾಪುರ, ಬೀದರ್‌, ಬಳ್ಳಾರಿ, ಕೋಲಾರ, ದಾವಣಗೆರೆ, ವಿಜಯನಗರ, ಯಾದಗಿರಿ, ತುಮಕೂರು, ಶಿವಮೊಗ್ಗ, ರಾಮನಗರ, ಕಲಬುರಗಿ, ಬೀದರ್‌ ಸೇರಿ ೧೪ ಜಿಲ್ಲೆಗಳಿಗೆ ಅಕ್ಟೋಬರ್‌ 11 ರಿಂದ 13 ರ ವರೆಗೆ ತಿದ್ದುಪಡಿಗೆ ಕಾಲಾವಕಾಶ ನೀಡಲಾಗಿದೆ.

Karnataka Ration Card Update These Important New Documents Required Gruha Lakshmi Scheme
Image credit to Original Source

ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ ನಂತರ ಎರಡನೇ ಬಾರಿಗೆ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಿದೆ. ಪ್ರತೀ ಜಿಲ್ಲೆಗಳಲ್ಲಿಯೂ ಮೂರು ದಿನಗಳ ಕಾಲ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದಾಗಿದೆ.

ರೇಷನ್‌ ಕಾರ್ಡ್‌ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ

ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಲಾಭವನ್ನು ಪಡೆಯಲು ಅನುಕೂಲ ಕಲ್ಪಿಸುವ ಸಲುವಾಗಿ ರಾಜ್ಯ ಸರಕಾರ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಮುಖ್ಯವಾಗಿ ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಲು ಪಡಿತರ ಚೀಟಿ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ ಆಗಿರಬೇಕು.

ಇದನ್ನೂ ಓದಿ : ಗೃಹಲಕ್ಷ್ಮೀ 2ನೇ ಕಂತಿನ ಹಣ ಎಲ್ಲರಿಗೂ ಸಿಗಲ್ಲ‌ ! ಯಾವುದಕ್ಕೂ ಒಮ್ಮೆ ಸ್ಟೇಟಸ್‌ ಚೆಕ್‌ ಮಾಡಿ

ಪಡಿತರ ಚೀಟಿಯಲ್ಲಿನ ಹೆಸರು, ವಿಳಾಸ ಸೇರಿದಂತೆ ಇತರ ತಿದ್ದುಪಡಿಗೆ ಕಡ್ಡಾಯವಾಗಿ ನೀವು ಆಧಾರ್‌ ಕಾರ್ಡ್‌ ಅನ್ನು ಕರ್ನಾಟಕ ಒನ್‌, ಬೆಂಗಳೂರು ಒನ್‌ ಅಥವಾ ಗ್ರಾಮ ಒನ್‌ ಕೇಂದ್ರಕ್ಕೆ ಕೊಂಡೊಯ್ಯಬೇಕು. ಜೊತೆಗೆ ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌ ಕೊಂಡೊಯ್ಯುವುದು ಉತ್ತಮ.

Karnataka Ration Card Update These Important New Documents Required Gruha Lakshmi Scheme
Image Credit to Original Source

ಇನ್ನು ಪಡಿತರ ಚೀಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಜೊತೆಗೆ ಮೊಬೈಲ್‌ ಸಂಖ್ಯೆಗೆ ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ಲಿಂಕ್‌ ಆಗಿರಬೇಕು. ಒಂದೊಮ್ಮೆ ಆರು ವರ್ಷದ ಒಳಗಿನ ಮಕ್ಕಳನ್ನು ಸೇರ್ಪಡೆ ಮಾಡುವುದಾದ್ರೆ ಜನನ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನು ಸಣ್ಣ ಮಕ್ಕಳನ್ನು ರೇಷನ್‌ ಕಾರ್ಡ್‌ಗೆ ಸೇರ್ಪಡೆಗೊಳಿಸಲು ಮಗುವಿನ ಜನನ ಪ್ರಮಾಣ ಪತ್ರದ ಜೊತೆಗೆ ಆಧಾರ್‌ ಕಾರ್ಡ್‌, ತಂದೆ ಹಾಗೂ ತಾಯಿಯ ಆಧಾರ್‌ ಕಾರ್ಡ್‌ ಕೂಡ ಕಡ್ಡಾಯವಾಗಿದೆ.

ಪಡಿತರ ಚೀಟಿಯಲ್ಲಿ ಯಾವೆಲ್ಲಾ ತಿದ್ದುಪಡಿಗೆ ಅವಕಾಶ :

ರೇಷನ್‌ ಕಾರ್ಡ್‌ನಲ್ಲಿ ಮುಖ್ಯವಾಗಿ ಪಡಿತರ ಕೇಂದ್ರದ ಬದಲಾವಣೆ, ಕಾರ್ಡ್‌ ರದ್ದು ಮಾಡುವುದು. ಅಥವಾ ಕಾರ್ಡಿಗೆ ಹೊಸದಾಗಿ ಕುಟುಂಬ ಸದಸ್ಯರ ಸೇರ್ಪಡೆ, ಕಾರ್ಡ್‌ನಲ್ಲಿ ಇರುವ ಸದಸ್ಯರ ಹೆಸರು ಬದಲಾವಣೆ ಜೊತೆಗೆ ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಸದ್ಯ ಅವಕಾಶವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ : ಗೃಹ ಸಾಲ, ಕಾರು ಸಾಲದ ಮೇಲೆ ಬಂಪರ್‌ ಆಫರ್‌ ಘೋಷಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಇನ್ನು ಹೊಸದಾಗಿ ಬಿಪಿಎಲ್‌ ಕಾರ್ಡು ಹೊಂದಲು ಬಯಸುವವರಿಗೆ ಸದ್ಯ ಸರಕಾರ ಅವಕಾಶವನ್ನು ಕಲ್ಪಿಸಿಲ್ಲ. ಶೀಘ್ರದಲ್ಲಿಯೇ ಹೊಸ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ಸರಕಾರ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಆದರೆ ಹೊಸ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ನಿಯಮವನ್ನು ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಗೃಹಲಕ್ಷ್ಮೀ ಯೋಜನೆಗೆ ತಿದ್ದುಪಡಿ ಅಗತ್ಯ :

ಬಹುತೇಕರು ರೇಷನ್‌ ಕಾರ್ಡ್‌ನಲ್ಲಿನ ಸಮಸ್ಯೆಯ ಕಾರಣದಿಂದಲೇ ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿಲ್ಲ. ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತೀ ತಿಂಗಳು 2000 ರೂಪಾಯಿಗಳನ್ನು ಮನೆಯ ಯಜಮಾನಿಯ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡುತ್ತಿದೆ.

ಆದರೆ ಕರ್ನಾಟಕ ಸರಕಾರ ಇದೀಗ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಲಾಭ ಇನ್ನೂ ಸಿಗದೇ ಇರುವ ಗೃಹಿಣಿಯರು ತಮ್ಮ ರೇಷನ್‌ ಕಾರ್ಡ್‌ನಲ್ಲಿ ಇರುವ ದೋಷಗಳನ್ನು ಸರಿ ಪಡಿಸಿಕೊಳ್ಳಬಹುದಾಗಿದೆ. ಒಂದೊಮ್ಮೆ ಮನೆಯ ಯಜಮಾನ ಪುರುಷರಾಗಿದ್ದರೆ, ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳುವುದು ಉತ್ತಮ.

Karnataka Ration Card Update These Important New Documents Required Gruha Lakshmi Scheme

Comments are closed.