Shut the noise: ಕೆ.ಎಲ್ ರಾಹುಲ್ ಸೆಲೆಬ್ರೇಷನ್ copy ಮಾಡಿದ ವಿಂಡೀಸ್ ಆಲ್ರೌಂಡರ್

ಗಯಾನ: ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟಿಗರು ಒಂದೊಂದು ಸೆಲೆಬ್ರೇಷನ್ ಮೂಲಕ ಗಮನ ಸೆಳೆಯುತ್ತಾರೆ. ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ಸೆಲೆಬ್ರೇಷನ್ ತುಂಬಾನೇ ಡಿಫ್ರೆಂಟ್. ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್”ನಲ್ಲಿ ರಾಹುಲ್ ಶತಕ ಬಾರಿಸಿದಾಗ ಕೈಯಿಂದ ಎರಡೂ ಕಿವಿಗಳನ್ನು ಮುಚ್ಚಿ (Shut the noise) ವಿಶೇಷ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಇದು ರಾಹುಲ್ ಅವರ ಟ್ರೇಡ್ ಮಾರ್ಕ್ ಶೈಲಿಯ ಸೆಲೆಬ್ರೇಷನ್.

ರಾಹುಲ್ ಅವರ ಈ ಸೆಲೆಬ್ರೇಷನ್ ಹೆಸರು “Shut the noise” ಸೆಲೆಬ್ರೇಷನ್. ಅಂದ್ರೆ ಕ್ರಿಕೆಟ್ ಮೈದಾನದ ಹೊರಗಿನ ನಕಾರಾತ್ಮಕ ಸುದ್ದಿಗಳನ್ನು ನಿರ್ಲಕ್ಷಿಸುತ್ತಿದ್ದೇನೆ ಅಂತ ಅರ್ಥ. ರಾಹುಲ್ ಅವರ ಈ ಸೆಲೆಬ್ರೇಷನ್ ಅನ್ನು ವೆಸ್ಟ್ ಇಂಡೀಸ್ ಆಲ್ರೌಂಡರ್ ಅಕೀಲ್ ಹೊಸೇನ್ (Akeal Hosein) ಕಾಪಿ ಮಾಡಿದ್ದಾರೆ.

ಭಾರತ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 10 ಎಶೆತಗಳಲ್ಲಿ ಅಜೇಯ 16 ರನ್ ಸಿಡಿಸಿ ವೆಸ್ಟ್ ಇಂಡೀಸ್ ತಂಡವನ್ನು ಗೆಲ್ಲಿಸಿದ ನಂತರ ಅಕೀಲ್ ಹೊಸೇನ್ “Shut the noise” ಸೆಲೆಬ್ರೇಷನ್ ಮೂಲಕ ಗಮನ ಸೆಳೆದಿದ್ದಾರೆ. ಅಕೀಲ್ ಹೊಸೇನ್ ವಿಕೆಟ್ ಪಡೆದಾಗಲೂ ಇದೇ ರೀತಿ ಸಂಭ್ರಮಿಸುತ್ತಾರೆ.

ಭಾರತ ಮತ್ತು ವಿಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಭಾನುವಾರ ಗಯಾನ ಪ್ರೊವಿಡೆನ್ಸ್ ಮೈದಾನದಲ್ಲಿ ನಡೆಯಿತು. 2ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ 2 ವಿಕೆಟ್’ಗಳ ಸೋಲು ಕಂಡಿರುವ ಕಾರಣ, 5 ಪಂದ್ಯಗಳ ಟಿ20 ಸರಣಿಯಲ್ಲಿ (India Vs West Indies T20 series) ಆತಿಥೇಯ ವೆಸ್ಟ್ ಇಂಡೀಸ್ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದನ್ನೂ ಓದಿ : Tilak Varma: ತಿಲಕ್ ವರ್ಮಾ “50” ಸೆಲೆಬ್ರೇಷನ್ ಸೀಕ್ರೆಟ್, ಇದು ರೋಹಿತ್ ಶರ್ಮಾ ಪುತ್ರಿಗಾಗಿ ಎಂಬ ಟೀಮ್ ಇಂಡಿಯಾ ಬ್ಯಾಟರ್

21 ವರ್ಷದ ಯುವ ಎಡಗೈ ಬ್ಯಾಟ್ಸ್’ಮನ್ ತಿಲಕ್ ವರ್ಮಾ ಅವರ ಚೊಚ್ಚಲ ಅರ್ಧಶತಕದ ನಡುವೆಯೂ ಭಾರತ 2ನೇ ಟಿ20 ಪಂದ್ಯದಲ್ಲಿ ಸೋಲು ಕಂಡಿತ್ತು. 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಸಿಡಿಸಿ, ಅಂತರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದರು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಟಿ20 ಪಂದ್ಯ ಮಂಗಳವಾರ (ಆಗಸ್ಟ್ 8) ಗಯಾನದ ಪ್ರೊವಿಡೆನ್ಸ್ ಮೈದಾನದಲ್ಲೇ ನಡೆಯಲಿದೆ.

Shut the noise: Windies all-rounder who copied KL Rahul’s celebration

Comments are closed.