Team India Players : “ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ..” ಭಾರತ Vs ವೆಸ್ಟ್ ಇಂಡೀಸ್ ಟಿ20 ಪಂದ್ಯದಲ್ಲಿ ರಾರಾಜಿಸಿದ ಕನ್ನಡ

ಗಯಾನ: ಈ ಜಗತ್ತಿನಲ್ಲಿ ಕನ್ನಡಿಗರಿಲ್ಲದ ಜಾಗವೇ ಇಲ್ಲ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಅಲ್ಲಿ ಒಬ್ಬ ಕನ್ನಡಿಗ (Team India Players) ಇದ್ದೇ ಇರ್ತಾನೆ. ಕನ್ನಡದ ಕಂಪನ್ನು ಪಸರಿಸುತ್ತಾ ಇರ್ತಾನೆ. ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ಮಧ್ಯೆ ದೂರದ ಕೆರಿಬಿಯನ್ ನಾಡಿನಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲೂ ಕನ್ನಡದ ಕಂಪು ಪಸರಿಸಿದೆ.

ಭಾರತ ಮತ್ತು ವಿಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಭಾನುವಾರ ಗಯಾನ ಪ್ರೊವಿಡೆನ್ಸ್ ಮೈದಾನದಲ್ಲಿ ನಡೆಯಿತು. 2ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ 2 ವಿಕೆಟ್’ಗಳ ಸೋಲು ಕಂಡಿರುವ ಕಾರಣ, 5 ಪಂದ್ಯಗಳ ಟಿ20 ಸರಣಿಯಲ್ಲಿ (India Vs West Indies T20 series) ಆತಿಥೇಯ ವೆಸ್ಟ್ ಇಂಡೀಸ್ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದ ವೇಳೆ ಕನ್ನಡಿಗನೊಬ್ಬ ಪ್ರೊವಿಡೆನ್ಸ್ ಮೈದಾನದ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಕನ್ನಡದಲ್ಲಿ ಬರೆದ ಪೋಸ್ಟರ್ ಒಂದನ್ನು ಹಿಡಿದಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. “ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ” ಎಂಬ ಸಾಲುಗಳನ್ನು ಆ ಪೋಸ್ಟರ್’ನಲ್ಲಿ ಬರೆಯಲಾಗಿತ್ತು. ಇದು ವರನಟ ಡಾ.ರಾಜ್ ಕುಮಾರ್ ಅವರು ಅಭಿನಯಿಸಿರುವ ಆಕಸ್ಮಿಕ ಚಿತ್ರದ “ಹುಟ್ಟಿದೇ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂದು ಹಾಡಿನ ಸಾಲುಗಳು. ಈ ಹಾಡನ್ನು ಸಂಗೀತ ಮಾಂತ್ರಿಕ ಹಂಸಲೇಖ ಬರೆದಿದ್ದಾರೆ. ಇದನ್ನೂ ಓದಿ : Virat Kohli : ಕಿಂಗ್ ಕೊಹ್ಲಿಗೆ ಕ್ರಿಕೆಟ್’ನಿಂದ 2 ವಾರ ಬ್ರೇಕ್, ಬೆಂಗಳೂರಿಗೆ ಬರಲಿದ್ದಾರೆ ವಿರಾಟ್; ಕಾರಣ ಗೊತ್ತೇ?

21 ವರ್ಷದ ಯುವ ಎಡಗೈ ಬ್ಯಾಟ್ಸ್’ಮನ್ ತಿಲಕ್ ವರ್ಮಾ ಅವರ ಚೊಚ್ಚಲ ಅರ್ಧಶತಕದ ನಡುವೆಯೂ ಭಾರತ 2ನೇ ಟಿ20 ಪಂದ್ಯದಲ್ಲಿ ಸೋಲು ಕಂಡಿತ್ತು. 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಸಿಡಿಸಿ, ಅಂತರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದರು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಟಿ20 ಪಂದ್ಯ ಮಂಗಳವಾರ (ಆಗಸ್ಟ್ 8) ಗಯಾನದ ಪ್ರೊವಿಡೆನ್ಸ್ ಮೈದಾನದಲ್ಲೇ ನಡೆಯಲಿದೆ.

Team India Players : “You can learn a million languages, you can play only one language.” India Vs West Indies T20 Match Kannada.

Comments are closed.