ಸೋಮವಾರ, ಏಪ್ರಿಲ್ 28, 2025
HomeSportsCricketSiraj Vs Litton Das: ಕೆಣಕಿದ ಬಾಂಗ್ಲಾ ದಾಂಡಿಗ ಮುಂದಿನ ಎಸೆತದಲ್ಲೇ ಕ್ಲೀನ್ ಬೌಲ್ಡ್.. ಸಿರಾಜ್...

Siraj Vs Litton Das: ಕೆಣಕಿದ ಬಾಂಗ್ಲಾ ದಾಂಡಿಗ ಮುಂದಿನ ಎಸೆತದಲ್ಲೇ ಕ್ಲೀನ್ ಬೌಲ್ಡ್.. ಸಿರಾಜ್ ಆರ್ಭಟದ ವೀಡಿಯೊ ವೈರಲ್

- Advertisement -

ಛಟ್ಟೋಗ್ರಾಮ್: Siraj Vs Litton Das : ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ (India vs Bangladesh test match) ಪಂದ್ಯದಲ್ಲಿ ಕೆಣಕಿದ ಬಾಂಗ್ಲಾದೇಶದ ದಾಂಡಿಗನನ್ನು ಕ್ಲೀನ್ ಬೌಲ್ಡ್ ಮಾಡ ಸೇಡು ತೀರಿಸಿಕೊಂಡಿದ್ದಾರೆ ಟೀಮ್ ಇಂಡಿಯಾ ಯುವ ವೇಗಿ ಮೊಹಮ್ಮದ್ ಸಿರಾಜ್. ಛಟ್ಟೋಗ್ರಾಮ್’ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ 2ನೇ ದಿನ ಈ ಘಟನೆ ನಡೆದಿದೆ. ಭಾರತದ 404 ರನ್’ಗಳಿಗುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ಬಾಂಗ್ಲಾದೇಶಕ್ಕೆ ಮೊಹಮ್ಮದ್ ಸಿರಾಜ್ (Mohammed Siraj) ಇನ್ನಿಂಗ್ಸ್’ನ ಮೊದಲ ಎಸೆತದಲ್ಲೇ ಆಘಾತ ನೀಡಿದರು. ಸಿರಾಜ್ ಬೌಲಿಂಗ್’ನಲ್ಲಿ ಬಾಂಗ್ಲಾ ಓಪನರ್ ನಜ್ಮುಲ್ ಹೊಸೇನ್ ಶಾಂತೊ ವಿಕೆಟ್ ಕೀಪರ್ ರಿಷಬ್ ಪಂತ್’ಗೆ ಕ್ಯಾಚಿತ್ತು ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಯಾಸಿರ್ ಅಲಿಯನ್ನು ವೇಗಿ ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದ್ರು. 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಲಿಟ್ಟನ್ ದಾಸ್ ಐದು ಬೌಂಡರಿಗಳನ್ನು ಬಾರಿಸಿ ತಿರುಗೇಟು ನೀಡುವ ಹಂತದಲ್ಲಿದ್ದಾಗ ವೇಗಿ ಮೊಹಮ್ಮದ್ ಸಿರಾಜ್ ಜೊತೆ ಮಾತಿನ ಚಕಮಕಿ ನಡೆಯಿತು.

13.1ನೇ ಓವರ್’ನಲ್ಲಿ ಮೊಹಮ್ಮದ್ ಸಿರಾಜ್’ರನ್ನು ಲಿಟ್ಟನ್ ದಾಸ್ ಕೆಣಕಿದ್ರು. ಮುಂದಿನ ಎಸೆತದಲ್ಲೇ ಲಿಟ್ಟನ್ ದಾಸ್ ಸ್ಟಂಪ್ ಎಗರಿಸಿ ಪೆವಿಲಿಯನ್ ಹಾದಿ ತೋರಿಸಿದ ಸಿರಾಜ್ ಸೇಡು ತೀರಿಸಿಕೊಂಡರು. ವಿಕೆಟ್ ಪಡೆದ ಸಂಭ್ರಮದಲ್ಲಿ ಸಿರಾಜ್’ಗೆ ಜೊತೆಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕೈ ಸನ್ನೆ ಮಾಡುವ ಮೂಲಕ ಲಿಟ್ಟನ್ ದಾಸ್’ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/AdnanAn71861809/status/1603312743389360128?s=20&t=r29qYWNhQ5LUIlsj1fHmLQ

ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್’ನಲ್ಲಿ 404 ರನ್ ಗಳಿಸಿರುವ ಭಾರತ ಆತಿಥೇಯರ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದೆ. 6 ವಿಕೆಟ್ ನಷ್ಟಕ್ಕೆ 278 ರನ್’ಗಳಿಂದ ದ್ವಿತೀಯ ದಿನದಾಟ ಆರಂಭಿಸಿದ ಭಾರತ, ಕೊನೆಯ 4 ವಿಕೆಟ್’ಗಳ ನೆರವಿನಿಂದ 126 ರನ್ ಕಲೆ ಹಾಕಿತು. ಕೆಳಕ್ರಮಾಂಕದಲ್ಲಿ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅರ್ಧಶತಕ ಬಾರಿಸಿದ್ರೆ, ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ 40 ರನ್ ಗಳಿಸಿ ಔಟಾದ್ರು. ಅಶ್ವಿನ್-ಕುಲ್ದೀಪ್ ಯಾದವ್ ಜೋಡಿ 8ನೇ ವಿಕೆಟ್’ಗೆ 87 ರನ್ ಸೇರಿಸಿ ಭಾರತಕ್ಕೆ ಆಸರೆಯಾಯಿತು.

ನಂತರ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 2ನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದ್ದು, 271 ರನ್’ಗಳ ಭಾರೀ ಹಿನ್ನಡೆಯಲ್ಲಿದೆ. ಫಾಲೋ ಆನ್’ನಿಂದ ಪಾರಾಗಲು ಬಾಂಗ್ಲಾದೇಶ ಇನ್ನೂ 71 ರನ್ ಗಳಿಸಬೇಕಿದೆ.‌

ಇದನ್ನೂ ಓದಿ : Ravindra Jadeja: ದಕ್ಷಿಣ ಭಾರತದ ಪಂಚೆ-ಶಲ್ಯದಲ್ಲಿ ಮಿಂಚಿದ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜ

ಇದನ್ನೂ ಓದಿ : Arjun Tendulkar Ranaji Century : ಅಪ್ಪನಂತೆ ಮಗ.. ರಣಜಿ ಪದಾರ್ಪಣೆಯಲ್ಲೇ ಅರ್ಜುನ್ ತೆಂಡೂಲ್ಕರ್ ಶತಕ

Siraj Vs Litton Das Mohammed Siraj Perfect Revenge After Sledging With Linton IND vs BAN

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular