Man trapped in Cave: 30 ಗಂಟೆಗಳ ಕಾಲ ಗುಹೆಯೊಳಗೆ ಸಿಲುಕಿದ್ದ ಯುವಕನ ರಕ್ಷಣೆ; 15 ಗಂಟೆಗಳ ರಕ್ಷಣಾ ಕಾರ್ಯ ಸಕ್ಸಸ್

ತೆಲಂಗಾಣ: Man trapped in Cave: ಆಯತಪ್ಪಿ ಮ್ಯಾನ್ ಹೋಲ್ ಒಳಗಡೆ ಬಿದ್ದು ರಕ್ಷಣಾ ಕಾರ್ಯ ನಡೆದ ಅದೆಷ್ಟೋ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಕಡೆ ಕಳೆದ 2 ದಿನಗಳ ಹಿಂದೆ ಅರಣ್ಯ ಪ್ರದೇಶದಲ್ಲಿರುವ ಗುಹೆಯೊಳಗೆ ಸಿಕ್ಕಿಬಿದ್ದಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಸಿಂಗರಾಯಪಳ್ಳಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಕಳೆದ 2 ದಿನಗಳ ಹಿಂದೆ ಮಂಗಳವಾರ ಸಂಜೆ (ಡಿ.13) ಸಿಂಗರಾಯಪಳ್ಳಿ ಅರಣ್ಯ ಪ್ರದೇಶದಲ್ಲಿರುವ ಎರಡು ಬಂಡೆಗಳ ನಡುವಿನ 15 ಅಡಿ ಆಳದ ಗುಹೆಯೊಳಗೆ ಯುವಕನೊಬ್ಬ ಸಿಲುಕಿದ್ದ. 45 ಗಂಟೆ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಣೆ ಮಾಡಲಾಗಿದೆ. ಯುವಕನನ್ನು ರೆಡ್ಡಿಪೇಟ್ ಜಿಲ್ಲೆಯ ರಾಜು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Veena Kapoor: ಖ್ಯಾತ ಹಿರಿಯ ನಟಿ ವೀಣಾ ಕಪೂರ್ ಸತ್ತಿಲ್ಲ; ಕೇಸ್ ಗೆ ಹೊಸ ಟ್ವಿಸ್ಟ್

2 ದಿನಗಳ ಹಿಂದೆ ಸ್ನೇಹಿತರ ಜೊತೆ ಬೇಟೆಗೆಂದು ಅರಣ್ಯಪ್ರದೇಶಕ್ಕೆ ಹೋಗಿದ್ದಾಗ ರಾಜುವಿನ ಮೊಬೈಲ್ ಕಳೆದುಹೋಗಿದೆ. ಅದಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆತ ಕಾಲುಜಾರಿ 2 ಬಂಡೆಗಳ ನಡುವೆ ರೂಪುಗೊಂಡಿದ್ದ 15 ಅಡಿ ಆಳದ ಗುಹೆಯೊಳಗೆ ಬಿದ್ದಿದ್ದಾನೆ. ಕೂಡಲೇ ಸ್ನೇಹಿತರು ರಾಜು ಕುಟುಂಬಸ್ಥರಿಗೆ ಸುದ್ದಿ ತಿಳಿಸಿದ್ದಾರೆ. ಎಲ್ಲರೂ ಎಷ್ಟು ಪ್ರಯತ್ನಿಸಿದರೂ ಆತನನ್ನು ಮೇಲಕ್ಕೆತ್ತಲಾಗಲಿಲ್ಲ. ಹೀಗಾಗಿ ಬುಧವಾರ (ಡಿ.14) ಮಧ್ಯಾಹ್ನದವರೆಗೆ ಪ್ರಯತ್ನಿಸಿ ಸೋತುಹೋದ ಯುವಕನ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.

ರಕ್ಷಣಾ ಅಧಿಕಾರಿಗಳ ಜೊತೆ ಸ್ಥಳಕ್ಕೆ ಆಗಮಿಸಿ ಪೊಲೀಸರು ಆತನನ್ನು ಮೇಲಕ್ಕೆತ್ತಲು ನಾನಾ ವಿಧದ ಪ್ರಯತ್ನಗಳನ್ನು ನಡೆಸಿದ್ದಾರೆ. ಜೆಸಿಬಿ ನೆರವಿನಿಂದ ಬಂಡೆಗಳನ್ನು ಸರಿಸಿ ಕೊನೆಗೂ 45 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಯುವಕನನ್ನು ರಕ್ಷಣೆ ಮಾಡಲಾಗಿದೆ. ಈ ನಡುವೆ ಯುವಕ ರಾಜುಗೆ ಆಹಾರ ಹಾಗೂ ಓಆರ್ ಎಸ್ ಕೊಟ್ಟು ಆತನಿಗೆ ಧೈರ್ಯವನ್ನು ತುಂಬುವ ಕೆಲಸವನ್ನೂ ಪೊಲೀಸರು ಮಾಡಿದ್ದಾರೆ. ಕೊನೆಗೂ 30 ಗಂಟೆಗಳ ಕಾಲ ಗುಹೆಯೊಳಗೆ ಸಿಲುಕಿದ್ದ ರಾಜು ಸಾವನ್ನು ಗೆದ್ದು ಮೇಲಕ್ಕೆ ಬಂದಿದ್ದಾನೆ.

ಇದನ್ನೂ ಓದಿ: ಹಾಸ್ಟೆಲ್‌ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

Man trapped in Cave: Rescue of a young man trapped in a cave for 30 hours and 15 hours rescue operation successful

Comments are closed.