ಭಾನುವಾರ, ಏಪ್ರಿಲ್ 27, 2025
HomeSportsCricketGanguly and Virat Kohli: ಮುನಿಸು ಮರೆತ ದಾದಾ, ಕಿಂಗ್: ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಚಿನ್ನಸ್ವಾಮಿ...

Ganguly and Virat Kohli: ಮುನಿಸು ಮರೆತ ದಾದಾ, ಕಿಂಗ್: ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಚಿನ್ನಸ್ವಾಮಿ !

- Advertisement -

Sourav Ganguly and Virat Kohli : ಬೆಂಗಳೂರು: ಅವರಿಬ್ಬರೂ ಭಾರತೀಯ ಕ್ರಿಕೆಟ್’ನ ದಿಗ್ಗಜ ಆಟಗಾರರು, ದಿಗ್ಗಜ ನಾಯಕರು. ಆದರೆ ಕಳೆದ ಕೆಲ ವರ್ಷಗಳಿಂದ ಅವರಿಬ್ಬರ ಮಧ್ಯೆ ಮಾತಿಲ್ಲ, ಕಥೆಯಿಲ್ಲ.. ಒಬ್ಬರ ಮುಖವನ್ನು ಇನ್ನೊಬ್ಬರು ನೋಡುತ್ತಲೇ ಇರಲಿಲ್ಲ. ಆದರೆ ವಿರಾಟ್‌ ಕೊಹ್ಲಿ (Virat Kohli ) ಹಾಗೂ ಸೌರವ್‌ ಗಂಗೂಲಿ (Sourav Ganguly ) ಅವರ ಇಬ್ಬರ ನಡುವಿನ ಮುನಿಸಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತೆರೆ ಬಿದ್ದಿದೆ.

Sourav Ganguly and Virat Kohli have forgotten their hatred at DC vs RCB In Chinnaswamy Stadium
Image Credit to Original Source

ಸೂಪರ್ ಸಂಡೇ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್-2024 ಟೂರ್ನಿಯ 62ನೇ ಲೀಗ್ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bengaluru), ಡೆಲ್ಲಿ ಕ್ಯಾಪಿಟಲ್ಸ್ (Dehli Capitals) ತಂಡವನ್ನು 47 ರನ್’ಗಳಿಂದ ಭರ್ಜರಿಯಾಗಿ ಬಗ್ಗು ಬಡಿದು ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ (RCB) ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ (DC), ಆರ್’ಸಿಬಿ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿ 19.1 ಓವರ್’ ಗಳಲ್ಲಿ ಕೇವಲ 140 ರನ್’ಗಳಿಗೆ ಆಲೌಟಾಗಿ ಪ್ಲೇ ಆಫ್ ರೇಸ್’ನಿಂದ ಬಹುತೇಕ ಹೊರ ಬಿದ್ದಿದೆ.

Sourav Ganguly and Virat Kohli have forgotten their hatred at DC vs RCB In Chinnaswamy Stadium
Image Credit to Original Source

ಪಂದ್ಯದ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕ ಸೌರವ್ ಗಂಗೂಲಿ (Sourav Ganguly) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಮುಖಾಮುಖಿಯಾಗಿದ್ದಾರೆ. ಈ ವೇಳೆ ಇಬ್ಬರೂ ಹಸ್ತಲಾಘವ ಮಾಡಿದ್ದಾರೆ. ಪಂದ್ಯದ ಗೆಲುವಿಗಾಗಿ ಕೊಹ್ಲಿ ಅವನ್ನು ಗಂಗೂಲಿ ಅಭಿನಂದಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : RCB Big Offer To KL Rahul: ಎಲ್ಲಾ ನಿನ್ನವರೇ.. ಇಲ್ಲಿ ಯಾರೂ ನಿನ್ನನ್ನು ಬೈಯುವವರಿಲ್ಲ.. ರಾಹುಲ್’ಗೆ ಹೀಗೊಂದು RCB ಆಫರ್..!

https://x.com/mufaddal_vohra/status/1789720679471804656

ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಕಳೆದ ಎರಡು-ಮೂರು ವರ್ಷಗಳಿಂದ ಎಲ್ಲವೂ ಸರಿಯಿರಲಿಲ್ಲ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗಲೇ ವಿರಾಟ್ ಕೊಹ್ಲಿ ಭಾರತ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಯಲು ಬಯಸಿದ್ದರು. ಆದರೆ ಟಿ20 ನಾಯಕತ್ವ ತೊರೆದ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವ ದಿಂದಲೂ ಬಿಸಿಸಿಐ ಕೆಳಗಿಳಿಸಿತ್ತು. ಇದರಿಂದ ಕೆರಳಿದ್ದ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ನೀಡಿ ಒಬ್ಬ ಸಾಮಾನ್ಯ ಆಟಗಾರನಾಗಿ ಭಾರತ ತಂಡದಲ್ಲಿ ಮುಂದುವರಿಯಲು ಬಯಸಿದ್ದರು.

ಇದನ್ನೂ ಓದಿ : T20 World Cup 2024: ಟಿ20 ವಿಶ್ವಕಪ್’ನಲ್ಲಿ ಅಮೆರಿಕ ಪರ ಆಡಲಿರುವ ಚಿಕ್ಕಮಗಳೂರು ಯುವಕ!

ಈ ಘಟನೆಯ ನಂತರ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಮಧ್ಯೆ ಮನಸ್ಥಾಪ ಶುರುವಾಗಿತ್ತು. ನಂತರದ ದಿನಗಳಲ್ಲಿ ಇಬ್ಬರೂ ಪರಸ್ಪರ ಮುಖಾಮುಖಿಯಾದರೂ ಮಾತುಕತೆ ಇರಲಿಲ್ಲ. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬರೂ ಮನಸ್ತಾಪ ಮರೆತು ಹಸ್ತಲಾಘವ ಮಾಡುವ ಮೂಲಕ ಕ್ರಿಕೆಟ್ ಪ್ರಿಯರ ಸಂತಸಕ್ಕೆ ಕಾರಣರಾಗಿದ್ದಾರೆ.

ಇದನ್ನೂ ಓದಿ : Dhoni Retired From IPL ? ಚೆನ್ನೈನಲ್ಲಿ ಕೊನೆಯ ಐಪಿಎಲ್ ಪಂದ್ಯವಾಡುತ್ತಿದ್ದಾರಾ “ತಲಾ” ಧೋನಿ ? ಸುಳಿವು ಕೊಟ್ಟಿತಾ ಚೆನ್ನೈ ಸೂಪರ್ ಕಿಂಗ್ಸ್?

Sourav Ganguly and Virat Kohli have forgotten their hatred at DC vs RCB In Chinnaswamy Stadium

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular