ಮುಂಬೈ: (Sourav Ganguly snubs by BCCI)ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ- ಬಿಸಿಸಿಐಗೆ (BCCI) ಹೊಸ ಅಧ್ಯಕ್ಷರು ಬರುವುದು ಖಚಿತವಾಗಿದೆ. ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿಯವರ (Sourav ganguly) ಅಧಿಕಾರಾವಧಿ ಮುಕ್ತಾಯವಾಗಿರುವ ಕಾರಣ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ (Roger Binny), ಬಿಸಿಸಿಐನ ನೂತನ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರ ಅವಿರೋಧ ಆಯ್ಕೆ ಖಚಿತವಾಗಿದೆ.
ಮತ್ತೊಂದೆಡೆ ಹಾಲಿ ಕಾರ್ಯದರ್ಶಿ ಜಯ್ ಶಾ (Jay Shah), ತಮ್ಮ ಸ್ಥಾನದಲ್ಲಿ ಮತ್ತೊಂದು ಅವಧಿಗೆ ಮುಂದುವರಿಯಲು ಬಯಸಿದ್ದು, ಅವರ ಅವಿರೋಧ ಆಯ್ಕೆಯೂ ಖಚಿತ. ನಿರ್ಗಮಿತ ಅಧ್ಯಕ್ಷ ಸೌರವ್ ಗಂಗೂಲಿ ಇನ್ನೊಂದು ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಲು ಬಯಸಿದ್ದರು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು, ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳಿಗೆ ಗಂಗೂಲಿ ಅಧ್ಯಕ್ಷರಾಗಿ ಮುಂದುವರಿಯುವುದು ಇಷ್ಟವಿರಲಿಲ್ಲ. ಗಂಗೂಲಿ ಕಾರ್ಯವೈಖರಿ ಬಗ್ಗೆ ಎಲ್ಲರೂ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಮತ್ತೊಂದು ಅವಧಿಗೆ ಮುಂದುವರಿಯಲು ಸುಪ್ರೀಂ ಕೋರ್ಟ್ ಅನುವು ಮಾಡಿ ಕೊಟ್ಟರೂ, ಗಂಗೂಲಿಗೆ ಬಿಸಿಸಿಐನಲ್ಲೇ ಬೆಂಬಲ ಸಿಗಲಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
(Sourav Ganguly snubs by BCCI)ಬಿಸಿಸಿಐ ಅಧ್ಯಕ್ಷ ಸ್ಥಾನದ ಬದಲು ಐಪಿಎಲ್ ಮುಖ್ಯಸ್ಥ ಹುದ್ದೆಯನ್ನು ನೀಡುವುದಾಗಿ ಗಂಗೂಲಿ ಅವರಿಗೆ ಹೇಳಲಾಗಿತ್ತು. ಆದರೆ ಇದನ್ನು ಗಂಗೂಲಿ ಒಪ್ಪಿಕೊಂಡಿಲ್ಲ.”ಸೌರವ್ ಗಂಗೂಲಿ ಅವರಿಗೆ ಐಪಿಎಲ್ ಮುಖ್ಯಸ್ಥ ಸ್ಥಾನವನ್ನು ಆಫರ್ ಮಾಡಲಾಗಿತ್ತು. ಆದರೆ ಅವರು ಅದನ್ನು ನಯವಾಗಿಯೇ ತಿರಸ್ಕರಿಸಿದರು. ಬಿಸಿಸಿಐ ಅಧ್ಯಕ್ಷರಾದ ನಂತರ ಮತ್ತೆ ಬಿಸಿಸಿಐ ಅಧೀನದಲ್ಲಿ ಬರುವ ಸಣ್ಣ ಜವಾಬ್ದಾರಿಯನ್ನು ಒಪ್ಪಿಕೊಳ್ಳಲು ಅವರು ತಯಾರಿರಲಿಲ್ಲ. ಅವರು ಬಿಸಿಸಿಐ ಅಧ್ಯಕ್ಷರಾಗಿಯೇ ಮುಂದುವರಿಯಲು ಬಯಸಿದ್ದರು” ಎಂದು ಕ್ರಿಕೆಟ್ ಮಂಡಳಿಯ ಆಪ್ತ ಮೂಲಗಳು ಹೇಳುತ್ತಿವೆ. ಅಕ್ಟೋಬರ್ 18ರಂದು ಮುಂಬೈನಲ್ಲಿ ಬಿಸಿಸಿಐ ವಾರ್ಷಿಕ ಮಹಾಸಭೆ ನಡೆಯಲಿದ್ದು, ಅವತ್ತೇ ಚುನಾವಣೆ ನಡೆಯಲಿದೆ.
ಬಿಸಿಸಿಐ ಹಾಲಿ ಖಜಾಂಚಿಯಾಗಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಾಲ್ ಐಪಿಎಲ್’ನ ನೂತನ ಮುಖ್ಯಸ್ಥರಾಗಲಿದ್ದಾರೆ. ಇದುವರೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಐಪಿಎಲ್ ಮುಖ್ಯಸ್ಥರಾಗಿದ್ದರು.
ಇದನ್ನೂ ಓದಿ : Sourav Ganguly : ಸೌರವ್ ಗಂಗೂಲಿಗೆ ಬಿಜೆಪಿಯಿಂದ ಅವಮಾನ.. ರಾಜಕೀಯ ಜಟಾಪಟಿಗೆ ತಿರುಗಿದ ಬಿಸಿಸಿಐ ಅಧ್ಯಕ್ಷಗಿರಿ
ಇದನ್ನೂ ಓದಿ : Dhoni Inaugurates Super Kings Academy : ಹೊಸೂರಿನ ಧೋನಿ ಗ್ಲೋಬಲ್ ಸ್ಕೂಲ್‌ನಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿ ಉದ್ಘಾಟಿಸಿದ ಮಾಹಿ
ಬಿಸಿಸಿಐ ಪದಾಧಿಕಾರಿಗಳ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ವಿವರ:
- ಅಧ್ಯಕ್ಷ: ರೋಜರ್ ಬಿನ್ನಿ
- ಕಾರ್ಯದರ್ಶಿ: ಜಯ್ ಶಾ
- ಉಪಾಧ್ಯಕ್ಷ: ರಾಜೀವ್ ಶುಕ್ಲಾ
- ಜಂಟಿ ಕಾರ್ಯದರ್ಶಿ: ದೇವಜಿತ್ ಸೈಕಿಯಾ
- ಖಜಾಂಚಿ: ಆಶಿಶ್ ಶೆಲ್ಲರ್
“Shaw” shock for Ganguly who wanted to continue as BCCI president!