Aadhar Card Renewal : ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಕಳೆದಿದ್ಯಾ ? ಹಾಗಾದ್ರೆ ಈ ಸ್ಟೋರಿ ತಪ್ಪದೇ ಓದಿ

ನವದೆಹಲಿ : ದೇಶದ ನಾಗರಿಕರಿಗೆ ಕೇಂದ್ರ ಸರಕಾರದಿಂದ ಮಹತ್ವದ ಅವಕಾಶವನ್ನು ನೀಡಿದೆ. ಕಳೆದ 10 ವರ್ಷಗಳ ಹಿಂದೆ ಮಾಡಿದ(Aadhar Card Renewal) ಆಧಾರ್‌ ಕಾರ್ಡ್‌ನ ವಿವರವನ್ನು ಇದುವರೆಗೂ ತಿದ್ದುಪಡಿ ಮಾಡದೇ ಇರುವರಿಗೆ ಈಗ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರಲ್ಲಿ ಮೊದಲು ಮಾಡಿದ ಆಧಾರ್‌ ಕಾರ್ಡ್‌ನಲ್ಲಿರುವ ವಿವರವನ್ನು ನವೀಕರಿಸಬಹುದಾಗಿದೆ. ಯುಐಡಿಎಐ(UIDAI) ಪ್ರಕಾರ, 10 ವರ್ಷಗಳ ಹಿಂದೆ ಪಡೆದ ತಮ್ಮ ಆಧಾರ್‌ ಕಾರ್ಡ್‌ನ್ನು ನಂತರದ ದಿನಗಳಲ್ಲಿ ಒಂದು ಬಾರಿಯು ಅಪ್ಡೇಟ್‌ ಮಾಡದ ವ್ಯಕ್ತಿಗಳು, ತಮ್ಮ ಆಧಾರ್‌ ಸಂಖ್ಯೆ, ಅದಕ್ಕೆ ಸಂಬಂಧಪಟ್ಟ ವಿವರವನ್ನು ನವೀಕರಿಸಲು ವಿನಂತಿಸಲಾಗಿದೆ.

ನವೀಕರಿಸುವ ವಿಧಾನ :

ದೇಶದ ಪ್ರತಿಯೊಬ್ಬ ನಾಗರಿಕರ ಗುರುತಿನ ಪುರಾವೆಗೊಸ್ಕರ ಆಧಾರ್‌ ಕಾರ್ಡ್‌ನ್ನು ಬಿಡುಗಡೆ ಮಾಡಲಾಗಿತ್ತು. ಈ ಆಧಾರ್‌ ಕಾರ್ಡ್‌ನಲ್ಲಿ ಬರುವ ಸಂಖ್ಯೆಯ ಮೂಲಕ ಸರಕಾರದ ವಿವಿಧ ಯೋಜನೆಗಳು ಹಾಗೂ ಸೇವೆಗಳನ್ನು ಪಡೆಯಲು ಬಳಸಲಾಗುತ್ತಿದೆ. ಇನ್ಮುಂದೆಯೂ ಸರಕಾರದ ಯೋಜನೆ, ಸೇವೆಗಳನ್ನು ಪಡೆಯಲು ದೇಶದ ನಾಗರಿಕರು ಇತ್ತೀಚಿನ ವೈಯಕ್ತಿಕ ವಿವರಗಳೊಂದಿಗೆ (Aadhar Card Renewal)ಆಧಾರ್‌ ಕಾರ್ಡ್‌ನ್ನು ನವೀಕರಿಸಬೇಕಾಗಿದೆ. ಇದರಿಂದ ಆಧಾರ್‌ ದೃಢೀಕರಣ ಅಥವಾ ಪರಿಶೀಲನೆಯಲ್ಲಿ ಯಾವುದೇ ತೊಡುಕುಗಳು ಉಂಟಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಯುಐಡಿಎಐ (UIDAI)ಪ್ರಕಾರ, ಆಧಾರ್‌ ಕಾರ್ಡ್‌ ಹೊಂದಿರುವವರಿಗೆ ನಿಗದಿತ ಶುಲ್ಕದೊಂದಿಗೆ ದಾಖಲೆಗಳನ್ನು ನವೀಕರಿಸುವ ಸೌಲಭ್ಯವನ್ನು ಕಲ್ಪಿಸಿದೆ. ಈ ಮೂಲಕ ಆಧಾರ್‌ ಕಾರ್ಡ್‌ ಹೊಂದಿರುವ ನಾಗರಿಕರು ಆಧಾರ್‌ನಲ್ಲಿರುವ ವೈಯಕ್ತಿಕ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ನವೀಕರಿಸಬಹುದಾಗಿದೆ. ಈ ಸೇವೆಗಾಗಿ ಮೈ ಆಧಾರ್‌ ಪೋರ್ಡಲ್‌ ಮೂಲಕ ಆನ್‌ಲೈನ್‌ನಲ್ಲಿ ಪ್ರವೇಶೀಸಬಹುದಾಗಿದೆ ಅಥವಾ ಈ ಸೇವೆಯನ್ನು ಪಡೆಯಲು ಯಾವುದೇ ಹತ್ತಿರದ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ : Aishwarya rai photo on student admit card :ಪರೀಕ್ಷೆ ಹಾಲ್‌ ಟಿಕೆಟ್‌ ನಲ್ಲಿ ಐಶ್ವರ್ಯಾ ರೈ ಪೋಟೋ : ಶಾಕ್‌ ಆದ ವಿದ್ಯಾರ್ಥಿನಿ

ಇದನ್ನೂ ಓದಿ : Cow As National Animal: ‘ಇದು ಕೋರ್ಟ್​ನ ಕೆಲಸವೇ..?’ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದವರಿಗೆ ಸುಪ್ರೀಂಕೋರ್ಟ್ ಪ್ರಶ್ನೆ

ಗಮನಿಸಬೇಕಾದ ವಿಷಯವೆಂದರೆ ಇದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್‌ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿರುತ್ತದೆ. ಭಾರತದ ನಾಗರಿಕರಿಗೆ ಆಧಾರ್‌ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ಸೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದೆ. ಹೀಗಾಗಿ ಯುಐಡಿ ಮೂಲಕ ಅಸಲಿ ಹಾಗೂ ನಕಲಿ ಗುರುತನ್ನು ಸುಲಭವಾಗಿ ಪರಿಶೀಲಸಬಹುದಾಗಿದೆ ಹಾಗೆ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ದೃಢೀಕರಿಸಬಹುದಾಗಿದೆ. ಇನ್ನೂ ಆಧಾರ್‌ ಕಾರ್ಡ್‌ನ ನವೀಕರಣವು ಕಡ್ಡಾಯವೆಂದು ಯುಐಡಿಎಐ ಇನ್ನೂ ಸ್ಪಷ್ಟನೆ ನೀಡಿಲ್ಲ.

Has it been 10 years since Aadhar card was made? So read this story without missing a beat

Comments are closed.