ಭಾನುವಾರ, ಏಪ್ರಿಲ್ 27, 2025
HomeSportsIPL 2021: ಸಿಕ್ಸರ್‌ ಬಾರಿಸಿ CSK ಗೆಲ್ಲಿಸಿದ ಮಹೇಂದ್ರ ಸಿಂಗ್‌ ಧೋನಿ : ಕಣ್ಣೀರಿಟ್ಟ ಅಭಿಮಾನಿ...

IPL 2021: ಸಿಕ್ಸರ್‌ ಬಾರಿಸಿ CSK ಗೆಲ್ಲಿಸಿದ ಮಹೇಂದ್ರ ಸಿಂಗ್‌ ಧೋನಿ : ಕಣ್ಣೀರಿಟ್ಟ ಅಭಿಮಾನಿ ಬಾಲಕಿ : Viral Video

- Advertisement -

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲುವು ಕಂಡಿದೆ. ಈ ಮೂಲಕ ಮಹೇಂದ್ರ ಸಿಂಗ್‌ ಧೋನಿ ಪಡೆ ಒಂಬತ್ತನೇ ಬಾರಿಗೆ ಐಪಿಎಲ್‌ ಫೈನಲ್‌ ಪ್ರವೇಶಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯದಲ್ಲಿ ಧೋನಿ ಸಿಕ್ಸರ್‌ ಬಾರಿಸಿ ತಂಡಕ್ಕೆ ಗೆಲುವು ತಂದು ಕೊಡುತ್ತಿದ್ದಂತೆಯೇ, ಇತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಬಾಲಕಿಯೋರ್ವಳು ಕಣ್ಣೀರು ಸುರಿಸಿದ್ದಾಳೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗಿದೆ.

ಕಳೆದ ಬಾರಿಯ ಐಪಿಎಲ್‌ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ ತಂಡವಾಗಿ ಫ್ಲೇ ಆಫ್‌ ಪ್ರವೇಶಿಸಿತ್ತು. ಆದರೆ ಫೈನಲ್‌ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಇದು ಚೆನ್ನೈ ಪ್ರೇಕ್ಷಕರಿಗೆ ಬೇಸರವನ್ನುಂಟು ಮಾಡಿತ್ತು. ಆದರೆ ಈ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಉತ್ತಮ ಪ್ರದರ್ಶನ ನೀಡಿದ್ದು ಫೈನಲ್‌ ಪ್ರವೇಶಿಸಿದೆ.

ಮಹೇಂದ್ರ ಸಿಂಗ್‌ ಧೋನಿ ಅಂತರಾಷ್ಟ್ರೀಯ ಪಂದ್ಯಾವಳಿಗೆ ಗುಡ್‌ಬೈ ಹೇಳಿದ ಬೆನ್ನಲ್ಲೇ ಧೋನಿ ಅಭಿಮಾನಿಗಳು ಚೆನ್ನೈ ಸೂಪರ್‌ ಕಿಂಗ್ಸ್‌ ಪಂದ್ಯ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ. ಮಾತ್ರವಲ್ಲ ಧೋನಿ ಪಡೆಯ ಗೆಲುವಿಗಾಗಿ ಹಾರೈಸುತ್ತಿದ್ದಾರೆ. ನಿನ್ನೆಯೂ ಅಷ್ಟೇ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯದಲ್ಲಿ ಧೋನಿ ಕ್ರೀಸ್‌ಗೆ ಆಗಮಿಸುವ ಹೊತ್ತಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸಂಕಷ್ಟದ ಸ್ಥಿತಿಯಲ್ಲಿತ್ತು. ಆದರೆ ಅಂತಿಮ ಓವರ್‌ನಲ್ಲಿ ಮೂರು ಎಸೆತಗಳಲ್ಲಿ 4 ರನ್‌ ಅವಶ್ಯಕತೆಯಿತ್ತು. ಈ ವೇಳೆಯಲ್ಲಿ ಧೋನಿ ಭರ್ಜರಿ ಸಿಕ್ಸರ್‌ ಬಾರಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದು ಕೊಟ್ಟಿದ್ದಾರೆ. ಧೋನಿ ಸಿಕ್ಸರ್‌ ಬಾರಿಸುತ್ತಲೇ ಚೆನ್ನೈ ತಂಡದ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆದರೆ ಬಾಲಕಿಯೋರ್ವಳು ಮಾತ್ರ ಕಣ್ಣೀರು ಸುರಿಸಿದ್ದಾಳೆ.

https://twitter.com/Anjuvj3/status/1447270548367568897

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಕ್ವಾಲಿಫೈಯರ್‌ ಪಂದ್ಯದಲ್ಲಿ ನಾಯಕ ಎಂಎಸ್ ಧೋನಿ ಗೆಲುವನ್ನು ತಂದುಕೊಡುವ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ರುತುರಾಜ್ ಗಾಯಕ್ವಾಡ್ ಮತ್ತು ರಾಬಿನ್ ಉತ್ತಪ್ಪ ಅವರು ಅರ್ಧಶತಕ ಗಳಿಸಿದ್ದರು. ಸಿಎಸ್‌ಕೆ ದೆಹಲಿ ಕ್ಯಾಪಿಟಲ್ಸ್ ಅನ್ನು ಕ್ವಾಲಿಫೈಯರ್ 1 ರಲ್ಲಿ ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು, ಧೋನಿ 6 ಎಸೆತಗಳಲ್ಲಿ 18 ರನ್ ಗಳಿಸಲು ಧೋನಿಯ ಇನ್ನಿಂಗ್ಸ್ ಆಡಿದರು ಮತ್ತು ಕೊನೆಯ ಓವರ್‌ನಲ್ಲಿ ಪಂದ್ಯವನ್ನು ತಮ್ಮದೇ ಶೈಲಿಯಲ್ಲಿ ಮುಗಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಸಿಎಸ್‌ಕೆ 24 ರನ್ ಗಳಿಸಬೇಕಿತ್ತು ಆದರೆ ಅವೇಶ್ ಖಾನ್ ಮೊದಲ ಬ್ಯಾಟ್‌ನಲ್ಲಿ ರುತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿದರು. ಧೋನಿ ಒಂದು ಸಿಕ್ಸರ್ ಹೊಡೆದರು ಮತ್ತು ಪಂದ್ಯವು ಕೊನೆಯ ಆರು ಎಸೆತಗಳಲ್ಲಿ 12 ಕ್ಕೆ ಅಗತ್ಯವಾಯಿತು. ಆದರೆ ಅಂತಿಮ ಓವರ್‌ನಲ್ಲಿ ಟಾಮ್‌ ಕುರ್ರಾನ್‌ ಅದ್ಬುತ್‌ ಬೌಲಿಂಗ್‌ ಮಾಡಿದ್ದಾರೆ. ಆದರೆ ಧೋನಿ ಹೊಡೆತಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಚೆನ್ನೈ ಎದುರಲ್ಲಿ ಮಂಡಿಯೂರಿದೆ.

( IPL 2021: CSK Fan in Tears After MS Dhoni Hits Winning Run vs DC in Qualifier 1, Video Goes Viral Video )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular