ಸೋಮವಾರ, ಏಪ್ರಿಲ್ 28, 2025
HomeSportsMithali Raj 20000 : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20,000 ರನ್ : ಹೊಸ ದಾಖಲೆ...

Mithali Raj 20000 : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20,000 ರನ್ : ಹೊಸ ದಾಖಲೆ ಬರೆದ ಮಿಥಾಲಿ ರಾಜ್

- Advertisement -

ಮುಂಬೈ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಈ ನಡುವಲ್ಲೇ ಮಿಥಾಲಿ ರಾಜ್‌ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20,000 ರನ್ ಪೂರೈಸಿದ ದಾಖಲೆ ಬರೆದರು.

ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್ 61 ರನ್ ಗಳಿಸಿದರೆ ಅವರಿಗೆ ತಕ್ಕ ಸಾಥ್ ನೀಡಿದ ಯಶ್ತಿಕಾ ಭಾಟಿಯಾ 35 ರನ್ ಗಳಿಸಿದರು. ಆದರೆ ಹೊಡೆಬಡಿಯ ಆಟಗಾರ್ತಿಯರಾದ ಶಫಾಲಿ ವರ್ಮ 8 ಮತ್ತು ಸ್ಮೃತಿ ಮಂಥನಾ 16 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ವಿಕೆಟ್ ಕೀಪರ್ ರಿಚಾ ಘೋಷ್ ಅಜೇಯ 32 ರನ್ ಗಳಿಸಿದರು.

ಇದನ್ನೂ ಓದಿ: RCB vs KKR IPL 2021 : ಕೊಲ್ಕತ್ತಾ ಎದುರಲ್ಲಿ ಹೀನಾಯ ಸೋಲು ಕಂಡ ಬೆಂಗಳೂರು

ಈಗಾಗಲೇ ದ.ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಸತತವಾಗಿ ಏಕದಿನ ಸರಣಿ ಸೋತಿರು ಮಿಥಾಲಿ ರಾಜ್ ಪಡೆಗೆ ಈ ಸರಣಿ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ. ಭರ್ಜರಿ ಫಾರ್ಮ್ ನಲ್ಲಿರುವ ಮಿಥಾಲಿ ರಾಜ್ ಅರ್ಧಶತಕ ಸಿಡಿಸುವ ಮೂಲಕ ಸತತ 5ನೇ ಅರ್ಧಶತಕ ಸಿಡಿಸಿದ ಮತ್ತೊಂದು ದಾಖಲೆ ಬರೆದರು. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 4 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಫಿಫ್ಟಿ ಸಿಡಿಸಿದ್ದರು.

ಇದನ್ನೂ ಓದಿ: IPL 2021 : ಗಾಯಕ್ವಾಡ್‌ ಅಬ್ಬರಕ್ಕೆ ಮಂಕಾದ ಮುಂಬೈ : ಅಗ್ರಸ್ಥಾನಕ್ಕೇರಿದ ಚೆನ್ನೈ

ಮಿಥಾಲಿ ರಾಜ್ ಗೆ ಇದು ಒಟ್ಟಾರೆ 59ನೇ ಅರ್ಧಶತಕವಾಗಿದೆ. 107 ಎಸೆತಗಳನ್ನು ಎದುರಿಸಿದ ಮಿಥಾಲಿ 61 ರನ್ ಗಳಿಸಿದರು. ಅಲ್ಲದೇ 8ನೇ ವಿಕೆಟ್ ಗೆ ಜೂಲನ್ ಗೋಸ್ವಾಮಿ ಜೊತೆ 45 ರನ್ ಜೊತೆಯಾಟ ನಿಭಾಯಿಸುವ ಮೂಲಕ ಭಾರತ 8 ವಿಕೆಟ್ ಗೆ 225 ರನ್ ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

(20,000 runs in international cricket: new record Mithali Raj)

RELATED ARTICLES

Most Popular