Good News : ಜಾನ್ಸನ್​ & ಜಾನ್ಸನ್​ ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಭಾರತದಲ್ಲಿ ಲಭ್ಯ !

ನವದೆಹಲಿ : ಈ ವರ್ಷದ ಅಂತ್ಯದೊಳಗೆ ದೇಶದ ಸಂಪೂರ್ಣ ಜನಸಂಖ್ಯೆಗೆ ಕನಿಷ್ಟ 1 ಡೋಸ್​ ಕೋವಿಡ್​ ಲಸಿಕೆಯನ್ನಾದರೂ ಪೂರೈಸಬೇಕು ಎಂಬ ಪ್ರಧಾನಿ ಮೋದಿಯವರ ಗುರಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ. ಹೌದು, ಅಕ್ಟೋಬರ್​ ತಿಂಗಳಲ್ಲಿ ಭಾರತವು ಜಾನ್ಸನ್​ & ಜಾನ್ಸನ್​​ನ ಲಸಿಕೆಗಳನ್ನು ಸ್ವೀಕರಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ 43.5 ಮಿಲಿಯನ್ ಡೋಸ್​ ಸಿಂಗಲ್​ ಶಾಟ್​ ಡೋಸ್​ಗಳು ಭಾರತಕ್ಕೆ ಬರಲಿವೆ. ಇದರಿಂದ ಅಕ್ಟೋಬರ್​ ತಿಂಗಳಲ್ಲಿ 30 ಕೋಟಿ ಡೋಸ್​ ಉತ್ಪಾದನೆ ಮಾಡಬೇಕು ಎಂಬ ಭಾರತದ ಗುರಿಗೆ ಸಾಕಷ್ಟು ಮುನ್ನಡೆ ಸಿಗಲಿದೆ.

ಇದನ್ನೂ ಓದಿ: 1 Cr Vaccination : ದೇಶದಲ್ಲಿಂದು ಬೃಹತ್‌ ಲಸಿಕಾ ಮೇಳ : ಕೊರೊನಾ ಲಸಿಕೆ ಪಡೆದ್ರು 1 ಕೋಟಿ ಜನ

ಭಾರತವು ವಿಶ್ವದಲ್ಲೇ ಅತೀ ದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ಬೇಡಿಕೆಯನ್ನು ಪೂರೈಸಲು ಆದ್ಯತೆ ನೀಡುವ ಸಲುವಾಗಿ ಏಪ್ರಿಲ್​ ತಿಂಗಳಿನಿಂದ ಲಸಿಕೆ ರಫ್ತಿಗೆ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಲಸಿಕೆ ಮಿತ್ರ ಕಾರ್ಯಕ್ರಮದ ಅಡಿಯಲ್ಲಿ ಕೋವ್ಯಾಕ್ಸ್​​ ದೆಹಲಿಯಲ್ಲಿ ಮತ್ತೆ ರಫ್ತು ಕಾರ್ಯವನ್ನು ಮುಂದುವರಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್​​ ಮಾಂಡವಿಯಾ ಹೇಳಿದ್ದಾರೆ.

ಇದನ್ನೂ ಒದಿ: ಸಂಪೂರ್ಣ ಲಸಿಕೆ ಪಡೆದ ದೇಶದ ಮೊದಲ ಜಿಲ್ಲೆ ಯಾವುದು ಗೊತ್ತಾ ?

ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಕಳೆದ ತಿಂಗಳು ಜಾನ್ಸನ್​ & ಜಾನ್ಸನ್​ ಲಸಿಕೆಗಳಿಗೆ ತುರ್ತು ಅನುಮೋದನೆಯನ್ನು ನೀಡಿತ್ತು. ಕಂಪನಿಯ ಭಾರತದ ಪಾಲುದಾರ ಬಯೋಲಾಜಿಕಲ್ ಸ್ಥಳೀಯವಾಗಿ ಲಸಿಕೆಗಳನ್ನು ಸರಬರಾಜು ಮಾಡಲಿದೆ.

(Johnson & Johnson Single Dose Corona Vaccine Available in India!)

Comments are closed.