ದುಬೈ: ಐಪಿಎಲ್ ಒಂದಿಲ್ಲೊಂದು ದಾಖಲೆ ನಿರ್ಮಾಣವಾಗುತ್ತಿದ್ದು, ಆಟಗಾರರು ವಿಶಿಷ್ಟ ದಾಖಲೆಯನ್ನು ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಐಪಿಎಲ್ T20 ಟೂರ್ನಿಯ ಪ್ಲೇ-ಆಫ್‌ನಲ್ಲಿ ತಮ್ಮ ತಮ್ಮ ತಂಡಗಳನ್ನು ಮುನ್ನಡೆಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಪ್ತಾನ ರಿಷಭ್ ಪಂತ್ ವಿಶಿಷ್ಟ ದಾಖಲೆಗೆ ಭಾಜನರಾಗಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಲವು ವರ್ಷಗಳಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೆಸ್ಟ್, ಏಕದಿನ ಹಾಗೂ T20 ತಂಡಕ್ಕೆ ರಾಜೀನಾಮೆಯನ್ನು ನೀಡಿದ್ದರೂ ಕೂಡ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಮುಂದುವರಿದಿದ್ದಾರೆ.
ಇದನ್ನೂ ಓದಿ: K L RAHUL : ಬೆಂಗಳೂರು ತಂಡಕ್ಕೆ ಮರಳುತ್ತಾರೆ ರಾಹುಲ್ : ಆರ್‌ಸಿಬಿಗೆ ಕನ್ನಡಿಗನೇ ನಾಯಕ

ಇದೀಗ ಐಪಿಎಲ್ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಮೂಲಕ ವಿಶಿಷ್ಟ ದಾಖಲೆಯೊಂದನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಪ್ಲೇ-ಆಫ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿರುವ 40ಕ್ಕೂ ಹೆಚ್ಚು ಪ್ರಾಯದ ಎರಡನೇ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನೆಡೆಸಿದ್ದ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ 2013ರಲ್ಲಿ ಈ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಧೋನಿ ಎರಡನೇ ಹಿರಿಯ ನಾಯಕ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ರಿಷಬ್ ಪಂತ್ ಈ ಬಾರಿಯ ಐಪಿಎಲ್‌ನಲ್ಲಿ ಪಂದ್ಯವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಪಂತ್ ತಂಡವನ್ನು ಫ್ಲೇ ಆಫ್‌ಗೆ ಎಂಟ್ರಿ ಕೊಡಿಸಿದ್ದಾರೆ. ಇನ್ನೊಂದೆಡೆಯಲ್ಲಿ ಬ್ಯಾಟಿಂಗ್‌ನಲ್ಲಿಯೂ ಮಿಂಚು ಹರಿಸುತ್ತಿದ್ದಾರೆ. ಶಿಖರ್ ಧವನ್, ಸ್ಟೋಯಿನಿಸ್ ನಂತಹ ಹಿರಿಯ ಆಟಗಾರರಿದ್ದರೂ ಕೂಡ ಟೀಂ ಮ್ಯಾನೇಜ್ಮೆಂಟ್ ರಿಷಬ್ ಪಂತ್‌ಗೆ ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಿದೆ.

ಇದೀಗ ರಿಷಭ್ ಪಂತ್, ಐಪಿಎಲ್ ಪ್ಲೇ-ಆಫ್‌ನಲ್ಲಿ ತಂಡದ ನಾಯಕತ್ವ ವಹಿಸುತ್ತಿರುವ ಅತಿ ಕಿರಿಯ ನಾಯಕ ಎಂಬ ದಾಖಲೆ ಬರೆದಿದ್ದಾರೆ. ಫ್ಲೇ ಆಫ್ ಪಂದ್ಯವನ್ನು ಆಡಿರುವ ಪಂತ್ ಪ್ರಾಯ, 24 ವರ್ಷ ಆರು ದಿನಗಳಾಗಿವೆ. ಅಂದ ಹಾಗೆ ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶವಿರುತ್ತದೆ.

ಇದನ್ನೂ ಓದಿ: DREAM 11 BAN : ಕರ್ನಾಟಕದಲ್ಲಿ ಕಾರ್ಯಾಚರಣೆ ನಿಲ್ಲಿಸಿದ ಡ್ರೀಮ್ 11
ಈ ಬಾರಿಯ ಐಪಿಎಲ್ ಗೆಲ್ಲು ನೆಚ್ಚಿನ ತಂಡಗಳಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೊರ ಹೊಮ್ಮುತ್ತಿವೆ. ಒಂದೊಮ್ಮೆ ಧೋನಿ ಅಥವಾ ಪಂತ್ ಐಪಿಎಲ್ ಟ್ರೋಫಿ ಗೆದ್ರೆ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
(Dhoni and Rishabh Pant write unique record in IPL)