Abu Dhabi T10 : ಅಬುಧಾಬಿ T10 ಟೂರ್ನಿಯಲ್ಲಿ ಆಡಲಿದ್ದಾರೆ ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ

ಬೆಂಗಳೂರು: 2011ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಸುರೇಶ್ ರೈನಾ (Suresh Raina) ಮತ್ತು ಕರ್ನಾಟಕದ ಮಾಜಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ (stuart binny), ಅಬುಧಾಬಿ ಟಿ10 (Abu Dhabi T10) ಟೂರ್ನಿಯಲ್ಲಿ ಆಡಲಿದ್ದಾರೆ. ಎಡಗೈ ಸ್ಫೋಟಕ ಬ್ಯಾಟ್ಸ್’ಮನ್ ಸುರೇಶ್ ರೈನಾ ಅಬುಧಾಬಿ ಟಿ20 ಟೂರ್ನಿಯಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ಪರ ಆಡಲಿದ್ದಾರೆ. ಸ್ಟುವರ್ಟ್ ಬಿನ್ನಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಭಾರತೀಯ ಆಟಗಾರರು ವಿದೇಶಿ ಲೀಗ್’ಗಳಲ್ಲಿ ಆಡಬೇಕೆಂದರೆ ಬಿಸಿಸಿಐ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಬೇಕೆಂಬ ನಿಯಮವಿದೆ. ಇದೇ ಕಾರಣದಿಂದ 35 ವರ್ಷದ ಸುರೇಶ್ ರೈನಾ ಇತ್ತೀಚೆಗಷ್ಟೇ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. 2020ರಲ್ಲೇ ಎಂ.ಎಸ್ ಧೋನಿ ಅವರ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟ್ ರೈನಾ ಗುಡ್ ಬೈ ಹೇಳಿದ್ದರು.

ಭಾರತ ಪರ 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿರುವ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟು 7,988 ರನ್ ಗಳಿದ್ದಾರೆ. ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ್ದ ರೈನಾ, ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ಒಟ್ಟು 7 ಶತಕಗಳನ್ನು ಸಿಡಿಸಿದ್ದಾರೆ. ಅಬುಧಾಬಿ ಟಿ10 ಟೂರ್ನಿಯಲ್ಲಿ ಸುರೇಶ್ ರೈನಾ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವನ್ನು ಪ್ರತಿನಿಧಿಸಲಿದ್ದು, ವೆಸ್ಟ್ ಇಂಡೀಸ್’ನ ಸ್ಫೋಟಕ ಆಲ್ರೌಂಡರ್ ಆಂಡ್ರೆ ರಸೆಲ್, ನಿಕೋಲಸ್ ಪೂರನ್, ಓಡೇನ್ ಸ್ಮಿತ್, ಇಂಗ್ಲೆಂಡ್’ನ ಜೇಸನ್ ರಾಯ್, ಬಾಂಗ್ಲಾದೇಶದ ವೇಗಿ ತಾಸ್ಕಿನ್ ಅಹ್ಮದ್ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದಲ್ಲಿದ್ದಾರೆ.

ಕರ್ನಾಟಕದ 38 ವರ್ಷದ ಸ್ಟುವರ್ಟ್ ಬಿನ್ನಿ ಭಾರತ ಪರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್’ನ ದಾಖಲೆ ಹೊಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಬಿನ್ನಿ 4 ರನ್ನಿಗೆ 6 ವಿಕೆಟ್ ಪಡೆದಿದ್ದರು. ಭಾರತ ಪರ 6 ಟೆಸ್ಟ್ , 14 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿರುವ ಸ್ಟುವರ್ಟ್ ಬಿನ್ನಿ, ಒಟ್ಟು 459 ರನ್ ಗಳಿಸಿದ್ದು, 24 ವಿಕೆಟ್’ಗಳನ್ನು ಪಡೆದಿದ್ದಾರೆ. ಸ್ಟುವರ್ಟ್ ಬಿನ್ನಿ ಅವರ ತಂದೆ ರೋಜರ್ ಬಿನ್ನಿ ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ : Suryakumar Yadav Batting : 20ನೇ ಓವರ್‌ನಲ್ಲಿ ಸೂರ್ಯನ ಬೆಂಕಿ-ಬಿರುಗಾಳಿ ಬಿರುಗಾಳಿ ಬ್ಯಾಟಿಂಗ್; 18 ಎಸೆತ, 10 ಸಿಕ್ಸರ್, 72 ರನ್

ಇದನ್ನೂ ಓದಿ : Dinesh Karthik : ದಿನೇಶ್ ಕಾರ್ತಿಕ್ ಕರಿಯರ್ ಕ್ಲೋಸ್, ಇನ್ನು ಡಿಕೆಗಿಲ್ಲ ಸೆಕೆಂಡ್ ಚಾನ್ಸ್

Stuart Binny Suresh Raina features in Abu Dhabi T10

Comments are closed.