ಭಾನುವಾರ, ಏಪ್ರಿಲ್ 27, 2025
HomeSportsCricketSunil Gavaskar : ಗವಾಸ್ಕರ್‌ಗೆ ಕ್ರಿಕೆಟ್ ಜನಕರ ನಾಡಿನಲ್ಲಿ ದೊಡ್ಡ ಗೌರವ, ಲೀಸೆಸ್ಟರ್ ಕ್ರಿಕೆಟ್ ಮೈದಾನಕ್ಕೆ...

Sunil Gavaskar : ಗವಾಸ್ಕರ್‌ಗೆ ಕ್ರಿಕೆಟ್ ಜನಕರ ನಾಡಿನಲ್ಲಿ ದೊಡ್ಡ ಗೌರವ, ಲೀಸೆಸ್ಟರ್ ಕ್ರಿಕೆಟ್ ಮೈದಾನಕ್ಕೆ ಬ್ಯಾಟಿಂಗ್ ದಿಗ್ಗಜನ ಹೆಸರು

- Advertisement -

ಲೀಸೆಸ್ಟರ್: ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar ) ಭಾರತದ ಕ್ರಿಕೆಟ್ ರಾಯಭಾರಿ. ಟೆಸ್ಟ್ ಕ್ರಿಕೆಟ್”ನಲ್ಲಿ 10 ಸಾವಿರ ರನ್ ಗಳಿಸಿದ ಜಗತ್ತಿನ ಮೊದಲ ಬ್ಯಾಟ್ಸ್’ಮನ್. ಸುನೀಲ್ ಗವಾಸ್ಕರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅಮೆರಿಕದ ಕೆಂಟುಕಿ ಹಾಗೂ ತಾಂಜೇನಿಯಾದ ಜಾಂಜಿಬರ್’ನಲ್ಲಿ ಕ್ರಿಕೆಟ್ ಮೈದಾನಗಳಿಗೆ ಗವಾಸ್ಕರ್ ಹೆಸರಿಡಲಾಗಿದೆ. ಈಗ ಇಂಗ್ಲೆಂಡ್”ನ ಲೀಸೆಸ್ಟರ್’ನಲ್ಲು ಕ್ರಿಕೆಟ್ ಮೈದಾನವೊಂದಕ್ಕೆ ಸುನೀಲ್ ಗವಾಸ್ಕರ್ ಹೆಸರಿಡುವ ಮೂಲಕ ಬ್ಯಾಟಿಂಗ್ ದಿಗ್ಗಜನಿಗೆ ಗೌರವ ಸಲ್ಲಿಸಲಾಗಿದೆ.

ಲೀಸೆಸ್ಟರ್’ನಲ್ಲಿರುವ ಭಾರತ್ ಸ್ಪೋರ್ಟ್ಸ್ & ಕ್ರಿಕೆಟ್ ಕ್ಲಬ್ 5 ಎಕರೆ ವ್ಯಾಪ್ತಿಯಲ್ಲಿ ಕ್ರಿಕೆಟ್ ಮೈದಾನವನ್ನು ನಿರ್ಮಿಸಿದ್ದು, ಕ್ರೀಡಾಂಗಣಕ್ಕೆ ಗವಾಸ್ಕರ್ ಹೆಸರಿಟ್ಟಿದೆ. ಇಂಗ್ಲೆಂಡ್ ಅಥವಾ ಯಾವುದೇ ಯುರೋಪ್ ರಾಷ್ಟ್ರಗಳಲ್ಲಿ ಕ್ರಿಕೆಟ್ ಮೈದಾನಕ್ಕೆ ಭಾರತೀಯ ಆಟಗಾರನೊಬ್ಬನ ಹೆಸರಿಟ್ಟಿರುವುದು ಇದೇ ಮೊದಲು.

ಲೀಸೆಸ್ಟರ್’ನಲ್ಲಿ ಕ್ರಿಕೆಟ್ ಮೈದಾನಕ್ಕೆ ತಮ್ಮ ಹೆಸರಿಟ್ಟಿರುವುದರ ಕುರಿತು ಪ್ರತಿಕ್ರಿಯಿಸಿರುವ ಗವಾಸ್ಕರ್, ಲೀಸೆಸ್ಟರ್ “ಕ್ರೀಡಾಂಗಣಕ್ಕೆ ನನ್ನ ಹೆಸರಿಟ್ಟಿರುವುದು ತುಂಬಾ ಸಂತೋಷ ತಂದಿದೆ. ಇದು ನನ್ನ ಪಾಲಿಗೆ ಸಂದಿರುವ ದೊಡ್ಡ ಗೌರವ. ಲೀಸೆಸ್ಟರ್”ನಲ್ಲಿ ಕ್ರಿಕೆಟನ್ನು ಬೆಂಬಲಿಸುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಿಶೇಷವಾಗಿ ಅವರೆಲ್ಲಾ ಭಾರತ ತಂಡದ ಅಭಿಮಾನಿಗಳು”, ಎಂದಿದ್ದಾರೆ.

ಭಾರತ ಪರ 125 ಟೆಸ್ಟ್ ಪಂದ್ಯಗಳನ್ನಾಡಿರುವ 73 ವರ್ಷದ ಸುನೀಲ್ ಗವಾಸ್ಕರ್, 34 ಶತಕಗಳ ಸಹಿತ 51.12ರ ಸರಾಸರಿಯಲ್ಲಿ 10,122 ರನ್ ಕಲೆ ಹಾಕಿದ್ದಾರೆ. 108 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ 1 ಶತಕ ಸಹಿತ 3,092 ರನ್ ಗಳಿಸಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆಟಗಾರನೆಂಬ ದಾಖಲೆ ಗವಾಸ್ಕರ್ ಹೆಸರಲ್ಲಿದೆ. ತಮ್ಮ ವೃತ್ತಿಜೀವನದ ಪರ್ವಕಾಲದಲ್ಲಿ ವೆಸ್ಟ್ ಇಂಡೀಸ್”ನ ಭಯಾನಕ ವೇಗಿಗಳ ಎದುರು ಹೆಲ್ಮೆಟ್ ಧರಿಸದೆ ಆಡುವ ಮೂಲಕ ಗವಾಸ್ಕರ್ ಗಮನ ಸೆಳೆದಿದ್ದರು.

ಇದನ್ನೂ ಓದಿ : KL Rahul Health Report : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ ರಾಹುಲ್ ?

ಇದನ್ನೂ ಓದಿ : T20 World Cup 2022 India : ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಾಡಲಿದೆ ಟೀಮ್ ಇಂಡಿಯಾ

ಇದನ್ನೂ ಓದಿ : Rahul Dravid meets Brian Lara : ಟ್ರಿನಿಡಾಡ್‌ನಲ್ಲಿ ದಿಗ್ಗಜರ ಸಮಾಗಮ, ಒಂದೇ ಫ್ರೇಮ್‌ನಲ್ಲಿ 46,566 ರನ್

Sunil Gavaskar is a big honor in the land of cricket people, the name of a batting legend for Leicester Cricket Ground

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular