Brian Lara : ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೆರಿಬಿಯನ್ ಕ್ರಿಕೆಟ್ ದಿಗ್ಗಜ ಮಾಡಿದ್ದೇನು ನೋಡಿ

ಟ್ರಿನಿಡಾಡ್ : ಶಕ್ರವಾರ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆದ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 3 ರನ್ ಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಪಂದ್ಯದ ನಂತರ ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ವಿಶೇಷ ಅತಿಥಿಯೊಬ್ಬರು ಕಾಣಿಸಿಕೊಂಡ್ರು. ಆ ಅತಿಥಿ ಯನ್ನು ಟೀಮ್ ಇಂಡಿಯಾ ಆಟಗಾರರು ಅತ್ಯುತ್ಸಾಹದಿಂದ ಬರಮಾಡಿಕೊಂಡು ಸ್ವಾಗತಿಸಿದ್ರು. ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ಭೇಟಿ ಕೊಟ್ಟ ಆ ವಿಶೇಷ ಅತಿಥಿ ಬೇರಾರೂ ಅಲ್ಲ, ವೆಸ್ಟ್ ಇಂಡೀಸ್”ನ ಬ್ಯಾಟಿಂಗ್ ದಿಗ್ಗಜ, “ಪ್ರಿನ್ಸ್ ಆಫ್ ಟ್ರಿನಿಡಾಡ್” ಖ್ಯಾತಿಯ ಬ್ರಿಯಾನ್ ಚಾರ್ಲ್ಸ್ ಲಾರಾ (Brian Lara).

ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೆ ಆತಿಥ್ಯ ವಹಿಸಿರುವ ಟ್ರಿನಿಡಾಡ್, ಬ್ರಿಯಾನ್ ಲಾರಾ ಅವರ ಹುಟ್ಟೂರು. ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಲಾರಾ, ಸ್ಟ್ಯಾಂಡ್‌ನಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡಿ, ನಂತರ ಭಾರತ ತಂಡದ ಸದಸ್ಯರಿಗೆ ವಿಶ್ ಮಾಡಲು ಡ್ರೆಸ್ಸಿಂಗ್ ರೂಂಗೆ ಬಂದರು.

ಲಾರಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಿಕೊಂಡಾಗ, ಟೀಂ ಇಂಡಿಯಾ ಸದಸ್ಯರಾದ ಯುಜ್ವೇಂದ್ರ ಚಹಲ್, ನಾಯಕ ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್, ಲಾರಾ ಅವರೊಂದಿಗೆ ಮಾತನಾಡಲು ಉತ್ಸಾಹದಿಂದ ಮುಂದೆ ಬಂದರು. ಈ ವಿಡಿಯೋವನ್ನು ಬಿಸಿಸಿಐ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಇದಕ್ಕೂ ಮುನ್ನ ಬಿಸಿಸಿಐ ಟ್ವಿಟರ್‌ನಲ್ಲಿ ಕೋಚ್ ದ್ರಾವಿಡ್ ಜೊತೆ ಲಾರಾ ಇರುವ ಫೋಟೋವನ್ನು ‘ಒಂದು ಫ್ರೇಮ್‌ನಲ್ಲಿ ಎರಡು ದಂತಕಥೆಗಳು’ ಎಂಬ ಶೀರ್ಷಿಕೆಯಡಿ ಹಂಚಿಕೊಂಡಿತ್ತು.

ಬ್ರಿಯಾನ್ ಲಾರಾ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 53 ವರ್ಷದ ಲಾರಾ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ 430 ಪಂದ್ಯಗಳಿಂದ 53 ಶತಕಗಳ ಸಹಿತ 22,358 ರನ್ ಕಲೆ ಹಾಕಿದ್ದಾರೆ. ಬ್ಯಾಟಿಂಗ್ ದಂತಕಥೆ ಸರ್ ವಿವಿಯನ್ ರಿಚರ್ಡ್ಸ್ ಅವರ ನಂತರ ವೆಸ್ಟ್ ಇಂಡೀಸ್ ಕ್ರಿಕೆಟ್”ನ ಅತೀ ದೊಡ್ಡ ಸ್ಟಾರ್ ಆಗಿರುವ ಲಾರಾ, ತಮ್ಮ ಆಕರ್ಷಕ ಶೈಲಿಯ ಬ್ಯಾಟಿಂಗ್’ನಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು.

ಭಾರತ ಕ್ರಿಕೆಟ್ ತಂಡ ಟ್ರಿನಿಡಾಡ್”ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ (India Vs West Indies ODI Series) 3 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ರೋಚಕ 3 ರನ್’ಗಳ ಗೆಲುವು ದಾಖಲಿಸಿರುವ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 2ನೇ ಪಂದ್ಯ ಭಾನುವಾರ ನಡೆಯಲಿದ್ದು, ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಸರಣಿ ಗೆಲುವಿನ ವಿಶ್ವಾಸದಲ್ಲಿದೆ.

ಇದನ್ನೂ ಓದಿ : Rahul Dravid meets Brian Lara : ಟ್ರಿನಿಡಾಡ್‌ನಲ್ಲಿ ದಿಗ್ಗಜರ ಸಮಾಗಮ, ಒಂದೇ ಫ್ರೇಮ್‌ನಲ್ಲಿ 46,566 ರನ್

ಇದನ್ನೂ ಓದಿ : Sunil Gavaskar : ಗವಾಸ್ಕರ್‌ಗೆ ಕ್ರಿಕೆಟ್ ಜನಕರ ನಾಡಿನಲ್ಲಿ ದೊಡ್ಡ ಗೌರವ, ಲೀಸೆಸ್ಟರ್ ಕ್ರಿಕೆಟ್ ಮೈದಾನಕ್ಕೆ ಬ್ಯಾಟಿಂಗ್ ದಿಗ್ಗಜನ ಹೆಸರು

Brian Lara visits Team India Dressing Room

Comments are closed.