ಭಾನುವಾರ, ಏಪ್ರಿಲ್ 27, 2025
HomeSportsCricketSuresh Raina Comeback IPL : ಐಪಿಎಲ್ ಕಂಬ್ಯಾಕ್‌ಗೆ ಸುರೇಶ್ ರೈನಾ ಬಿಗ್ ಪ್ಲಾನ್, ಸಿಎಸ್‌ಕೆ...

Suresh Raina Comeback IPL : ಐಪಿಎಲ್ ಕಂಬ್ಯಾಕ್‌ಗೆ ಸುರೇಶ್ ರೈನಾ ಬಿಗ್ ಪ್ಲಾನ್, ಸಿಎಸ್‌ಕೆ ಜೆರ್ಸಿ ಧರಿಸಿ ಭರ್ಜರಿ ಪ್ರಾಕ್ಟೀಸ್

- Advertisement -

ಮುಂಬೈ: (Suresh Raina Comeback IPL) ಮಿಸ್ಟರ್ ಐಪಿಎಲ್ ಖ್ಯಾತಿಯ ಪವರ್ ಹಿಟ್ಟರ್ ಸುರೇಶ್ ರೈನಾ ಐಪಿಎಲ್’ಗೆ ಕಂಬ್ಯಾಕ್ ಮಾಡುವ ಯೋಚನೆಯಲ್ಲಿದ್ದಾರೆ. ಮುಂದಿನ ವರ್ಷ ಐಪಿಎಲ್ ಆಡಲೇಬೇಕೆಂದು ಪಣ ತೊಟ್ಟಿರುವ ರೈನಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿ ಧರಿಸಿ ಅಭ್ಯಾಸ ಆರಂಭಿಸಿದ್ದಾರೆ. 2021ರಲ್ಲಿ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ (Chennai Super Kings – CSK) ತಂಡದಿಂದ ಕೈ ಬಿಟ್ಟಿತ್ತು. ನಂತರ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರೈನಾ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಹೀಗಾಗಿ ಐಪಿಎಲ್’ನಲ್ಲಿ ರೈನಾ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದರು.

2023ರ ಐಪಿಎಲ್’ನಲ್ಲಿ (Indian Premier League – IPL) ಆಡುವ ಗುರಿ ಹೊಂದಿರುವ ಸುರೇಶ್ ರೈನಾ ಮತ್ತೆ ಅಭ್ಯಾಸ ಆರಂಭಿಸಿದ್ದು, ತಮ್ಮನ್ನು ಕಡೆಗಣಿಸಿದ CSK ತಂಡದ ಜೆರ್ಸಿ ಧರಿಸಿ ಅಭ್ಯಾಸ ನಡೆಸುತ್ತಿರುವುದು ವಿಶೇಷ. ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿ ಧರಿಸಿ ಅಭ್ಯಾಸ ನಡೆಸಿರುವುದು ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದು CSK ಫ್ರಾಂಚೈಸಿ ಮೇಲೆ ರೈನಾಗಿರುವ ನಿಯತ್ತು ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

” ಸುರೇಶ್ ರೈನಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಸಂಬಂಧ ಕಡಿದುಕೊಳ್ಳಲು ಸಾಕಷ್ಟು ಕಾರಣಗಳಿವೆ. ಆದರೆ ಅದಕ್ಕೆ ಬದಲಾಗಿ ರೈನಾ CSK ಜರ್ಸಿ ಧರಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಅದು ತಂಡದ ಮೇಲೆ ರೈನಾಗಿರುವ ನಿಯತ್ತಿಗೆ ಸಾಕ್ಷಿ” ಎಂದು ಚೆನ್ನೈ ತಂಡದ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಸುರೇಶ್ ರೈನಾ ಅಭ್ಯಾಸದ ವೇಳೆ ಪತ್ನಿ ಪ್ರಿಯಾಂಕಾ ರೈನಾ ಕೂಡ ಮೈದಾನದಲ್ಲೇ ಇದ್ದು ಪತಿಗೆ ನೈತಿಕ ಬೆಂಬಲ ತುಂಬುತ್ತಿದ್ದಾರೆ.

35 ವರ್ಷದ ಎಡಗೈ ಬ್ಯಾಟ್ಸ್’ಮನ್ ಸುರೇಶ್ ರೈನಾ 2008ರಿಂದ ಒಟ್ಟು 12 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು. CSK ನಾಯಕ ಎಂ.ಎಸ್ ಧೋನಿ ಅವರ ನಂಬಿಕಸ್ಥ ಆಟಗಾರನಾಗಿದ್ದ ರೈನಾ, ಐಪಿಎಲ್’ನಲ್ಲಿ CSK ತಂಡ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಹಾಗೂ 2 ಬಾರಿ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಸುರೇಶ್ ರೈನಾ ನಿರ್ಣಾಯಕ ಪಾತ್ರ ವಹಿಸಿದ್ದರು. ವೃತ್ತಿಜೀವನದಲ್ಲಿ ಒಟ್ಟು 205 ಐಪಿಎಲ್ ಪಂದ್ಯಗಳನ್ನಾಡಿರುವ ರೈನಾ, 32ರ ಸರಾಸರಿಯಲ್ಲಿ 1 ಶತಕ ಹಾಗೂ 39 ಅರ್ಧಶತಕಗಳ ನೆರವಿನಿಂದ 136.7ರ ಉತ್ತಮ ಸ್ಟ್ರೈಕ್’ರೇಟ್’ನೊಂದಿಗೆ 5,528 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Virat Kohli : 3-2-1 ಕತಾರ್ ಒಲಿಂಪಿಕ್ ಮ್ಯೂಸಿಯಂಗೆ ಭೇಟಿ ಕೊಟ್ಟ ಕೊಹ್ಲಿಗೆ ಜೆರ್ಸಿ ಉಡುಗೊರೆ

ಇದನ್ನೂ ಓದಿ : KSCA Maharaja Trophy : ಮಯಾಂಕ್ ತಂಡವನ್ನು ಸೋಲಿಸಿ ಮನೀಶ್ ಟೀಮ್ ಚಾಂಪಿಯನ್

Suresh Raina Comeback IPL Big Plan for Indian Premier League Great Practice in CSK Jersey

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular