ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾದ ಸದ್ಯದ ಬೆಸ್ಟ್ ಬ್ಯಾಟ್ಸ್’ಮನ್ ಯಾರು ಎಂಬ ಪ್ರಶ್ನೆಗೆ ಸಿಗುವ ಮೊದಲ ಉತ್ತರ ಸೂರ್ಯ ಕುಮಾರ್ ಯಾದವ್ (Suryakumar Yadav Record) . ಐಸಿಸಿ ಟಿ20 ಬ್ಯಾಟಿಂಗ್ Ranking ನಲ್ಲಿ ಭಾರತದ ಟಾಪ್ ರಾಂಕಿಂಗ್ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್, ವೃತ್ತಿಜೀವನದ ಅಮೋಘ ಫಾರ್ಮ್’ನಲ್ಲಿದ್ದಾರೆ. 2022ರಲ್ಲಿ ಆಡಿದ 20 ಟಿ20 ಪಂದ್ಯಗಳಿಂದ ಸೂರ್ಯಕುಮಾರ್ 100 ಬೌಂಡರಿ-ಸಿಕ್ಸರ್’ಗಳನ್ನು ಬಾರಿಸಿರುವುದು ವಿಶೇಷ. ಇದರಲ್ಲಿ 58 ಫೋರ್ ಹಾಗೂ 42 ಸಿಕ್ಸರ್’ಗಳು ಸೇರಿವೆ. ಈ ವರ್ಷ ಅತೀ ಹೆಚ್ಚು ಬೌಂಡರಿ-ಸಿಕ್ಸರ್’ಗಳನ್ನು ಬಾರಿಸಿರುವವರ ಸಾಲಿನಲ್ಲಿ ವೆಸ್ಟ್ ಇಂಡೀಸ್’ನ ನಿಕೋಲಸ್ ಪೂರನ್ 72 ಬೌಂಡರಿಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮುಕ್ತಾಯದ ಹೊತ್ತಿಗೆ ಐಸಿಸಿ ಟಿ20 ಬ್ಯಾಟಿಂಗ್ rankingನಲ್ಲಿ 60ನೇ ಸ್ಥಾನದಲ್ಲಿದ್ದ ಸೂರ್ಯಕುಮಾರ್ ಯಾದವ್, ತಮ್ಮ ಅದ್ಭುತ ಆಟದಿಂದಾದಿ ಕೆಲವೇ ತಿಂಗಳಲ್ಲಿ ನಂ.3 ಸ್ಥಾನಕ್ಕೇರಿದ್ದಾರೆ. ಈ ವರ್ಷ ಸೂರ್ಯಕುಮಾರ್ ಪ್ರತೀ 3.7 ಎಸೆತಗಳಿಗೊಂದು ಬೌಂಡರಿ ಬಾರಿಸಿದ್ದಾರೆ. ಇದು ಈ ವರ್ಷ 50+ ಬೌಂಡರಿ ಬಾರಿಸಿರುವ ಜಗತ್ತಿನ 16 ಬ್ಯಾಟ್ಸ್’ಮನ್’ಗಳಲ್ಲಿ ಶ್ರೇಷ್ಠ ಸಾಧನೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತೀ 4.6 ಎಸೆತಗಳಿಗೊಂದು ಬೌಂಡರಿ ಬಾರಿಸಿದ್ದಾರೆ. ಸಿಕ್ಸ್ ಹಿಟ್ಟಿಂಗ್’ನಲ್ಲೂ ಗಮನ ಸೆಳೆಯುತ್ತಿರುವ ಸೂರ್ಯ ಪ್ರತೀ 8.9 ಎಸೆತಗಳಿಗೊಂದು ಸಿಕ್ಸರ್ ಸಿಡಿಸಿದ್ದಾರೆ.
ಭಾರತ ಟಿ20 ತಂಡದ ಮಧ್ಯಮ ಕ್ರಮಾಂಕದ ಆಧಾರಸ್ಥಂಭವಾಗಿರುವ ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಅಮೋಘ ಪ್ರದರ್ಶನ ತೋರಿದ್ದರು. ಮೊದಲ ಪಂದ್ಯದಲ್ಲಿ 46 ರನ್ ಗಳಿಸಿದ್ದ ಸೂರ್ಯ, 2ನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ್ರೂ, 3ನೇ ಪಂದ್ಯದಲ್ಲಿ ಸಿಡಿಲಬ್ಬರದ 69 ರನ್ ಸಿಡಿಸಿ ಭಾರತ 2-1ರ ಅಂತರದಲ್ಲಿ ಸರಣಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. 32 ವರ್ಷದ ಮುಂಬೈ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ಬುಧವಾರ (ಸೆಪ್ಟೆಂಬರ್ 28) ಆರಂಭವಾಗಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
2022ರಲ್ಲಿ ಆಡಿದ ಟಿ20 ಇನ್ನಿಂಗ್ಸ್’ಗಳಲ್ಲಿ ಸೂರ್ಯಕುಮಾರ್ ಯಾದವ್ ಗಳಿಸಿರುವ ರನ್
34, 08, 65, 00, 15, 39, 15, 117, 24, 11, 76, 24, 18, 68, 13, 34, 06, 46, 00, 69
2022ರಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಸಾಧನೆ
ಪಂದ್ಯ: 20
ರನ್: 682
ಸರಾಸರಿ: 37.88
100/50: 01/04
ಇದನ್ನೂ ಓದಿ : Syed Mushtaq Ali Trophy 2022 : ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರ್ನಾಟಕ ಸಂಭಾವ್ಯ ತಂಡದಿಂದ ಕರುಣ್, ಸಮರ್ಥ್, ಸಿದ್ಧಾರ್ಥ್ ಔಟ್
Suryakumar Yadav Record boundary every 3.7 balls six every 8.9 100 boundaries sixes in one year