ಭಾನುವಾರ, ಏಪ್ರಿಲ್ 27, 2025
HomeSportsSydney Thunders all out for 15 runs: ಟಿ20ಯಲ್ಲಿ 15 ರನ್ನಿಗೆ ಆಲೌಟ್, ಸಿಡ್ನಿ...

Sydney Thunders all out for 15 runs: ಟಿ20ಯಲ್ಲಿ 15 ರನ್ನಿಗೆ ಆಲೌಟ್, ಸಿಡ್ನಿ ಥಂಡರ್ಸ್ ಹೆಸರಿಗೆ ಅಂಟಿತು ಅವಮಾನಕರ ದಾಖಲೆ

- Advertisement -


ಸಿಡ್ನಿ:(Sydney Thunders all out for 15 runs) ವೃತ್ತಿಪರ ಟಿ20 ಕ್ರಿಕೆಟ್’ನಲ್ಲಿ ಸಿಡ್ನಿ ಥಂಡರ್ಸ್ (Sydney Thunders) ತಂಡ ಅತ್ಯಂತ ಅವಮಾನಕರ ದಾಖಲೆಗೆ ತುತ್ತಾಗಿದೆ. ಬಿಗ್ ಬ್ಯಾಷ್ ಲೀಗ್ ಟಿ20 (Big Bash T20 League) ಟೂರ್ನಿಯಲ್ಲಿ ಸಿಡ್ನಿ ಥಂಡರ್ಸ್ ತಂಡ ಕೇವಲ 15 ರನ್ನಿಗೆ ಆಲೌಟಾಗಿದೆ. ಸಿಡ್ನಿಯಲ್ಲಿ ನಡೆದ ಅಡಿಲೇಡ್ ಸ್ಟ್ರೈಕರ್ಸ್ (Adelaide Strikers) ವಿರುದ್ಧದ ಪಂದ್ಯದಲ್ಲಿ ಈ ಅವಮಾನಕಾರ ದಾಖಲೆ ಸಿಡ್ನಿ ಥಂಡರ್ಸ್ ಹೆಸರಿಗೆ ಅಂಟಿಕೊಂಡಿದೆ.

(Sydney Thunders all out for 15 runs)ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡದ ಅಡಿಲೇಡ್ ಸ್ಟ್ರೈಕರ್ಸ್ ತಂಡ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 139 ರನ್’ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಇದಕ್ಕುತ್ತರವಾಗಿ ಸಿಡ್ನಿ ಥಂಡರ್ಸ್ ತಂಡ 5.5 ಓವರ್’ಗಳಲ್ಲಿ ಕೇವಲ 15 ರನ್ನಿಗೆ ಆಲೌಟಾಯಿತು. ಸಿಡ್ನಿ ಥಂಡರ್ಸ್ ತಂಡದ ಬ್ಯಾಟಿಂಗ್ ಪಡೆಯನ್ನು ಧ್ವಂಸ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಹೆನ್ರಿ ಥಾರ್ನ್’ಟನ್ ಕೇವಲ 3 ರನ್ನಿತ್ತು 5 ವಿಕೆಟ್ ಪಡೆದ್ರೆ, ವೆಸ್ ಏಗರ್ 6 ರನ್ನಿಗೆ 4 ವಿಕೆಟ್ ಕಬಳಿಸಿದ್ರು. 10ನೇ ಕ್ರಮಾಂಕದ ಆಟಗಾರ ಬ್ರೆಂಡನ್ ಡೊಗೆಟ್ ಗಳಿಸಿದ 4 ರನ್’ಗಳೇ ಸಿಡ್ನಿ ಥಂಡರ್ಸ್ ಪರ ಟಾಪ್ ಸ್ಕೋರ್.

ಸಿಡ್ನಿ ಥಂಡರ್ಸ್ ಆಟಗಾರರು ಗಳಿಸಿದ ರನ್:
0, 0, 3, 0, 2, 1, 1, 0, 0, 4, 1

ಸಿಡ್ನಿ ಥಂಡರ್ಸ್ ಗಳಿಸಿ 15 ರನ್’ಗಳು ವೃತ್ತಿಪರ ಟಿ20ಯಲ್ಲಿ ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ಸ್ಕೋರ್. ಈ ಹಿಂದೆ ಈ ದಾಖಲೆ ಟರ್ಕಿ ತಂಡದ ಹೆಸರಲ್ಲಿತ್ತು. 2019ರಲ್ಲಿ ನಡೆದ ಪಂದ್ಯದಲ್ಲಿ ಜೆಕ್ ಗಣರಾಜ್ಯ ವಿರುದ್ಧ ಟರ್ಕಿ ಕೇವಲ 21 ರನ್ನಿಗೆ ಆಲೌಟಾಗಿತ್ತು.

ಇದನ್ನೂ ಓದಿ:Rahul lucky for Pujara Gill :1443 ದಿನಗಳ ಪೂಜಾರ ಶತಕ, ಗಿಲ್ ಚೊಚ್ಚಲ ಟೆಸ್ಟ್ ಶತಕ; ಮತ್ತೆ ಅದೃಷ್ಟ ತಂದ ರಾಹುಲ್ ನಾಯಕತ್ವ

ಇದನ್ನೂ ಓದಿ:Pro Kabaddi League final: ಕನ್ನಡಿಗನ ತಂಡಕ್ಕೆ ಜೈಪುರ ಸವಾಲ್, ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ

ವೃತ್ತಿಪರ ಟಿ20 ಕ್ರಿಕೆಟ್’ನಲ್ಲಿ ಅತ್ಯಂತ ಕಡಿಮೆ ಸ್ಕೋರ್
15: ಸಿಡ್ನಿ ಥಂಡರ್ಸ್ (2022) Vs ಅಡಿಲೇಡ್ ಸ್ಟ್ರೈಕರ್ಸ್
21: ಟರ್ಕಿ (2019) Vs ಜೆಕ್ ಗಣರಾಜ್ಯ
26: ಲೆಸೆಥೊ (20121) Vs ಉಗಾಂಡ
28: ಟರ್ಕಿ (2019) Vs ಲಕ್ಸೆಂಬರ್ಗ್
30: ಥಾಯ್ಲೆಂಡ್ (2022) Vs ಮಲೇಷ್ಯಾ

Sydney Thunders all out for 15 runs Sydney Thunders bowled out for just 15 runs in Big Bash League T20 tournament

RELATED ARTICLES

Most Popular