ದುಬೈ : T20 ವಿಶ್ವಕಪ್‌ನಲ್ಲಿ ಭಾರತ ( Team India) ಸ್ಕಾಟ್ಲೆಂಡ್ (SCOTLAND ) ವಿರುದ್ದದ ಪಂದ್ಯದಲ್ಲಿ ಅದ್ಬುತ ಆಟದ ಪ್ರದರ್ಶನ ನೀಡಿದೆ. ಭಾರತದ ಬೌಲರ್‌ಗಳಾದ ಮೊಹಮ್ಮದ್ ಸೆಮಿ, ರವೀಂದ್ರ ಜಡೇಜಾ ಹಾಗೂ ಜಸ್ಪ್ರಿತ್ ಬೂಮ್ರಾ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್ ತಂಡ ಕೇವಲ 85ರನ್‌ಗಳಿಗೆ ಆಲೌಟ್ ಆಗಿದೆ. ಭಾರತದ ಗೆಲುವಿಗೆ 86 ರನ್‌ಗಳ ಸುಲಭ ಗುರಿಯನ್ನು ನೀಡಿದೆ.
ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಸ್ಕಾಟ್ಲೆಂಡ್ ವಿರುದ್ದ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಯ್ಲಿ ಮೊದಲು ಬೌಲಿಂಗ್ ಆಯ್ಕೆ ಮಾಡಿದ್ದರು. ಬೃಹತ್ ಮೊತ್ತವನ್ನು ಪೇರಿಸುವ ವಿಶ್ವಾಸದಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ ಆರಂಭದಲ್ಲೇ ಬೂಮ್ರಾ ಆಘಾತವನ್ನು ನೀಡಿದ್ರು. ನಂತರ ಮೊಹಮ್ಮದ್ ಸೆಮಿ ಕೂಡ ಮಾರಕ ದಾಳಿಯನ್ನು ಸಂಘಟಿಸಿದ್ರು. ಸ್ಪಿನ್ನರ್ ರವೀಂದ್ರ ಜಡೇಜಾ ಸ್ಕಾಟ್ಲೆಂಡ್ ಆಟರರಿಗೆ ಸತತವಾಗಿ ಫೆವಿಲಿಯನ್ ಹಾದಿ ತೋರಿಸಿದ್ದಾರೆ.
ಜಾರ್ಜ್ ಮುಸ್ಲಿ 24, ಮೈಕಲ್ ಲಿಸ್ಕ್ 21, ಕಾಲಂ ಮ್ಯಾಕ್ಲಿಯೋಡ್ 16 ಹಾಗೂ ಮಾರ್ಕ್ ವ್ಯಾಟ್ 14ರನ್ ಹೊರತು ಪಡಿಸಿ, ಉಳಿದ್ಯಾವುದೇ ಆಟಗಾರರು ಎರಡಂಕಿ ಸ್ಕೋರ್ ದಾಟಲೇ ಇಲ್ಲ. 4 ಓವರ್ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ಕೇವಲ 15 ರನ್‌ನೀಡಿ 3 ವಿಕೆಟ್ ಕಬಳಿಸಿದ್ರೆ, ಮೊಹಮ್ಮದ್ ಸೆಮಿ 3 ಓವರ್ ಗಳಲ್ಲಿ 1 ಮೇಡನ್ ಓವರ್ ಸಹಿತ 15 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಇನ್ನು ಜಸ್ಪ್ರಿತ್ ಬೂಮ್ರಾ 10 ರನ್ ನೀಡಿ 2 ವಿಕೆಟ್ ಪಡೆದುಕೊಂಡ್ರೆ, ರವಿಚಂದ್ರನ್ ಅಶ್ಚಿನ್ 29 ರನ್ ನೀಡಿ 1 ವಿಕೆಟ್ ಪಡೆದುಕೊಂಡಿದ್ದಾರೆ.