India Vs Australia Super-8 : ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ( Indian Cricket Team) ದ ಎ ಗುಂಪಿನಿಂದ ಅಜೇಯವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ಸೂಪರ್-8 ಹಂತದಲ್ಲಿ (Super-8) ಭಾರತ ತಂಡ ಗ್ರೂಪ್-1ರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳ ಜೊತೆ ಸ್ಥಾನ ಪಡೆದಿದೆ.

ಜೂನ್ 20ರಂದು (ಗುರುವಾರ) ಬಾರ್ಬೆಡೋಸ್’ನ ಬ್ರಿಡ್ಜ್’ಟೌನ್’ನಲ್ಲಿ ನಡೆಯಲಿರುವ ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ಭಾರತ ತಂಡದ ಅಪಾಯಕಾರಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಜೂನ್ 22ರಂದು ಆಂಟಿಗುವಾದಲ್ಲಿ ನಡೆಯುವ 2ನೇ ಸೂಪರ್-8 ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ. ಜೂನ್ 24ರಂದು ಸೇಂಟ್ ಲೂಸಿಯಾದಲ್ಲಿ ನಡೆಯುವ 3ನೇ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡದ ಸವಾಲಿಗೆ ಉತ್ತರಿಸಲಿದೆ.
ಇದನ್ನೂ ಓದಿ : Gautam Gambhir: ಗಂಭೀರ್ ಟೀಮ್ ಇಂಡಿಯಾ ಕೋಚ್ ಆದರೆ ಈ ಕ್ರಿಕೆಟಿಗನಿಗೆ ಖುಲಾಯಿಸಲಿದೆ ಅದೃಷ್ಟ!
ಸೂಪರ್-8 ಹಂತದ ಗ್ರೂಪ್-2ರಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ತಂಡಗಳು ಸ್ಥಾನ ಪಡೆದಿವೆ. ಎರಡೂ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಐಸಿಸಿ ಟಿ20 ವಿಶ್ವಕಪ್: ಭಾರತದ ಸೂಪರ್-8 ಪಂದ್ಯಗಳ ವೇಳಾಪಟ್ಟಿ
ಜೂನ್ 20: ಭಾರತ Vs ಅಫ್ಘಾನಿಸ್ತಾನ (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಜೂನ್ 22: ಭಾರತ Vs ಬಾಂಗ್ಲಾದೇಶ (ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ಆಂಟಿಗುವಾ)
ಜೂನ್ 24: ಭಾರತ Vs ಆಸ್ಟ್ರೇಲಿಯಾ (ಡ್ಯಾರೆನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ಸೇಂಟ್ ಲೂಸಿಯಾ)
ಇದನ್ನೂ ಓದಿ : ಸದ್ಯದಲ್ಲೇ ನನಸಾಗಲಿದೆ ಟೀಮ್ ಇಂಡಿಯಾ ಪರ ಆಡುವ ಅಸ್ಸಾಂ ಸ್ಟಾರ್ ಕ್ರಿಕೆಟಿಗ ರಿಯಾನ್ ಪರಾಗ್ ಕನಸು !
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೂಪರ್-8 ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಸೇಂಟ್ ಲೂಸಿಯಾದ ಡ್ಯಾರೆನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಈ ಬಾರಿಯ ಟಿ20 ವಿಶ್ವಕಪ್’ನಲ್ಲಿ ಹೈಸ್ಕೋರಿಂಗ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು.

ಇದನ್ನೂ ಓದಿ : Smriti Mandhana: ಚಿನ್ನಸ್ವಾಮಿಯಲ್ಲಿ ಮನೆಮಗಳು ಸ್ಮೃತಿ ಮಂಧನ ಮತ್ತೊಂದು ಶತಕ, ನಾಯಕಿ ಕೌರ್ ಸೆಂಚುರಿ ಸಂಭ್ರಮ !
ಅಫ್ಘಾನಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ 5 ವಿಕೆಟ್ ನಷ್ಟಕ್ಕೆ 218 ರನ್ ಕಲೆ ಹಾಕಿತ್ತು. ಆಸ್ಟ್ರೇಲಿಯಾ ತಂಡ ಸಾಟ್ಲೆಂಡ್ ವಿರುದ್ಧ 181 ರನ್’ಗಳ ಟಾರ್ಗೆಟ್ ಚೇಸ್ ಮಾಡಿತ್ತು. ಭಾರತ Vs ಆಸ್ಟ್ರೇಲಿಯಾ ಪಂದ್ಯವಲ್ಲದೆ ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ Vs ಇಂಗ್ಲೆಂಡ್ ನಡುವಿನ ಸೂಪರ್-8 ಪಂದ್ಯಗಳು ಸೇಂಟ್ ಲೂಸಿಯಾದ ಡ್ಯಾರೆನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲೇ ನಡೆಯಲಿದ್ದು, ರೋಚಕ ಪಂದ್ಯಗಳನ್ನು ನಿರೀಕ್ಷಿಸಲಾಗಿದೆ.
T20 World Cup 2024 India Vs Australia Super-8 Match at High Scoring Ground