T20 World Cup 2024 Sunil Narine : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League 2024) ವೆಸ್ಟ್ ಇಂಡಿಸ್ ಮಾಜಿ ಆಟಗಾರ ಸುನಿಲ್ ನರೈನ್ (Sunil Narine) ಭರ್ಜರಿ ಆಟದ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿರುವ ಸುನಿಲ್ ನರೈನ್ ಇದೀಗ ವೆಸ್ಟ್ ಇಂಡಿಸ್ ತಂಡಕ್ಕೆ ವಾಪಾಸಾಗಲಿದ್ದು, ವೆಸ್ಟ್ ಇಂಡಿಸ್ ಹಾಗೂ ಅಮೇರಿಕಾದಲ್ಲಿ ನಡೆಯಲಿರುವ T20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ ಎನ್ನಲಾಗುತ್ತಿದೆ.
2019ರ ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಆಟಗಾರ ಸುನಿಲ್ ನರೈನ್ ಕೊನೆಯ ಬಾರಿಗೆ ವೆಸ್ಟ್ ಇಂಡಿಸ್ ತಂಡದ ಪರ ಆಡಿದ್ದರು. ಅಲ್ಲದೇ 2023ರಲ್ಲಿ ನರೈನ್ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಹಲವು ವರ್ಷಗಳಿಂದಲೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಸುನಿಲ್ ನರೈನ್ ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಶತಕ ಸಿಡಿಸಿದ್ದಾರೆ.

ಐಪಿಎಲ್‌ನಲ್ಲಿ ಉತ್ತಮ ಆಟದ ಪ್ರದರ್ಶನ ನೀಡುತ್ತಿದ್ದಂತೆಯೇ ಸುನಿಲ್ ನರೈನ್ ಮುಂಬರುವ ವಿಶ್ವಕಪ್‌ಗಾಗಿ ವೆಸ್ಟ್ ಇಂಡಿಸ್ ತಂಡವನ್ನು ಸೇರ್ಪಡೆ ಆಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಈ ಚರ್ಚೆ, ಮಾತುಗಳಿಗೆ ಸುನಿಲ್ ನರೈನ್ ಸ್ಪಷ್ಟನೆಯನ್ನು ನೀಡಿದ್ದಾರೆ. ಸೈಡ್‌ಲೈನ್ ಚಾಟ್‌ಗೆ ನೀಡಿರುವ ಹೇಳಿಕೆಯಲ್ಲಿ ಸುನಿಲ್ ನರೈನ್ ತಾವು ಅಂತರಾಷ್ಟ್ರೀಯ ಕ್ರಿಕೆಟ್ ಮರಳುವ ಮಾಹಿತಿಯನ್ನು ಅಲ್ಲಗಳೆದಿದ್ದಾರೆ.
ಇದನ್ನೂ ಓದಿ : ಎಂಎಸ್ ಧೋನಿ ದಾಖಲೆಯನ್ನೇ ಹಿಂದಿಕ್ಕಿದ ಕೆಎಲ್ ರಾಹುಲ್ : ಐಪಿಎಲ್ ಇತಿಹಾಸದಲ್ಲೇ ಈ ದಾಖಲೆಯನ್ನೂ ಯಾರು ಮಾಡಿಲ್ಲ
ನರೈನ್ ಅವರು ತಮ್ಮ ಅಂತರಾಷ್ಟ್ರೀಯ ರಿಟರ್ನ್ ಬಗ್ಗೆ ಊಹಾಪೋಹಗಳನ್ನು ಪರಿಹರಿಸಿದ್ದಾರೆ. ವೆಸ್ಟ್ ಇಂಡಿಸ್ ತಂಡದಲ್ಲಿ ತಮಗೆ ಬಾಗಿಲು ಮುಚ್ಚಿರುವುದನ್ನು ಸ್ಪಷ್ಟ ಪಡಿಸಿದ್ದಾರೆ. ಇತ್ತೀಚೆಗಿನ ನನ್ನ ಪ್ರದರ್ಶನಗಳು ನಾನು ನಿವೃತ್ತಿಯಿಂದ ಹೊರಬರಲು ಮತ್ತು ಮುಂಬರುವ T20 ವಿಶ್ವಕಪ್‌ನಲ್ಲಿ ಆಡಬೇಕೆಂದು ಸಾರ್ವಜನಿಕವಾಗಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಲು ಅನೇಕ ಜನರನ್ನು ಪ್ರೇರೇಪಿಸಿದೆ ಎಂದು ನಾನು ನಿಜವಾಗಿಯೂ ಪ್ರಶಂಸೆ ಮತ್ತು ವಿನಮ್ರನಾಗಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : ಟ್ರಾವಿಸ್ ಹೆಡ್ ಆರ್ಭಟಕ್ಕೆ ಮಂಕಾದ ಆರ್‌ಸಿಬಿ : IPL ನಲ್ಲಿ4 ನೇ ವೇಗದ ಶತಕ ದಾಖಲು
ತನ್ನ ನಿವೃತ್ತಿ ನಿರ್ಧಾರದ ಕುರಿತು ಸಮಾಧಾನವನ್ನು ಹೊಂದಿದ್ದೇನೆ. ಈ ಕುರಿತು ನಾನು ಎಂದಿಗೂ ನಿರಾಶನಾಗುವುದಿಲ್ಲ. ವೆಸ್ಟ್ ಇಂಡಿಸ್ ತಂಡವನ್ನು ನಾನು ಎಂದಿಗೂ ಬೆಂಬಲಿಸುತ್ತೇನೆ ಎಂದಿದ್ದಾರೆ. ಸುನಿಲ್ ನರೈನ್ ಒಂದು ಕಾಲದಲ್ಲಿ ವೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದರು. ನಾನಾ ಕಾರಣಗಳಿಂದಾಗಿ ನರೈನ್ ವೆಸ್ಟ್ ಇಂಡಿಸ್ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.

ಐಪಿಎಲ್ ೨೦೨೪ ಪಂದ್ಯಾವಳಿಯಲ್ಲಿ ಸುನಿಲ್ ನರೈನ್ ಒಟ್ಟು 7 ಪಂದ್ಯಗಳನ್ನು ಆಡಿದ್ದು, 176.54 ಸ್ಟ್ರೈಕ್ ರೇಟ್ 40ರ ಸರಾಸರಿಯಲ್ಲಿ 286 ರನ್ ಗಳಿಸಿದ್ದಾರೆ. ಅಲ್ಲದೇ 9 ವಿಕೆಟ್ ಪಡೆಯುವ ಮೂಲಕ ಆಲ್‌ರೌಂಡರ್ ಆಟದ ಪ್ರದರ್ಶನ ನೀಡಿದ್ದಾರೆ. ಇದೇ ಕಾರಣದಿಂದಲೇ ಸುನಿಲ್ ನರೈನ್ ಮತ್ತೊಮ್ಮೆ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಮಾತುಗಳು ಕೇಳಿಬರುತ್ತಿದೆ.
ಇದನ್ನೂ ಓದಿ : ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕ ?
T20 World Cup 2024 Sunil Narine Playing KKR IPL 2024