T20 World Cup Super-8: ನ್ಯೂ ಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಭಾರತ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೆ ಎಂಟ್ರಿ ಕೊಟ್ಟಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 8 ವಿಕೆಟ್ ಗೆಲುವು, 2ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 6 ರನ್ ಗೆಲುವು ಮತ್ತು ಮೂರನೇ ಲೀಗ್ ಪಂದ್ಯದಲ್ಲಿ ಆತಿಥೇಯ ಅಮೆರಿಕ ವಿರುದ್ಧ 7 ವಿಕೆಟ್’ಗಳಿಂದ ಗೆದ್ದಿರುವ ಟೀಮ್ ಇಂಡಿಯಾ ಸತತ 3 ಗೆಲುವು ಗಳೊಂದಿಗೆ ‘ಎ’ ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ.

ಆಡಿರುವ 3 ಪಂದ್ಯಗಳಿಂದ 6 ಅಂಕ ಗಳಿಸಿರುವ ಟೀಮ್ ಇಂಡಿಯಾ, ಜೂನ್ 15ರಂದು ನಡೆಯುವ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಅಮೆರಿಕ ಮಿಯಾಮಿಯಲ್ಲಿರುವ ಲಾಡರ್’ಹಿಲ್ ಮೈದಾನದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯಗಳು ಜೂನ್ 20ರಂದು ಆರಂಭವಾಗಲಿದ್ದು, ಭಾರತ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : IPL Brand Value: ಐಪಿಎಲ್ ಟೂರ್ನಿಯನ್ನೇ ಖರೀದಿ ಮಾಡಲು ಎಷ್ಟು ದುಡ್ಡು ಬೇಕು ಗೊತ್ತಾ?
ಜೂನ್ 22ರಂದು ನಡೆಯುವ 2ನೇ ಸೂಪರ್-8 ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್ ಅಥವಾ ನೇಪಾಳ ತಂಡ ಎದುರಾಳಿಯಾಗುವ ಸಾಧ್ಯತೆಯಿದೆ. ಜೂನ್ 24ರಂದು ನಡೆಯುವ 3ನೇ ಸೂಪರ್-8 ಪಂದ್ಯದಲ್ಲಿ ಭಾರತ ತಂಡಕ್ಕೆ ಏಕದಿನ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡ ಎದುರಾಳಿಯಾಗುವ ಸಾಧ್ಯತೆಯಿದೆ.
ಐಸಿಸಿ ಟಿ20 ವಿಶ್ವಕಪ್: ಸೂಪರ್-8ನಲ್ಲಿ ಭಾರತದ ಸಂಭಾವ್ಯ ಎದುರಾಳಿಗಳು:
Vs ಅಫ್ಘಾನಿಸ್ತಾನ- ಜೂನ್ 20 (ಬಾರ್ಬೆಡೋಸ್, ವೆಸ್ಟ್ ಇಂಡೀಸ್)
Vs ಬಾಂಗ್ಲಾದೇಶ/ನೆದರ್ಲೆಂಡ್ಸ್/ನೇಪಾಳ- ಜೂನ್ 22 (ಆಂಟಿಗಾ, ವೆಸ್ಟ್ ಇಂಡೀಸ್)
Vs ಆಸ್ಟ್ರೇಲಿಯಾ- ಜೂನ್ 24 (ಸೇಂಟ್ ಲೂಸಿಯಾ, ವೆಸ್ಟ್ ಇಂಡೀಸ್)

ಇದನ್ನೂ ಓದಿ : ಟಿ20 ವಿಶ್ವಕಪ್‌ಗಾಗಿ 106 ದಿನಗಳಲ್ಲಿ ರೆಡಿಯಾಗಿದ್ದ ನ್ಯೂ ಯಾರ್ಕ್ ಮೈದಾನ ಸದ್ಯದಲ್ಲೇ ನೆಲಸಮ !
ಒಟ್ಟು ಎಂಟು ತಂಡಗಳು ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಲಿದ್ದು, ಸೂಪರ್-8 ಹಂತದಲ್ಲಿ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಭಾರತ ತಂಡ ಗ್ರೂಪ್-1ರಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ. ಎರಡೂ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಜೂನ್ 27ರಂದು ವೆಸ್ಟ್ ಇಂಡೀಸ್’ನ ಟ್ರಿನಿಡಾಡ್’ನ ಬ್ರಯಾನ್ ಲಾರಾ ಕ್ರೀಡಾಂಗಣ ಮತ್ತು ಗಯಾನದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆಯಲಿವೆ. ಫೈನಲ್ ಪಂದ್ಯ ಜೂನ್ 29ರಂದು ಬಾರ್ಬೆಡೋಸ್’ನ ಬ್ರಿಡ್ಜ್’ಟೌನ್’ನಲ್ಲಿರುವ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ : Exclusive: ಕರ್ನಾಟಕ ಕ್ರಿಕೆಟ್ ತಂಡಕ್ಕೆ ಯರೇ ಗೌಡ ಕೋಚ್, ಪಿ.ವಿ ಶಶಿಕಾಂತ್‌ಗೆ ಗೇಟ್‌ಪಾಸ್!
T20 World Cup Super-8: These are the opponents of Team India in Super-8